ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ

Spread the love

ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ

ಜೇಡರ ಹೊಸ ನಡವಳಿಕೆಯನ್ನು ಮೊದಲ ಬಾರಿಗೆ ಚಿತ್ರೀಕರಿಸಲಾಗಿದೆ
• ಜೇಡರ ನಡವಳಿಕೆ ಪತ್ತೆಗೆ ನೆರವಾದ ಸೋಶಿಯಲ್ ಮಿಡಿಯಾ
• ಕೀಟ ನಿಯಂತ್ರಣದ ಜೈವಿಕ ವಿಧಾನಗಳಲ್ಲಿ ಸಹಾಯ ಮಾಡುವ ಕಾರಣದಿಂದಾಗಿ ಈ ಪತ್ತೆ ಗಮನಾರ್ಹವಾಗಿದೆ
• ದಕ್ಷಿಣ ಕನ್ನಡಿಗ ಡಾ. ಕೃಷ್ಣ ಮೋಹನ್ ಈ ಅಧ್ಯಯನದಲ್ಲಿರುವ ತಜ್ಞರಲ್ಲಿ ಒಬ್ಬರು

ಸಾಮಾಜಿಕ ಮಾಧ್ಯಮದ ದುರುಪಯೋಗದ ವ್ಯಾಪಕ ದೂರುಗಳು ಇರುವ ಸಮಯದಲ್ಲಿ, ಸೋಶಿಯಲ್ ಮಿಡಿಯಾ ಒಂದು ವಿಶಿಷ್ಟವಾದ ಜಾತಿಯ ಜೇಡಗಳ ನಡವಳಿಕೆಗಳ ಬಗ್ಗೆ ವೈಜ್ಞಾನಿಕ ಜ್ಞಾನವನ್ನು ಬೆಳೆಸುವಲ್ಲಿ ಉಪಯುಕ್ತ ಮಾಹಿತಿಯನ್ನು ಒದಗಿಸಿದೆ.

ಫೇಸ್ಬುಕ್ ಬಳಕೆದಾರರ ಗಂಭೀರವಾದ ಪರಿಶೀಲನೆಯಿಂದಾಗಿ ದೇಶದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾದ ಫೇಸ್ ಬುಕ್ ದಕ್ಷಿಣ ಏಷ್ಯಾದ ವಿಶಿಷ್ಟ ಜೇಡ ಜಾತಿಯಾದ ಹೈಲಸ್ ಸೆಮಿಕ್ಯುಪ್ರಸ್ ಕೀಟದ ಮೊಟ್ಟೆಗಳನ್ನು ಆಹಾರವಾಗಿ ತಿನ್ನುವುದನ್ನು ಮೊದಲ ಬಾರಿಗೆ ದಾಖಲೀಸಲಾಗಿದೆ.

ಈ ಜಾತಿಯ ಜೇಡರ ನಡವಳಿಕೆಯು ಹೊಸ ಆವಿಷ್ಕಾರವಾಗಿದ್ದು, ಆಂಧ್ರಪ್ರದೇಶದ ವನ್ಯಜೀವಿ ಛಾಯಾಚಿತ್ರಗ್ರಾಹಕರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಮುಂಬೈ ಮೂಲದ ಸಂಶೋಧಕರ ತಂಡ ಇದನ್ನು ವದರಿ ಮಾಡಿದೆ. ಇದು ಕೀಟ ನಿಯಂತ್ರಣದ ಜೈವಿಕ ವಿಧಾನವನ್ನು ಪರಿಣಾಮಕಾರಿ ಮಾಡಲು ಈ ಸಂಶೋಧನೆ ಸಹಾಯ ಮಾಡುವ ಕಾರಣದಿಂದ ಇದು ಮಹತ್ವ ಪಡೆದುಕೊಂಡಿದೆ.

