Home Mangalorean News Kannada News ಕುರಾನ್ ಬಗ್ಗೆ ನಮಗೂ ಗೌರವ ಇದೆ ಹಾಗಾಗಿ ಮುಟ್ಟಿಲ್ಲ: ಮಂಗಳೂರು ಎಸ್ಪಿ ಸುಧೀರ್ ರೆಡ್ಡಿ

ಕುರಾನ್ ಬಗ್ಗೆ ನಮಗೂ ಗೌರವ ಇದೆ ಹಾಗಾಗಿ ಮುಟ್ಟಿಲ್ಲ: ಮಂಗಳೂರು ಎಸ್ಪಿ ಸುಧೀರ್ ರೆಡ್ಡಿ

Spread the love

ಕುರಾನ್ ಬಗ್ಗೆ ನಮಗೂ ಗೌರವ ಇದೆ ಹಾಗಾಗಿ ಮುಟ್ಟಿಲ್ಲ: ಮಂಗಳೂರು ಎಸ್ಪಿ ಸುಧೀರ್ ರೆಡ್ಡಿ
ಬಂಟ್ವಾಳ: ಶರತ್ ಹತ್ಯೆಯ ಪ್ರಮುಖ ಆರೋಪಿ ಖಲಂಧರ್ ಶಾಫಿ ಮನೆಯಲ್ಲಿ ಸರ್ಚ್ ವಾರೆಂಟ್ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಕುರಾನ್ ಗ್ರಂಥವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಮುಸ್ಲಿಂ ಬಾಂಧವರ ಧಾರ್ಮಿಕ ಗ್ರಂಥ ಕುರಾನ್ ಪಾವಿತ್ರತೆಯ ಬಗ್ಗೆ ನಮಗೂ ಗೊತ್ತಿದೆ. ಹಾಗಾಗಿ ಕುರಾನ್ ನ ನ್ನು ಪೊಲೀಸರು
ಮುಟ್ಟಲು ಹೋಗಿಲ್ಲ ಎಂದು ಮಂಗಳೂರು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

ನಮ್ಮ ಇಲಾಖೆಯಲ್ಲೂ ಮುಸ್ಲಿಮ್ ಬಾಂಧವರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಧಾರ್ಮಿಕ ಆಚರಣೆ, ನಂಬಿಕೆ ಹಾಗೂ ಧಾರ್ಮಿಕ ಶ್ರದ್ಧಾ ಕಾರ್ಯಗಳ ಬಗ್ಗೆ ತಿಳುವಳಿಕೆ ಇದೆ. ಅವುಗಳನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಗೌರವಿಸುತ್ತೇವೆ. ಹಾಗಿದ್ದ ಮೇಲೆ ಕಾರ್ಯಾಚರಣೆ ವೇಳೆ ಕುರಾನ್ಅನ್ನು ಬಿಸಾಕಿ ಅವಮಾನಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ಕುರಾನ್ ಹಾಗೂ ಯಾವುದೇ ಧಾರ್ಮಿಕ ಗ್ರಂಥಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತಿದೆ. ಅವುಗಳನ್ನು ಅಶುದ್ಧ ಹಾಗೂ ಅಪವಿತ್ರವಾಗದಂತೆ ಕಾಪಾಡುತ್ತೇವೆ. ಮಕ್ಕಳ ಕೈಗೆ ಸಿಗಬಾರದೆಂದು ಎತ್ತರದ ಸ್ಥಳದಲ್ಲಿಡಲಾಗುತ್ತದ್ದು, ಅಂಗಾಂಗ ಶುದ್ದಿಗೊಳಿಸಿದ ನಂತರವೇ ಕುರಾನ್ ನನ್ನು ವಾಚಿಸುತ್ತಾರೆ. ಧಾರ್ಮಿಕ ಗ್ರಂಥಗಳನ್ನು ಇಡಲು ಪ್ರತ್ಯೇಕ ಕವರ್, ಪೊಟ್ಟಣ, ಸ್ಟ್ಯಾಂಡ್ಗಳು ಇರುತ್ತದೆ. ಅದೇ ರೀತಿಯಲ್ಲಿ ಖಲಂಧರ್ ಮನೆಯಲ್ಲೂ ಕುರಾನ್ ಗ್ರಂಥ ಹಾಗೂ ಮಕ್ಕಳ ಮದ್ರಸ ಪಠ್ಯ ಪುಸ್ತಕಗಳನ್ನು ಇಡಲಾಗಿತ್ತು.ಅವುಗಳನ್ನು ಗಮನಿಸಿದ ನಮ್ಮ ಪೊಲೀಸ್ ಅಧಿಕಾರಿಗಳು ಕುರಾನ್ ಗ್ರಂಥವನ್ನು ಮುಟ್ಟಬೇಡಿ. ಅದನ್ನು ಮುಟ್ಟುವ ಅಧಿಕಾರ ನಮಗಿಲ್ಲ. ಅದಕ್ಕೆ ಅದರದ್ದೇಯಾದ ಪವಿತ್ರತೆ ಇದೆ ಎಂದು ಪೊಲೀಸ್ ಸಿಬ್ಬಂದಿಗಳು ಸೂಚನೆ ನೀಡಿದ್ದರು ಎಂದವರು ಸ್ಪಷ್ಟನೆ ನೀಡಿದ್ದಾರೆ.
ಸತ್ಯ ಮರೆಮಾಚಲು ಯತ್ನಿಸಿದರೆ ಕ್ರಮ
ಶರತ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಮನೆಯಲ್ಲಿ ಕೆಲವೊಂದು ದಾಖಲೆ ಪತ್ರ ದೊರೆತಿದ್ದು, ಅವುಗಳನ್ನು ಪರಿಶೀಲಿಸ ಲಾಗುತ್ತಿದೆ. ಈ ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುವ ಬಗ್ಗೆಯೂ ಮಾಹಿತಿ ಇದ್ದು, ಸದ್ಯದಲ್ಲಿಯೇ ಕ್ರಮ ಜರಗಿಸಲಾಗುವುದು ಎಂದವರು ಆರೋಪಗಳಿಗೆ ಬೆಂಬಲಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.


Spread the love
1 Comment
Inline Feedbacks
View all comments
Lallu
7 years ago

Trouble mongers even they will not spare Religion !!!

wpDiscuz
Exit mobile version