ಕುಂಪಲಾ ಶಾಲೆಗೆ ಬಣ್ಣ ಬಳಿದು ಹೊಸ ನೋಟ – ಸಹ್ಯಾದ್ರಿ ಕಾಲೇಜ್ನಿಂದ ಸಿಎಸ್ಆರ್ ಪ್ರೋಗ್ರಾಂ
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಎನ್ಎಸ್ಎಸ್ NSS ಘಟಕ ಮತ್ತು ಇಂಡಿಗೋ ಪೇಂಟ್ಸ್ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲಕ್ಕೆಬಣ್ಣ ಬಳಿದು ಹೊಸ ರೂಪವನ್ನು ನೀಡಿದರು.
ಹೊಸ ಶೈಕ್ಷಣಿಕ ವರ್ಷಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಕಲಿಕೆ ಪರಿಸರ. ಈ ಉದಾತ್ತ ಪ್ರಯತ್ನಕ್ಕಾಗಿ ಈ ಯೋಜನೆಗೆ ಅಗತ್ಯವಿರುವ ಬಣ್ಣಗಳನ್ನು ಇಂಡಿಗೋ INDIGO ಪೇಂಟ್ಸ್ ದೇಣಿಗೆ ನೀಡುವ ಮೂಲಕ ತಮ್ಮ ಕೈಗಳನ್ನು ಜೋಡಿಸಿಕೊಂಡಿವೆ. ಸ್ಥಳೀಯ ಆಡಳಿತ, ಯುವ ಕ್ಲಬ್ ಮತ್ತು ಸ್ವಸಹಾಯ ಗುಂಪು ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್, ಕುಂಪಲಾ ಕೂಡ ತಮ್ಮ ಬೆಂಬಲವನ್ನು ವಿಸ್ತರಿಸಿದೆ. ಸಹ್ಯಾದ್ರಿ ಕಾಲೇಜ್ ಎನ್ಎಸ್ಎಸ್ ಸ್ವಯಂಸೇವಕರು ನಮ್ಮ ಎಂಬಿಎ ವಿದ್ಯಾರ್ಥಿಗಳೊಂದಿಗೆ ಶಾಲೆಯ ಪರಿಸರ ಮತ್ತು ಒಳಾಂಗಣವನ್ನು ಶುಚಿಗೊಳಿಸಿದರು ಹಾಗೂ ಶಾಲೆಗೇ ಬಣ್ಣ ಬಳಿದರು.
ಈ ಯೋಜನೆಯು 6 ಮೇ, 2019 ರಿಂದ 11 ಮೇ ಮೇ 2019 ವರೆಗೆ ಎನ್ಎಸ್ಎಸ್ NSS ಸ್ಪೆಶಲ್ ಕ್ಯಾಂಪ್ನ ಭಾಗವಾಗಿ ಪೂರ್ಣಗೊಳ್ಳಲಿದೆ. ಈ ಯೋಜನೆಯನ್ನು ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜಕರು ಶ್ರೀಲತಾ ಯು ಎ,, ವಿದ್ಯಾರ್ಥಿ ಕೌನ್ಸಿಲರ್ ಅಂಕಿತ್ ಎಸ್.ಕುಮಾರ್ ಮತ್ತು ಆರ್ಟ್ ಅಂಡ್ ಕಲ್ಚರ್ ಡಿಪಾರ್ಟ್ಮೆಂಟ್ ಮುಖ್ಯಸ್ಥ ನವೀನ ಪಿಲಾರ್ ಮೇಲು ಉಸ್ತ್ತುವಾರಿ ನೋಡಿಕೊಳ್ಳುತ್ತಾರೆ.