ಕೃಷಿ ಮತ್ತು ಪರಿಸರ ನಾಳೆಗಳ ನಿರ್ಮಾಣ: ಎಲ್ ವರ್ತೂರು ನಾರಾಯಣ ರೆಡ್ಡಿ
ಮೂಡುಬಿದಿರೆ: ನಮ್ಮ ನಿಜವಾದ ನೆಮ್ಮದಿ ನಮ್ಮನ್ನು ಹೊತ್ತು ಸಲಹುತ್ತಿರುವ ಭೂಮಿ ತಾಯಿಯನ್ನು ಕಾಪಾಡಿಕೊಳ್ಳುವುದರಲ್ಲಿ ಇದೆ. ಇದನ್ನು ಅರ್ಥ ಮಾಡಿಕೊಳ್ಳದೇ ನಾವು ಭೂಮಿಯನ್ನು ನಮ್ಮ ಭೋಗದ ವಸ್ತುವಾಗಿ ಪರಿಗಣಿಸುತ್ತಿರುವುದೇ ನಮ್ಮೆಲ್ಲಾ ನಿನ್ನೆ ಇಂದು ಹಾಗೂ ನಾಳೆಯ ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಾಡೋಜ ಎಲ್ ವರ್ತೂರು ನಾರಾಯಣ ರೆಡ್ಡಿ ನುಡಿದರು.
ಸ್ವಾತಂತ್ರ್ಯಪೂರ್ವದ ನಮ್ಮ ದೇಶದ ಕೃಷಿ ಪರಿಸ್ಥಿತಿಯನ್ನು ವಿವರಿಸಿದ ಅವರು, ಆಹಾರಧಾನ್ಯಗಳ ತವರೂರಾಗಿದ್ದ ನಮ್ಮ ದೇಶ ಕೆಲವೇ ವರ್ಷಗಳ ಅಂತರದಲ್ಲಿ ಬರಗಾಲದ ಬೀಡಾಗಿ ಮಾರ್ಪಾಡು ಹೊಂದಿತು. ಕೃಷಿಯನ್ನು ಅವಲಂಬಿತ ಜನ ದಿನ ಕಳದರೆ ಕಷ್ಟ ಕಾರ್ಪಣ್ಯದ ನಡುವೆ ಜೀವನ ಸಾಗಿಸುವ ದಿನಗಳು ಬಂದವು. ಇದೀಗ ಉಣ್ಣುವ ಅನ್ನದ ಜೊತೆಗೆ, ಸೇವಿಸುವ ಗಾಳಿಯು ವಿóಷಕಾರಿಯಾಗಿ ನಮ್ಮ ಸರ್ವನಾಶಕ್ಕೇ ನಾವೇ ಕಾರಣಿಭೂತರಾಗಿ ಮಾರ್ಪಾಡುಗೊಂಡಿದ್ದೇವೆ ಎಂದರು. ಕೃಷಿವಿಜ್ಞಾನ ಸಂಶೋಧನೆಗಳು ಜನರಿಗೆ ಉಪಕಾರಿಯಾಗುವ ಬದಲು ಜನರನ್ನು ಹೆಚ್ಚು ಸೋಮಾರಿಯನ್ನರಾಗಿ ರೂಪಿಸಿ, ಮಾರಕ ರಾಸಾಯಾನಿಕ ಪದ್ದತಿಗೆ ಮಾರು ಹೋಗುವಂತೆ ಮಾಡಿವೆ ಎಂದರು. ಒಂದು ಕೀಟದ ನಾಶಕ್ಕೇ 25 ಕೀಟಗಳು ನಮ್ಮ ಪರಿಸರದಲ್ಲೇ ಇವೆ ಎಂಬ ಕನಿಷ್ಠ ಜ್ಞಾನವಿಲ್ಲದೇ, ರಾಸಾಯಾನಿಕ ಗೊಬ್ಬರ ಬಳಕೆಯಿಂದ ನಮ್ಮ ಅವನತಿಯನ್ನು ನಾವೇ ತಂದು ಕೊಳ್ಳುತ್ತಿದ್ದೇವೆ ಎಂದರು.
ಸರ್ಕಾರ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚು ಹೆಚ್ಚು ಪ್ರಚುರ ಪಡಿಸುವುದನ್ನು ಗಮನಿಸಿದರೆ ಯಾವುದೋ ಬಹುರಾಷ್ಟ್ರೀಯ ಕಂಪೆನಿಯ ಷೇರು ಇವರ ಖಾತೆಗೆ ಜಮಾವಾಗುತ್ತಿರವುದು ಖಾತ್ರಿಯಾಗುತ್ತದೆ ಎಂದರು. ನಾವು ಗಿಡ ಮರವನ್ನು ಬೆಳೆಸಿ ಉಳಿಸಿದರೆ ನಮ್ಮ ಮುಂದಿನ ಸಂತತಿಯನ್ನು ನೂರ್ಕಾಲ ಕಾಪಾಡುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು. ನಾವು ಪಶುಬಲಿ ನಿಲ್ಲಿಸಿದರೆ, ನಮ್ಮವರು ಬಲಿಪಶು ಆಗುವುದನ್ನ ತಪಿಸಬಹುದು ಎಂದರು. ಒಂದು ಮರ 50 ಸಾವಿರದಷ್ಟು ಆಮ್ಲಜನಕ ನೀಡಬಲ್ಲ ಸಾಮಾಥ್ರ್ಯ ಹೊಂದಿದೆ, ಆದ್ದರಿಂದ ಪ್ರತಿಯೊಬ್ಬರು ತಮ್ಮ ಪರಿಸರದಲ್ಲಿ ಗಿಡಮರವನ್ನು ನೆಟ್ಟು ಉಳಿಸಿ, ನಮ್ಮ ಮೊಮ್ಮಕ್ಕಳ ಸಾಲಕ್ಕೇ ಬಡ್ಡಿ ನೀಡದಿದ್ದರೂ, ಕೊನೆ ಪಕ್ಷ ಮೊತ್ತವನ್ನಾದರೂ ಹಿಂತಿರುಗಿಸುವ ಕೆಲಸವನ್ನು ಮಾಡುವ ಎಂದರು.
