ಕುವೈಟ್ ತೈಲ ಕಂಪೆನಿಯಲ್ಲಿ ಅಗ್ನಿ ದುರಂತ – ಮಂಗಳೂರಿನ ಯುವಕ ಸಾವು
ಮಂಗಳೂರು: ಕುವೈಟ್ ನ ತೈಲ ಮತ್ತು ಅನಿಲ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೋರ್ವರು ಅಗ್ನಿ ದುರಂತದಲ್ಲಿ ಜೂನ್ 14 ರಂದು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಪಡೀಲ್ ಕೊಡಕ್ಕಲ್ ನಿವಾಸಿ ಸತೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಸತೀಶ್ ಅವರು ಜೂನ್ 11 ರಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವಾಗ ವಿಷಕಾರಿ ಅನಿಲ ಬಿಡುಗಡೆಯಾಗಿದ್ದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಜೂನ್ 14 ರ ಮಧ್ಯಾಹ್ನ ಅವರ ಮೃತರಾಗಿದ್ದಾರೆ.
ಮೃತರು ತಾಯಿ, ಸಹೋದರಿ ಮತ್ತು ಸಹೋದರನನನ್ನು ಅಗಲಿದ್ದಾರೆ.