Home Mangalorean News Kannada News ಕುಂದಾಪುರ: ಖಾಸಗಿ ಬಸ್ಸಿನಲ್ಲಿ ಜಿಲ್ಲಾಧಿಕಾರಿ ಆದೇಶ ಮೀರಿ ಹೆಚ್ಚು ಪ್ರಯಾಣಿಕರ ಸಾಗಾಟ – 2 ಪ್ರಕರಣ...

ಕುಂದಾಪುರ: ಖಾಸಗಿ ಬಸ್ಸಿನಲ್ಲಿ ಜಿಲ್ಲಾಧಿಕಾರಿ ಆದೇಶ ಮೀರಿ ಹೆಚ್ಚು ಪ್ರಯಾಣಿಕರ ಸಾಗಾಟ – 2 ಪ್ರಕರಣ ದಾಖಲು

Spread the love

ಕುಂದಾಪುರ: ಖಾಸಗಿ ಬಸ್ಸಿನಲ್ಲಿ ಜಿಲ್ಲಾಧಿಕಾರಿ ಆದೇಶ ಮೀರಿ ಹೆಚ್ಚು ಪ್ರಯಾಣಿಕರ ಸಾಗಾಟ – 2 ಪ್ರಕರಣ ದಾಖಲು

ಕುಂದಾಪುರ: ಖಾಸಗಿ ಬಸ್ಸಿನಲ್ಲಿ ನಿಗದಿ ಪಡಿಸಿದ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕುಳ್ಳಿರಿಸಿ ಸಂಚರಿಸುವಂತೆ ಜಿಲ್ಲಾಧಿಕಾರಿಯವರ ಆದೇಶವನ್ನು ಮೀರಿ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ದ ವಿಚಾರಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮೊದಲ ಪ್ರಕರಣದಲ್ಲಿ ಕುಂದಾಪುರ ಕಂದಾಯ ನಿರೀಕ್ಷಕರಾದ ಭರತ್ ವಿ ಶೆಟ್ಟಿ ಅವರು ಜೂನ್ 10 ರಂದು ಕುಂದಾಪುರ ಕಸಬಾ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶಿವಶಂಕರ ರವರೊಂದಿಗೆ ಕರ್ತವ್ಯದಲ್ಲಿರುವಾಗ ಕುಂದಾಪುರ ಸಂಗಂ ಜಂಕ್ಷನ್ ಬಳಿ ಖಾಸಗಿ ಬಸ್ಸಿನಲ್ಲಿ 40 ಜನ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡಿದ್ದು, ಚಾಲಕ ದಿನಕರ ಮತ್ತು ನಿರ್ವಾಹಕರಾದ ಪ್ರವೀಣ್ರವರು ಬಸ್ಸನ್ನು ಕುಂದಾಪುರದಿಂದ ಸಿದ್ದಾಪುರ ಕಡೆಗೆ ಹೋಗಲು ನಿಲ್ಲಿಸಿದ್ದು ಸರ್ವಿಸ್ ಬಸ್ನಲ್ಲಿ ನಿಗದಿ ಪಡಿಸಿದ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕುಳ್ಳಿರಿಸಿ ಸಂಚರಿಸುವಂತೆ ಇರುವ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿದ್ದಾರೆ.

ಎರಡನೇ ಪ್ರಕರಣದಲ್ಲಿ ಕೂಡ ಕುಂದಾಪುರ ಕಂದಾಯ ನಿರೀಕ್ಷಕರಾದ ಭರತ್ ವಿ ಶೆಟ್ಟಿ ಅವರು ಜೂನ್ 10 ರಂದು ಕುಂದಾಪುರ ಕಸಬಾ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶಿವಶಂಕರ ರವರೊಂದಿಗೆ ಕರ್ತವ್ಯದಲ್ಲಿರುವಾಗ ಖಾಸಗಿ ಬಸ್ಸಿನಲ್ಲಿ ಬಸ್ಸಿನಲ್ಲಿ 44 ಜನ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡಿದ್ದು, ಆಪಾದಿತರಾದ ಚಾಲಕ ರವೀಂದ್ರ ಮತ್ತು ನಿರ್ವಾಹಕನಾದ ರವಿರಾಜ್ ಶೆಟ್ಟಿರವರು ಬಸ್ಸನ್ನು ಕುಂದಾಪುರದಿಂದ ಕೇರಾಡಿ ಕಡೆಗೆ ಹೋಗಲು ನಿಲ್ಲಿಸಿದ್ದು ಸರ್ವಿಸ್ ಬಸ್ನಲ್ಲಿ ನಿಗದಿ ಪಡಿಸಿದ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕುಳ್ಳಿರಿಸಿ ಸಂಚರಿಸುವಂತೆ ಇರುವ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.

ದೂರನ್ನು ಸ್ವೀಕರಿಸಿರುವ ಕುಂದಾಪುರ ಪೊಲೀಸರು ಎರಡು ಬಸ್ಸಿನ ಚಾಲಕ ಮತ್ತು ನಿರ್ವಾಹಕರ ವಿರುದ್ದ ಕಲಂ: 269, 188, ಜೊತೆಗೆ 34 ಐಪಿಸಿ ಮತ್ತು 51(ಬಿ), Disaster management act 2005 & ಕಲಂ 3 Epidemimic Disester Act 1897 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

Exit mobile version