Home Mangalorean News Kannada News ಕುಡಿಯುವ ನೀರು ಪೊರೈಕೆಯಲ್ಲಿ ನಗರಸಭೆ ಸಂಪೂರ್ಣ ವಿಫಲ: ಮಟ್ಟಾರ್ ರತ್ನಾಕರ ಹೆಗ್ಡೆ

ಕುಡಿಯುವ ನೀರು ಪೊರೈಕೆಯಲ್ಲಿ ನಗರಸಭೆ ಸಂಪೂರ್ಣ ವಿಫಲ: ಮಟ್ಟಾರ್ ರತ್ನಾಕರ ಹೆಗ್ಡೆ

Spread the love

ಕುಡಿಯುವ ನೀರು ಪೊರೈಕೆಯಲ್ಲಿ ನಗರಸಭೆ ಸಂಪೂರ್ಣ ವಿಫಲ: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೊರೈಕೆಯಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಅಸರ್ಮಕ ವಿತರಣೆ ಹಾಗೂ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಆರೋಪಿಸಿದರು.
ಅವರು ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಬಜೆ ಅಣೆಕಟ್ಟಿನಲ್ಲಿ ನಿರಂತರ ನೀರು ಸೋರಿಕೆಯಾಗುತ್ತಿದ್ದು, ಸಕಾಲದಲ್ಲಿ ಮರಳು ಚೀಲ ಹಾಕಿ ನೀರು ದಾಸ್ತಾನು ಮಾಡದೇ ಇರುವುದರಿಂದ ನೀರಿನ ಕೊರತೆ ಆಗಿದೆ ಎಂದ ಅವರು ಉಡುಪಿಯ ಶಾಸಕರು ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಉಡುಪಿ ನಗರಕ್ಕೆ ವಾರಾಹಿ ನೀರನ್ನು ತರುವುದಾಗಿ ಹೇಳೀದ್ದು ಇಂದಿಗೂ ಅದರಲ್ಲಿ ಅವರು ಸಫಲತೆಯನ್ನು ಕಂಡಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ನೀರೀನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ನೀರಿಲ್ಲದೆ ಅಲ್ಲಿನ ರೋಗಿಗಳು ತತ್ತರಿಸಿಹೋಗಿದ್ದಾರೆ. ಅಲ್ಲದೆ ಸಚಿವರ ನೀಡಿದ ಭರವಸೆಯಂತೆ ರೂ 500 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎನ್ನುವ ಭರವಸೆ ಹುಸಿಯಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ ಕಳೆದ ಒಂದು ವರೆ ವರ್ಷದಿಂದ ಮರಳಿನ ಕೊರತೆ ಸಮಸ್ಯೆ ಇಂದಿಗೂ ಬಗೆ ಹರಿದಿಲ್ಲ. ಜಿಲ್ಲೆಗೆ ಸೂಕ್ತ ಮರಳು ನೀತಿ ತರುವುದಾಗಿ ಹೇಳಿಕೊಂಡು ತಿರುಗುತ್ತಿರುವ ಸಚಿವರ ಅದರ ಕುರಿತು ಏನೂ ಕೂಡ ಕ್ರಮ ಕೈಗೊಂಡಿಲ್ಲ. ಸಾಮಾನ್ಯ ಜನರಿಗೆ ಮರಳಿನ ಕೊರತೆ ಇದ್ದರೂ ಕೂಡ ಮರಳು ಮಾಫಿಯದವರಿಂದ ಮರಳು ನಿರಾಂತಂಕವಾಗಿ ಸಾಗಾಟಾವಾಗುತ್ತಿದೆ ಕರಾವಳಿಗೆ ಹೊಸ ಮರಳು ನೀತಿ ಎಂಬುದು ಕೇವಲ ಬಾಯಿ ಮಾತಿನ ಭರವಸೆಯಾಗಿಯೇ ಉಳಿದಿದೆ ಎಂದರು.

ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಮೇ 13 ಂದು ಬೈಂದೂರಿನ ರಾಜರಾಜೇಶ್ವರಿ ಕಲಾಮಂದಿರದಲ್ಲಿ ನಡೆಯಲಿದ್ದು, ಕಾರ್ಯಕಾರಿಣಿಯ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ಎಸ್ ಯಡ್ಯೂರಪ್ಪ ಮಾಡಲಿದ್ದು, ಕಾರ್ಯಕಾರಿಣಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ರೂಪುರೇಶಗಳು ಹಾಗೂ ಪಕ್ಷ ಸಂಘಟನೆಯ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.
ಅದೇ ದಿನ ಸಂಜೆ 5 ಗಂಟೆಗೆ ಬೈಂದೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು, ಸಭಯನ್ನು ಉದ್ದೇಶಿಸಿ ಯಡ್ಯೂರಪ್ಪ ಮಾತನಾಡಿಲಿದ್ದಾರೆ. ಸಭೆಯಲ್ಲಿ ರಾಜ್ಯದ ಇತರ ಮುಖಂಡರು, ಸಂಸತ್ ಸದಸ್ಯರುಗಳು ಭಾಗವಹಿಸಿಲಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಯ ಜನ್ಮಶತಾಬ್ದಿಯ ಅಂಗವಾಗಿ ಪ್ರತೀ ವಿಧಾನಸಭಾ ಕ್ಷೇತ್ರಗಳಿಂದ ಪಕ್ಕದ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಪಕ್ಷ ಸಂಘಟನೆಗೆ 15 ದಿನಗಳ ಕಾಲ ಪೂರ್ಣಾವಧಿ ವಿಸ್ತಾರಕರಾಗಿ ಕೇಂದ್ರಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳೀಸಿ, ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನೊಳಗೊಂಡ 150 ಜನರನ್ನು ಈಗಾಗಲೇ ಗುರುತಿಸಲಾಗಿದೆ. ಈ ಬಗ್ಗೆ ಪ್ರತೀ ಮಂಡಲದಲ್ಲಿ ಕಾರ್ಯಗಾರ ನಡೆದಿದ್ದು, ಈ ಪ್ರಕ್ರಿಯೇ ಜೂನ್ 1 ರಿಂದ ಸಪ್ಟೆಂಬರ್ 25 ರ ವರೆಗೆ ಹಂತ ಹಂತವಾಗಿ ಮಾಡಲಾಗುವುದು. ದೇಶದಲ್ಲಿ ಈ ಕಾರ್ಯಕ್ರಮಕ್ಕೆ ಈಗಾಗಲೇ ಸುಮಾರು ಮೂರು ಲಕ್ಷದ ಎಂಬತ್ತು ಸಾವಿರ ಕಾರ್ಯಕರ್ತರು 15 ದಿನಗಳ ಅವಧಿಯ ವಿಸ್ತಾರಕರಾಗಿ, 2480 ಜನ 6 ತಿಂಗಳ ಅವಧಿಗೆ ವಿಸ್ತಾರಕರಾಗಿ ಹಾಗೂ ಸುಮಾರು 1580 ಜನ 1 ವರ್ಷದ ಪೂರ್ಣಾವಧಿ ವಿಸ್ತಾರಕರಾಗಿ ಪಕ್ಷದೊಂದಿಗೆ ಕೈಜೋಡಿಸಲಿದ್ದಾರೆ. ದೇಶದಾದ್ಯಂತ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಿ ಅದರ ಯೋಜನೆಗಳನ್ನು ಜಾರಿ ಮಾಡಿಸುವುದ ವಿಸ್ತಾರಕರ ಮುಖ್ಯ ಕೆಲಸವಾಗಿದೆ ಎಂದರು.
ಪಂಡಿತ್ ದೀನದಯಾಳ್ ಉಪಾಧ್ಯಯ ಜನ್ಮಶತಾಬ್ದಿಯ ಅಂಗವಾಗಿ ಪ್ರತಿಯೊಂದು ಮೋರ್ಚಾ ಹಾಗೂ ಪ್ರಕೋಷ್ಠಗಳಿಗೆ ಕಾರ್ಯಕ್ರಮ ನೀಡಲಾಗಿದ್ದು, ಇದರ ಅಂಗವಾಗಿ ಯುವ ಮೋರ್ಚಾಕ್ಕೆ ದೇಶಿಯ ಆಟಗಳ ಕ್ರೀಡಾಕೂಟ, ಮಹಿಳಾ ಮೋರ್ಚಾಕ್ಕೆ ಸ್ತ್ರೀಶಕ್ತಿ ಸಮಾವೇಶ, ರೈತಮೋರ್ಚಾಕ್ಕೆ ಸಸಿ ನೆಡುವ ಕಾರ್ಯಕ್ರಮ, ಎಸ್ ಸಿ ಎಸ್ ಟಿ, ಅಲ್ಪಸಂಖ್ಯಾತ ಹಾಗೂ ಸ್ಲಮ್ ಮೋರ್ಚಾಗಳಿಗೆ ವೈದ್ಯಕೀಯ ಪ್ರಕೋಷ್ಟದ ಸಹಕಾರದೊಂದಿಗೆ ಬೃಹತ್ ವೈದ್ಯಕೀಯ ಶಿಬಿರ, ಸೋಶಿಯಲ್ ಮೀಡಿದ ಮತ್ತು ಮಾಹಿತ ತಂತ್ರಜ್ಞಾನ ಪ್ರಕೋಷ್ಟ ವತಿಯಂದ ದೀನದಯಾಳ್ ಅವರ ಜೀವನ ಸಾಧನೆ ರಾಜಕೀಯ ವಿಶ್ಲೇಷಣೆ, ಆದರ್ಶಕರ ಆಸ್ಪತ್ರೆ, ಶಾಲೆ ಹಾಗೂ ಸ್ಲಂಮ್ ಸುಧಾರೆಣೆ ಮಾಡುವ ನಿಟ್ಟಿನಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಜಾರಿಗೆಗಳೊಸಲಾಗುವುದು ಎಂದರು.
ಕುಯಿಲಾಡಿ ಸುರೇಶ್ ನಾಯಕ್, ಕಟಪಾಡ ಶಂಕರ ಪೂಜಾರಿ, ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version