ಕುಂದಾಪುರದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಉಪವಿಭಾಗಾಧಿಕಾರಿ ಕೆ ರಾಜು ಅವರಿಂದ ಧ್ವಜಾರೋಹಣ

Spread the love

ಕುಂದಾಪುರದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಉಪವಿಭಾಗಾಧಿಕಾರಿ ಕೆ ರಾಜು ಅವರಿಂದ ಧ್ವಜಾರೋಹಣ

ಕುಂದಾಪುರ: ಅಹಿಂಸೆ, ಸತ್ಯಾಗ್ರಹದ ಮೂಲಕ ವಿಶ್ವಕ್ಕೆ ಹೊಸ ಹೋರಾಟದ ದಿಕ್ಕು ತೋರಿಸಿದ ಹೆಮ್ಮೆಯ ದೇಶ ನಮ್ಮದು. ಸ್ವತಂತ್ರ್ಯ. ನಂತರದ ದಿನಗಳಲ್ಲಿ ಎದುರಾದ ಹಲವಾರು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಶ್ರೇಷ್ಠತೆ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಹೇಳಿದರು.

ಅವರು ಶನಿವಾರ ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸರಳವಾಗಿ ನಡೆದ 74 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸ್ವಾತಂತ್ರ್ಯ ಸಂದೇಶ ಸಾರಿದರು.

ಪರಕೀಯರ ಆಳ್ವಿಕೆಯಿಂದ ಮುಕ್ತವಾಗಿ ಸುಂದರ- ಶಾಂತಿಯುತ ಜೀವನಕ್ಕೆ ತಮ್ಮ ಬದುಕನ್ನೆ ಮುಡಿಪಾಗಿಟ್ಟ ಅನೇಕ ಮಹನೀಯರ ಬಲಿದಾನ ಸ್ಮರಿಸುವ ದಿನವಿಂದು. ಸ್ವಾತಂತ್ರ್ಯದ ಆಶಯಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುವ ಪ್ರಶಸ್ತ ಸಮಯ ಇದಾಗಿದೆ. ಅತ್ಯಂತ ಸಂಭ್ರದ ನಡುವೆಯೂ ಇಡೀ ಪ್ರಪಂಚ ಕರೋನಾ ಸಾಂಕ್ರಾಮಿಕ ಸವಾಲು ಎದುರಿಸುತ್ತಿದ್ದು, ನಾವುಗಳು ಸ್ವಯಂ ಜಾಗೃತಿ, ಸಾಮಾಜಿಕ ಅಂತರ, ಮುಖಗವಸು ಧಾರಣೆಯಂತಹ ಸರ್ಕಾರಸ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೊರೋನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಷ್ಟದ ದಿನಗಳಲ್ಲಿ ಕೊರೋನಾ ಸೈನಿಕರಂತೆ ದುಡಿದ ಎಲ್ಲರ ಸೇವೆ ಶ್ಲಾಘನೀಯ ಎಂದರು.

ಸ್ವಾತಂತ್ರ್ಯ ಸಂಗ್ರಾಮ, ಜಲಿಯನ್ ವಾಲಾಬಾಗ್ ದಿನಾಚರಣೆ, ಉಪ್ಪಿನ ಸತ್ಯಾಗ್ರಹದಲ್ಲಿ ಕುಂದಾಪುರವೂ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮುಕುಂದ ಪೈ, ಶಿವರಾಮ ಕಾರಂತ, ಕೃಷ್ಣರಾವ್ ಕೊಡಗಿ, ಅಣ್ಣಪ್ಪ ಕಾರಂತರಂತಹ ಅನೇಕ ಮಹನೀಯರ ಪಾತ್ರ ಮಹತ್ತರವಾದುದು. 1934ರಲ್ಲಿ ಗಾಂಧೀಜಿಯವರು ಅಸ್ಪೃಶ್ಯತಾ ಚಳುವಳಿ ಸಲುವಾಗಿ ಕುಂದಾಪುರದಲ್ಲಿ ಭಾಷಣ ಮಾಡಿರುವುದನ್ನು ಸ್ಮರಿಸಿದ ಅವರು, ಕುಂದಾಪುರ ಉಪ ವಿಭಾಗದಲ್ಲಿ ಆದ್ಯತೆ ನೆಲೆಯಲ್ಲಿ ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳ ಪ್ರಗತಿಗೆ ರೂಪಿಸಲು ನೀಲ ನಕಾಶೆ ಸಿದ್ಧಪಡಿಸಲಾಗಿದೆ ಎಂದರು.

