ಕುವೈಟ್ನ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರಲು ಸಹಕರಿಸಿದ ಸರಕಾರಕ್ಕೆ ಕ್ಯಾ ಕಾರ್ಣಿಕ್ ಅಭಿನಂದನೆ

Spread the love

ಕುವೈಟ್ನ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರಲು ಸಹಕರಿಸಿದ ಸರಕಾರಕ್ಕೆ ಕ್ಯಾ ಕಾರ್ಣಿಕ್ ಅಭಿನಂದನೆ

ಮಂಗಳೂರು: ಕುವೈಟ್ನ ಕನ್ನಡಿಗರನ್ನು ಕರೆದುಕೊಂಡು ಮಂಗಳೂರಿಗೆ ಆಗಮಿಸಬೇಕಾಗಿದ್ದ ವಿಶೇಷ ವಿಮಾನ (ಚಾರ್ಟರ್ ಫ್ಲೈಟ್)ರದ್ದುಗೊಂಡು ಅಲ್ಲಿನ ಕನ್ನಡಿಗರು ಅತಂತ್ರರಾಗಿದ್ದರು. ಈ ಬಗ್ಗೆ ಅಲ್ಲಿನ ಕನ್ನಡ ಸಂಘದ ಪ್ರಮುಖರು ಸಂಪರ್ಕಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರದ ಜೊತೆ ಮಾತನಾಡಿ ಮಂಗಳೂರಿಗೆ ವಿಶೇಷ ವಿಮಾನ (ಚಾರ್ಟರ್ ಫ್ಲೈಟ್) ಆಗಮಿಸಲು ಅನುಮತಿ ದೊರಕಿರುತ್ತದ್ದೆ.

ಈ ಮಧ್ಯೆ ಕರ್ನಾಟಕ ಸರ್ಕಾರವು ಕುವೈಟ್ನಿಂದ ಆಗಮಿಸುವ ಕನ್ನಡಿಗರಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿತ್ತು, ಕುವೈಟ್ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಕೋವಿಡ್ ಟೆಸ್ಟ್ ಸೌಲಭ್ಯವಿಲ್ಲದ ಕಾರಣ ಕನ್ನಡಿಗರು ತಾಯ್ನಾಡಿಗೆ ಆಗಮಿಸಲು ಮತ್ತೊಮ್ಮೆ ಅತಂಕ ಸೃಷ್ಠಿಯಾಗಿತ್ತು.. ಈ ವಿಚಾರವನ್ನು ಕರ್ನಾಟಕ ಸರ್ಕಾರದ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಈ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಸರ್ಕಾರದಿಂದ ವ್ಯಕ್ತವಾಗಿದ್ದು ಇದರಿಂದಾಗಿ ಕೊಲ್ಲಿ ರಾಷ್ಟ್ರಗಳಿಂದ ಆಗಮಿಸುವ ಕನ್ನಡಿಗರು ಕೋವಿಡ್ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ ಕರ್ನಾಟಕಕ್ಕೆ ಆಗಮಿಸಲು ಅನುಮತಿಯನ್ನು ನೀಡಿದೆ. ಇದರಿಂದ ತಾಯ್ನಾಡಿಗೆ ಆಗಮಿಸುವ ಅನಿವಾಸಿ ಕನ್ನಡಿಗರ ಬಹುದಿನದ ಪ್ರಯತ್ನಕ್ಕೆ ಫಲ ದೊರೆತಿದೆ. ಅನುಮತಿ ನೀಡಲು ಸಹಕರಿಸಿದ ಕರ್ನಾಟಕ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಅಧಿಕಾರಿ ವರ್ಗಕ್ಕೆ ಕೊಲ್ಲಿ ರಾಷ್ಟ್ರದಿಂದ ಆಗಮಿಸುವ ಕನ್ನಡಿಗರ ಪರವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಧನ್ಯವಾದ ಸಲ್ಲಿಸಿದ್ದಾರೆ.


Spread the love