ಮಂಗಳೂರು: ಕುದ್ರೋಳಿ ಮಾಂಸ ವ್ಯಾಪಸ್ಥರ ಸಂಘದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ನಗರದ ಕುದ್ರೋಳಿ ಬಳಿ ನಡೆಯಿತು.
ಶಾಸಕ.ಜೆ.ಆರ್.ಲೋಬೋ ಅವರು ಬಡ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರುಶಿಕ್ಷಣ ಹಕ್ಕಿನ ಮೂಲಕ ಎಲ್ಲಾ ಮಕ್ಕಳಿಗೂ ಕಲಿಕೆಗೆ ಅವಕಾಶ ದೊರಕಿದೆ. ಸರ್ಕಾರಕ್ಕೆ 800 ಕೋಟಿ ಹೊರೆಯಾಗಲಿದೆ. ಒಬ್ಬ ವಿದ್ಯಾರ್ಥಿಗೆ 15 ಸಾವಿರ ರೂಪಾಯಿ ಖರ್ಚ ಮಾಡುತ್ತಿದೆ ಎಂದು ಹೇಳಿದರು. ಸರ್ಕಾರಿ ಶಾಲೆಯಲ್ಲೂ ಉತ್ತಮ ಶಿಕ್ಷಣ ಸಿಗುತ್ತಿದೆ. ಅದನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ರಾಜ್ಯ ಮಾಂಸ ವ್ಯಾಪಸ್ಥರ ಸಂಘದ ಉಪಾಧ್ಯಕ್ಷ ಅಲಿಹಸನ್ ಮಾತನಾಡಿ, ಕಳೆದ 20 ವರುಷದಿಂದ ಬಡ ಮಕ್ಕಳಿಗೆ ಉಚಿತ ಪುಸ್ತಕವನ್ನು ನೀಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಸ್ಥಳೀಯ ಕಾರ್ಪೋರೇಟರ್ ಅಬ್ದುಲ್ ಅಜೀಜ್ ಕುದ್ರೋಳಿ, ಕೋಮು ಸೌಹರ್ಧ ವೇದಿಕೆ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಮಟನ್ ವ್ಯಾಪಸ್ಥರ ಅಸೋಸಿಯೇಶನ್ ಅಧ್ಯಕ್ಷ ಮೊಯಿದ್ದೀನ್ ಮತ್ತಿತರು ಉಪಸ್ಥಿತರಿದ್ದರು.