ಈ ಸಂಶೋಧನೆಯನ್ನು ಜಂಪಿಂಗ್ ಜೇಡಗಳ ಅಧ್ಯಯನಕ್ಕೆ ಮೀಸಲಾಗಿರುವ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾದ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕವಾದ ‘ಪೆಕ್ಹ್ಯಾಮಿಯಾ’ಯದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಈ ಅಧ್ಯಯನವು ಜಂಪಿಂಗ್ ಜೇಡಗಳ ಮೇಲೆ ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮಾಡುತ್ತಿರುವ ಡಾ. ಡೇವಿಡ್ ಇ. ಹಿಲ್ ಮತ್ತು ಡಾ. ರಿಚರ್ಡ್ ಜೆ. ಪಿಯರ್ಸ್ ಎಂಬ ಪ್ರಮುಖ ಬ್ರಿಟಿಷ್ ಸ್ಪೈಡರ್ ತಜ್ಞರ ಸಹಯೋಗ ಪಡೆದುಕೊಂಡಿತ್ತು. ಸಂಶೋಧನಾ ವರದಿಯನ್ನು ಪ್ರಧಾನ ಲೇಖಕ ಮತ್ತು ಪ್ರಮುಖ ಸಂಶೋಧಕ ಜಾವೆದ್ ಅಹ್ಮದ್ ನೇತೃತ್ವದಲ್ಲಿ ಸಹ-ಸಂಶೋಧಕರು ರಾಜಾಶ್ರೀ ಖಲಾಪ್ ಮತ್ತು ಮೂಡಬಿದ್ರೆ ಮೂಲದ ಡಾ. ಕೃಷ್ಣ ಮೋಹನ್ ಅವರ ತಂಡ ಸಿದ್ಧಪಡಿಸಿತ್ತು. ವನ್ಯಜೀವಿ ಛಾಯಾಗ್ರಾಹಕ ಎ.ಎನ್. ಸುರೇಶ್ ಕುಮಾರ್ ಅವರು ಇದನ್ನು ಮೊದಲಿಗೆ ದಾಖಲಿಸಿದ್ದು, ಅನಂತರ ಸಂಷೋಧನಾ ತಂಡದೊಂದಿಗ ಪಂಚಿಕೊಂಡಿದ್ದರು.

ಸಂಶೋಧನೆ
ಹೈಲಸ್ ಸೆಮಿಕ್ಯುಪ್ರಸ್ ಒಂದು ದೊಡ್ಡ, ವರ್ಣರಂಜಿತ ಕಂಚಿನ ಬಣ್ಣದ ಜಂಪಿಂಗ್ ಸ್ಪೈಡರ್ ಆಗಿದೆ. ಇದು ಮೊದಲು ಮುಂಬೈಯಿಂದ 2015 ರಲ್ಲಿ ಮೊದಲ ಬಾರಿಗೆ ದಾಖಲಾಗಿದೆ ಮತ್ತು ಮಹಾರಾಷ್ಟ್ರ, ವಿಶೇಷವಾಗಿ ರಾಯ್ಗಡ್ ಜಿಲ್ಲೆಯಲ್ಲೂ ಇದನ್ನು ಛಾಯಾಚಿತ್ರಗಳನ್ನು ತೆಗೆಲಾಗಿದೆ. ಜೇಡವನ್ನು ಸುಲಭವಾಗಿ ಛಾಯಾಚಿತ್ರಗಳಿಂದ ಗುರುತಿಸಬಹುದು ಮತ್ತು ಸಣ್ಣ ಕೀಟಗಳನ್ನು ಆಹಾರವನ್ನು ತಿನ್ನುವುತ್ತದೆ.

ಇತ್ತೀಚೆಗೆ ವನ್ಯಜೀವಿ ಛಾಯಾಗ್ರಾಹಕ ಮತ್ತು ಪರಿಸರವಾದಿ ಎ.ಎನ್. ಸುರೇಶ್ ಕುಮಾರ್ ಅವರು ಆಂಧ್ರಪ್ರದೇಶದ ತಮ್ಮ ಜಮೀನಿನಲ್ಲಿ ಸಣ್ಣ ಕೀಟಗಳ ಮೊಟ್ಟೆಗಳನ್ನು ಈ ಜೇಡವು ಆಹಾರವಾಗಿ ತಿನ್ನುವುದನ್ನು ಗಮನಿಸಿದ್ದರು. ಇಂತಹ ಫೆÇೀಟೊಗಳನ್ನು ತೆಗೆದ ಅವರು ಅದರ ಮಹತ್ವ ಗೊತ್ತಿಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಉಪಖಂಡದ ಜೇಡರು ಎಂಬ ಫೇಸ್ಬುಕ್ ಗ್ರೂಪಿನಲ್ಲಿ ಪೆÇೀಸ್ಟ್ ಮಾಡಿದ್ದರು.

ಇದನ್ನು ಗಮನಿಸಿದ ಜಾವೇದ್ ಆಹ್ಮದ್ ಅವರು ಛಾಯಾಗ್ರಹಾಕರು ಇನ್ನಷ್ಟು ಫೆÇೀಟೋಗಳನ್ನು ದಾಖಲಿಸುವಂತೆ ಪೆÇ್ರೀತ್ಸಾಹ ನೀಡಿದಲಿಲ್ದೆ ಅಂತಾರಾಷ್ಟ್ರೀಯ ಸಂಶೋಧಕರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಈ ಹೊಸ ಸಂಶೋಧನೆಯಿಂದ ಕೃಷಿಗೆ ಅಪಾಯಕಾರಿಯಾದ ಕೀಟಗಳ ನಿಯಂತ್ರಣದಲ್ಲಿ ಈ ಪ್ರಭೇದದ ಜೇಡರ ನಡವಳಿಕೆಗಳು ಬಹುಪಯೋಗಿಯಾಗಿವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.


Spread the love