ಕುಂದಾಪುರ: ವಸತಿಗೃಹದಲ್ಲಿ ಮಹಿಳೆಯ ನಿಗೂಢ ಸಾವಿನ ಪ್ರಕರಣ ಭೇಧಿಸಿದ ಪೋಲಿಸರು;ಆರೋಪಿಗಳ ಬಂಧನ

Spread the love

ಕುಂದಾಪುರದ ವಸತಿಗೃಹದಲ್ಲಿ ಎಪ್ರಿಲ್ 16ರಂದು ನಿಗೂಡವಾಗಿ ಸಾವನಪ್ಪಿದ ಗಂಗೊಳ್ಳಿ ಮಹಿಳೆ ಲಲಿತಾ ದೇವಾಡಿಗ ಸಾವಿನ ರಹಸ್ಯವನ್ನು ಪೋಲಿಸರು ಬಯಲು ಮಾಡಿದ್ದು, ಕೊಲೆಗೆ ಕಾರಣನಾದ ಅಜರ್ ಅಫಜಲ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ

ಈ ಕುರಿತು ಕುಂದಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಗುಜರಾತ್ ಮೂಲದ ಅಜರ್ ಲಲಿತಾದೇವಾಡಿಗ ಅವರನ್ನು ಕುತ್ತಿಗೆಗೆ ವಯರ್ ಮೂಲಕ ಬಿಗಿದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರಂಭದಲ್ಲಿ ಆಕೆ ಹೃದಯಾಘಾತದಿಂದ ಸಾವನಪ್ಪಿರಬಹುದು ಎಂದು ಭಾವಿಸಿದ್ದರು ಕುತ್ತಿಗೆಯಲ್ಲಿ ಕಂಡು ಬಂದ ಬಿಗಿತದ ಗುರುತು ಕೊಲೆ ಎನ್ನುವ ಸಂಶಯಕ್ಕೆ ಕಾರಣವಾಯಿತು. ಪ್ರಕರಣದ ಬಳಿಕ ನಾಪತ್ತೆಯಾದ ಅಜರ್ ಮೂರು ರಾಜ್ಯಗಳಲ್ಲಿ ಸುತ್ತಾಡಿಕೊಂಡಿದ್ದು ಕೊನೆಗೆ ಮುಂಬೈ ರೈಲು ನಿಲ್ದಾಣದಲ್ಲಿ ಆರೋಫಿಯನ್ನು ಬಂಧಿಸಲಾಯಿತು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ಠಾಣಾಧಿಕಾರಿ ನಾಸಿರ್ ಹುಸೇನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಯಿತು ಎಂದರು.

mahile prakarana

ಗುಜರಾತ್ ನಿವಾಸಿ ಅಜರ್ ಮುಂಬೈ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಅದೇ ಸಮಯದಲ್ಲಿ ಲಲಿತಾ ದೇವಾಡಿಗರ ಮಗಳ ವೈಷ್ಣವಿ ಅಲಿಯಾಸ್ ಶೋಭಾ ಅವರನ್ನು ಪ್ರೀತಿಸುತ್ತಿದ್ದ ಆದರೆ ಇದರ ಬಗ್ಗೆ ತಿಳಿಯದೆ ವೈಷ್ಣವಿ ಜಯಶೀಲಾ ಎನ್ನುವ ಯುವಕನ್ನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಬಳಿಕ ಅಜರ್ ಅಲ್ಲಿ ಕೆಲಸ ಬಿಡುತ್ತಾನೆ. ಇತ್ತೀಚಿನ ವರ್ಶಗಳಲ್ಲಿ ಮತ್ತೆ ಅಜರ್ ಯಾನೆ ಅಜರ್ ಲಲಿತಾ ದೇವಾಡಿಗ ಕುಟುಂಬದ ಪರಿಚಯ ಮಾಡಿಕೊಂಡು ಅವರ ಕುಟುಂಬದ ಒರ್ವ ಸದಸ್ಯನಂತೆ ಆಪ್ತನಾಗಿ ಅವರ ಕುಟುಂಬದ ಜೊತೆ ತಿರುಗಾಡಲು ಹೋಗುತ್ತಾನೆ ಈ ನಡುವೆ ವೈಷ್ಣವಿಯಲ್ಲಿ ತಾನು ಪ್ರೀತಿಸುವ ವಿಷಯವನ್ನು ತಿಳಿಸುತ್ತಾನೆ ಆಕೆಯೂ ಅಜರ್ ಪ್ರೇಮಕ್ಕೆ ಒಪ್ಪುತ್ತಾಳೆ ಮದುವೆಯಾಗುವ ವಿಚಾರವನ್ನು ಆತ ಹೇಳಿದಾಗ ನನ್ನ ತಾಯಿಯನ್ನು ಒಪ್ಪಿಸು ಎನ್ನುತ್ತಾಳೆ, ಅದೇ ರೀತಿ ತಾಯಿಯನ್ನು ಒಪ್ಪಿಸಲು ಕುಂದಾಪುರಕ್ಕೆ ಬರುತ್ತಾನೆ.

