Home Mangalorean News Kannada News ಕುಂದಾಪುರ: ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕುಂದಾಪುರ: ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು

Spread the love

ಕುಂದಾಪುರ: ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕುಂದಾಪುರ: ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಕುಂದಾಪುರ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಶುಕ್ರವಾರದಂದು ಕುಂದಾಪುರ ಠಾಣಾ ಚೇತನ್ ರವರಿಗೆ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ದೊಡ್ಡೋಣಿ ರಸ್ತೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯನ್ನು ಹರಿಶ್ ಆರ್, ಪಿಎಸ್ಐ ಕುಂದಾಪುರ ಪೊಲೀಸ್ ಠಾಣೆ ರವರಿಗೆ ತಿಳಿಸಿದ್ದು, ಅದರಂತೆ ಇವರು ಸ್ಥಳಕ್ಕೆ ದಾಳಿ ನಡೆಸಿ, ಆರೋಪಿತರ ದಸ್ತಗಿರಿ ಮಾಡಿ ತನಿಖೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದು, ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ದೊಡ್ಡೋಣಿ ರಸ್ತೆಯ ಸರಸ್ವತಿ ಕಲ್ಯಾಣ ಮಂಟಪದ ಬಳಿ ಸಾರ್ವಜನಿಕ ಸ್ಥಳದಲ್ಲಿ 6 ಜನರು ಸುತ್ತುವರಿದು ಕುಳಿತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಇಸ್ಫಿಟ್ ಎಲೆಗಳನ್ನು ಹಳೆಯ ದಿನಪತ್ರಿಕೆ ಮೇಲೆ ಹಾಕುತ್ತಿದ್ದು, ಆಪಾದಿತರು ತಮ್ಮ ಸ್ವಂತ ಲಾಭಕೊಸ್ಕರ ಹಣವನ್ನು ಪಣವಾಗಿಟ್ಟುಕೊಂಡು ಇಸ್ಫೀಟ್ ಎಲೆಗಳ ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದವರನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಇಬ್ಬರು ಆರೋಪಿತರಾದ ನಟರಾಜ (33) ವಸಂತ್ (31), ಶೇಖರ ಕೊಟೇಶ್ವರ, ಶಂಕರ ಗೌಡ, ಬಸ್ರೂರು, ಯಾಕೂಬ್ ವಕ್ವಾಡಿ, ಬಾಸ್ಕರ ಕುಂಬಾಶಿ ಇವರನ್ನು ವಶಕ್ಕೆ ಪಡೆದು ಉಳಿದ ನಾಲ್ಕು ಜನ ಆರೋಪಿತರು ಓಡಿ ಹೋಗಿರುತ್ತಾರೆ.

ಆರೋಪಿತರನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದು ಆರೋಪಿತರಿಂದ ನಗದು ರೂಪಾಯಿ 2525/-,  ಒಂದು ಓಮಿನಿ ಕಾರು ಮತ್ತು ಮೂರು ಮೋಟಾರು ಸೈಕಲ್ ನ್ನು ಸ್ವಾದೀನಪಡಿಸಿಕೊಂಡಿದ್ದು ಅವುಗಳ ಅಂದಾಜು ಮೌಲ್ಯ 1,75,000/ ಆಗಿರುತ್ತದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

Exit mobile version