ಕುಂದಾಪುರದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮಾನಸಿಕ ಅಸ್ವಸ್ಥ
ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಘಟನೆ ಸೋಮವಾರ ಬೆಳಿಗ್ಗೆ ಜರುಗಿದೆ.
ಪಾಕಿಸ್ತಾನ ಪರ ಘೋಷಣೆ ಕೂಗಿತಾಗ ಮಾನಸಿಕ ಅಸ್ವಸ್ಥನಾಗಿದ್ದು, ಕುಂದಾಪುರ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ ( 43 ) ಎಂದು ಗುರುತಿಸಲಾಗಿದೆ.
ರಾಘವೇಂದ್ರ ಗಾಣಿಗ ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ವೈದ್ಯರಲ್ಲಿ ಚಿಕಿತ್ಸೆ ಪಡೆದಿರುತ್ತಾನೆ. ಸೋಮವಾರ ಕೂಡ ಬೆಳಿಗ್ಗೆ ಕುಂದಾಪುರ ಮಾತಾ ಹಾಸ್ಪಿಟಲ್ ಗೆ ಮಾನಸಿಕ ಚಿಕಿತ್ಸೆ ಕರೆತಂದಾಗ ತಪ್ಪಿಕೊಂಡಿದ್ದು, ಅಲ್ಲಿಂದ ತಾಲೂಕು ಪಂಚಾಯತ್ ಕಛೇರಿ ಎದುರು ಬಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಠಾಣಧಿಕಾರಿ ಹರೀಶ್ ನಾಯ್ಕ್ ಅವರು ರಾಘವೇಂದ್ರ ಗಾಣಿಗನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ರಾಘವೇಂದ್ರ ಗಾಣಿಗ ಈ ಹಿಂದೆ ಕುಂದಾಪುರದ ಕಾಲೇಜೊಂದರಲ್ಲಿ ಹಿಂದಿ ಶಿಕ್ಷಕ ನಾಗಿದ್ದು, ಈತ ದಿನ ಟಿವಿ ನೋಡುವ ಗೀಳು ಬೆಳೆಸಿಕೊಂಡಿದ್ದ ಎನ್ನಲಾಗಿದೆ.