Home Mangalorean News Kannada News ಕಿರಣ್ ಕುಮಾರ್ ಉದ್ಯಾವರ ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ

ಕಿರಣ್ ಕುಮಾರ್ ಉದ್ಯಾವರ ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ

Spread the love

ಕಿರಣ್ ಕುಮಾರ್ ಉದ್ಯಾವರ ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ

ಉಡುಪಿ : ಉಡುಪಿ ತಾಲೂಕು ಎಪಿಎಂಸಿ ಸದಸ್ಯರಾದ ಕಿರಣ್ ಕುಮಾರ್ ಉದ್ಯಾವರ ಇವರನ್ನು ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಕಿರಣ್ ಕುಮಾರ್ ಉದ್ಯಾವರ ಇವರು ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ, ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಇದರ ನಿಕಟಪೂರ್ವ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸಿನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ನಾಯಕರ ಶಿಫಾರಸಿನ ಮೇರೆಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಇವರನ್ನು ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸಿನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.


Spread the love

Exit mobile version