Home Mangalorean News Kannada News ಕುಂದಾಪುರ: ಜೆಪಿ ಹೆಗ್ಡೆ ಪರ ಸ್ವಂತ ಖರ್ಚಿನಲ್ಲಿ ಫೀಲ್ಡಿಗಿಳಿದ ಯುವಕರು!

ಕುಂದಾಪುರ: ಜೆಪಿ ಹೆಗ್ಡೆ ಪರ ಸ್ವಂತ ಖರ್ಚಿನಲ್ಲಿ ಫೀಲ್ಡಿಗಿಳಿದ ಯುವಕರು!

Spread the love

ಕುಂದಾಪುರ: ಜೆಪಿ ಹೆಗ್ಡೆ ಪರ ಸ್ವಂತ ಖರ್ಚಿನಲ್ಲಿ ಫೀಲ್ಡಿಗಿಳಿದ ಯುವಕರು!

ಕುಂದಾಪುರ: ಕರಾವಳಿಯಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತೆಯೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ಸುಮಾರು ಮೂವತ್ತಕ್ಕೂ ಅಧಿಕ ಯುವಕರು ತಮ್ಮ ಸ್ವಂತ ಖರ್ಚಿನಿಂದಲೇ ಮನೆ-ಮನೆಗೆ ತೆರಳಿ ಜೆ.ಪಿ ಹೆಗ್ಡೆಯವರ ಪರ ಪ್ರಚಾರ ಮಾಡಿ ಗಮನ ಸೆಳೆದಿದ್ದಾರೆ.

ಕುಂದಾಪುರ ಪುರಸಭಾ ವ್ಯಾಪ್ತಿಯ ಫಿಶ್ ಮಾರ್ಕೆಟ್ ವಾರ್ಡ್ ನ ಯುವಕರು ಪಕ್ಷದಿಂದ‌ ಪ್ರಚಾರಕ್ಕೆ ಒಂದಿನಿತು ಹಣ ಪಡೆಯದೇ ತಮ್ಮ ದುಡಿಮೆಯ ಹಣವನ್ನು ವ್ಯಯಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಹೆಗ್ಡೆಯವರ ಪರ ಮತ ಯಾಚನೆ ಮಾಡಿದ್ದಾರೆ.

ಸದಾ ಕಾಲವೂ ಕಾರ್ಯಕರ್ತ ಪರವಾಗಿರುವ, ದೂರದೃಷ್ಠಿ ಚಿಂತನೆಯುಳ್ಳ, ಪ್ರಾಮಾಣಿಕ ರಾಜಕಾರಣಿ ಜಯಪ್ರಕಾಶ್ ಹೆಗ್ಡೆಯವರ ಪರ ಮತ ಯಾಚನೆ ಮಾಡಿದ್ದು, ಜೆ.ಪಿ ಹೆಗ್ಡೆ ಪರ ಉತ್ತಮ ವಾತಾವರಣವಿದೆ. ಹೋದಲೆಲ್ಲಾ ಅವರ ಗೆಲುವಿಗೆ ಅನೇಕರು ಹಾರೈಸಿದ್ದಾರೆ. ಜಯಪ್ರಕಾಶ ಹೆಗ್ಡೆಯವರು ಸಂಸದರಾಗಿ ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡಲಿದ್ದಾರೆ ಎಂದು ಯುವಕರು ಪ್ರತಿಕ್ರಿಯಿಸಿದ್ದಾರೆ.


Spread the love

Exit mobile version