ಅದರಂತೆ ಎಪ್ರಿಲ್ 4 ರಂದು ಕುಂದಾಪುರದ ವಸತಿ ಗೃಹವೊಂದರಲ್ಲಿ ಕೋಣೆಯನ್ನು ಆಧಾರ್ ಕಾರ್ಡ್ ದಾಖಲೆಯನ್ನಾಗಿ ಇಟ್ಟು ಅಜರ್ ಬಾಡಿಗೆಗೆ ಪಡೆಯುತ್ತಾನೆ. ಎಪ್ರಿಲ್ 15ರಂದು ಲಲಿತಾರೊಂದಿಗೆ ಊಟ ಮಾಡಿದ ನಂತ ವೈಷ್ಣವಿ ಜೊತೆ ಮದುವೆಯಾಗುವ ವಿಚಾರ ಪ್ರಸ್ತಾಪಿಸುತ್ತಾನೆ ಇದಕ್ಕೆ ಲಲಿತಾ ವಿರೋಧ ವ್ಯಕ್ತಪಡಿಸುತ್ತಾರೆ. ಮೊದಲೇ ನಿರ್ದಾರ ಮಾಡಿಕೊಂಡಿದ್ದ ಆತ ಬರುವಾಗ ತಂದಿದ್ದ ವಯರ್ನಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿ ಆಕೆಯ ಆಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದ. ಅಜರ್ ಮತ್ತು ವೈಷ್ಣವಿ ಪೋಲಿಸ್ ಬಲೆಗೆ ಸಿಕ್ಕಿಬೀಳದೆ ನ್ಯಾಯಾಲಯಕ್ಕೆ ಹಾಜರಾಗುವ ಉಪಾಯವನ್ನು ಮಾಡುತ್ತಾರೆ. ಇದೇ ವೇಳೆ ವೈಷ್ಣವಿ ದೇವಾಡಿಗ ಕೂಡ ನಾಪತ್ತೆಯಾಗುತ್ತಾರೆ ಮುಂಬೈನಲ್ಲಿ ಈ ಬಗ್ಗೆ ಪ್ರಕರಣ ಕೂಡ ದಾಖಲಾಗುತ್ತದೆ. ಲಲಿತಾ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಿಸಲು ವೈಷ್ಣವಿ ಮೂಲಕ ಡೆತ್ನೋಟ್ ರಚಿಸುತ್ತಾರೆ. ಇದರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪೋಲಿಸರು ಮುಂಬೈ ಪೋಲಿಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಆರೋಪಿಗಳು ಮುಂಬೈನಿಂದ ಅಹಮದಾಬಾದ್ಗೆ ತೆರಳುತ್ತಿರುವ ಸಂದರ್ಭ ರೈಲಿನಲ್ಲಿ ವೈಷ್ಣವಿ ಮತ್ತು ಅಜರ್ನನ್ನು ಬಂಧಿಸಲಾಗಿದೆ ಎಂದು ಅಣ್ಣಾಮಲೈ ತಿಳಿಸಿದರು.

ಕೊಲೆಗೆ ಬಳಸಿದ ವಯರ್ನ್ನು ಗುರುತಿಸಿದ್ದು, ಕದ್ದ ಚಿನ್ನವನ್ನು ಮುಂಬೈನಲ್ಲಿ ಮಾರಟ ಮಾಡಿದ್ದಾನೆ. ಇತನೊಂದಿಗೆ ಸಹಕರಿಸಿದ ವೈಷ್ಣವಿಯನ್ನು ಪೋಲಿಸರು ಕುಂದಾಪುರಕ್ಕೆ ಕರೆತಂದಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದರು.


Spread the love