ಕೊರೋನಾ ಸೈನಿಕರಿಗೆ ಸನ್ಮಾನ
ವೈದ್ಯರಾದ ತಾ| ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ| ರಾಬರ್ಟ್ ರೆಬೆಲ್ಲೋ, ಅರವಳಿಕೆ ತಜ್ಞ ಡಾ| ವಿಜಯ ಶಂಕರ, ಕಂಡ್ಲೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಲತಾ ನಾಯಕ್, ಶುಶ್ರೂಷಕಿಯರಾದ ಆಶಾ ಸುವರ್ಣ, ದೀಪ್ತಿ ಫೆರ್ನಾಂಡೀಸ್, ಆಶಾ ಕಾರ್ಯಕರ್ತೆಯರಾದ ಶಶಿಕಲಾ ಕುಂದಾಪುರ, ಗಾಯತ್ರಿ ಶಂಕರನಾರಾಯಣ, ಎಎಸ್ಐ ಆಚಾರ್ಯರಾಜ್ ಗಣಪತಿ ಶಂಕರನಾರಾಯಣ, ಪೆÇಲೀಸ್ ಸಿಬಂದಿ ಪ್ರಸನ್ನ ಕುಂದಾಪುರ, ಕಂದಾಯ ಇಲಾಖೆಯ ಶಿವಶಂಕರ್, ಶಿವರಾಯ, ವಿಘ್ನೇಶ ಉಪಾಧ್ಯ, ಪೌರ ಕಾರ್ಮಿಕರಾದ ಶಂಕರ, ಅಶೋಕ, ಪಿಡಿಒ ತೇಜಪ್ಪ ಕುಲಾಲ್, ಕೊರೊನಾ ಗೆದ್ದ ರಾಜೇಶ, ಸತೀಶ್ ನಾಯ್ಕ್, ಸ್ಕೌಟ್- ಗೈಡ್ಸ್ನ ನಿರೀಕ್ಷಿತ, ವಿಜಿತ್, ಶಮಂತ್, ನಾಗರಾಜ ಡಿ. ಅವರನ್ನು ಸಮ್ಮಾನಿಸಲಾಯಿತು.

ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ, ಕುಂದಾಪುರ ಉಪ ವಿಭಾಗದ ಸಹಾಯಕ ಪೆÇಲೀಸ್ ಅಧೀಕ್ಷಕ ಹರಿರಾಂ ಶಂಕರ್, ತಾ.ಪಂ. ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷೆ ಗುಣರತ್ನಾ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್ ವಿ., ಸಂತೋಷ್ ಕುಮಾರ್ ಶೆಟ್ಟಿ, ಸಂದೀಪ್ ಖಾರ್ವಿ, ರಾಘವೇಂದ್ರ ಖಾರ್ವಿ, ವೀಣಾ ಭಾಸ್ಕರ್, ಶ್ವೇತಾ ಸಂತೋಷ್, ವನಿತಾ ಎಸ್. ಬಿಲ್ಲವ, ಶ್ರೀಧರ ಶೇರೆಗಾರ್, ನಗರ ಠಾಣೆ ಎಸ್ಐ ಹರೀಶ್ ಆರ್., ಗ್ರಾಮಾಂತರ ಠಾಣೆ ಎಸ್ಐ ರಾಜ್ಕುಮಾರ್, ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖಾ ಸಿಬಂದಿ, ಜನಪ್ರತಿನಿಧಿಗಳು, ಶಿಕ್ಷಕರು, ಕೊರೊನಾ ವಾರಿಯರ್ಸ್ ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್ ಕೆ.ಬಿ. ಆನಂದಪ್ಪ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ ನಗರಠಾಣೆಯ ಪಿಎಸ್ಐ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸರ ದ್ವಜವಂದನೆ ನಡೆಯಿತು.


Spread the love