ವಿಜ್ಞಾನಿ ಡಾ ಟಿ ವಿ ರಾಮಚಂದ್ರ ಪರಿಸರದ ಕುರಿತು ಮಾತನಾಡಿ, ಶೇಕಡಾ 2.5 ರಷ್ಟು ಇರುವ ಪಶ್ಚಿಮಘಟ್ಟ ನಮ್ಮ ಸಂಪೂರ್ಣ ದಕ್ಷಿಣಭಾರತದ ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. ನಿತ್ಯ ನಿರಂತರವಾಗಿ ಸಾಗುತ್ತಿರುವ ನಮ್ಮ ಪರಿಸರದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ನಮ್ಮ ಸರ್ವನಾಶದ ದಿಕ್ಸೂಚಿ ಎಂದು ತಿಳಿಸಿದರು. ನಮ್ಮನ್ನಾಳುತ್ತಿರುವ ಸರ್ಕಾರ ವಿಜ್ಞಾನಿಗಳು ನೀಡುತ್ತಿರುವ ವೈಜ್ಞಾನಿಕ ವರದಿಯನ್ನು ಪರಿಗಣಿಸದೆ ಎಸಿರೂಮಿನಲ್ಲಿ ಕುಳಿತು ಅಧಿಕಾರಿಗಳು ತಯಾರಿಸುವ ವರದಿಯನ್ನು ಅನುಷ್ಠಾನಗೊಳಿಸುತ್ತಿವೆ. ವಿಜ್ಞಾನಿಗಳಿಗೆ ದೇಶ,ಭಾಷೆ,ರಾಜ್ಯ, ಸ್ಥಳಗಳ ಹಂಗಿಲ್ಲದೇ ಕಾರ್ಯನಿರ್ವಹಿಸುವವರು ನಾವುÀ, ಆದರೆ ನಮ್ಮನ್ನೆ ಜರಿಯುವವರು ಹೆಚ್ಚು ಎಂದು ತಿಳಿಸಿದರು. ಉದ್ಯಾನನಗರಿಯಾಗಿದ್ದ ಬೆಂಗಳೂರು ಈಗ ಸತ್ತ ನಗರಿಯಾಗಿ ಮಾರ್ಪಾಡು ಹೊಂದಿದೆ. ಸೇವಿಸಲು ಶುದ್ದ ಆಮ್ಲಜನಕವಿಲ್ಲದೇ, ಹಣಕೊಟ್ಟು ಆಮ್ಲಜನಕದ ವ್ಯಾಪಾರ ಮಾಡುವ ಆಕ್ಸಿಜನ್ ಬಾರ್‍ಗಳು ತಲೆ ಎತ್ತಿವೆ. ಇಡೀ ಬೆಂಗಳೂರಿಗೆ ಸಾಕಾಗುವಷ್ಟು ಮಳೆ ನೀರನ್ನು ಸಂರಕ್ಷಿಸಿ ಇಡುವುದರಿಂದ ನೀರಿನ ಬೇಡಿಕೆ ಪೂರೈಸಲು ಸಾದ್ಯವಿದ್ದರೂ ಆ ಗೋಜಿಗೆ ಹೋಗುವ ಮನಸ್ಸು ಯಾರಿಗಿಲ್ಲ. ಎತ್ತಿನಹೊಳೆ ಯೋಜನೆಯನ್ನು ಕಟುವಾಗಿ ಟೀಕಿಸಿದ ಅವರು ಇದು ಮೂರ್ಖರಿಂದ ಮೂರ್ಖರೇ ಮಾಡಿರುವ ಯೋಜನೆಯಾಗಿದೆ ಎಂದರು.
ಕವಿಸಮಯ-ಕವಿನಮನ: ಕವಿರಾಜ್
ಮೂಡುಬಿದಿರೆ, ನವೆಂಬರ್ 20: `ಸಿನಿಮಾ ಹಾಡು ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಹಾಡು ಬರೆಯುವುದಕ್ಕೂ ಮೊದಲು ಹಾಡಿನ ರಾಗವನ್ನು ಕೊಟ್ಟಿರುತ್ತಾರೆ. ಆ ರಾಗಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಹಾಡುಗಳನ್ನು ರಚಿಸುವುದು, ನಿರ್ದೇಶಕರು ಅದನ್ನು ಒಪ್ಪುವಂತೆ ಮಾಡುವುದು ಕಷ್ಟದ ಕೆಲಸವೇ. ಆದರೆ ಇದ್ಯಾವುದೂ ಗೊತ್ತಿಲ್ಲದ ಕೆಲವು ಜನರು ಸಿನಿಮಾ ಸಾಹಿತ್ಯ ಕ್ಷೇತ್ರದ ಬಗ್ಗೆ ಉಡಾಫೆಯಿಂದ ಮಾತನಾಡುತ್ತಾರೆ’ ಎಂದು ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡದ್ದು ಖ್ಯಾತ ಸಿನಿಮಾ ಸಾಹಿತಿ ಕವಿರಾಜ್.
ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿನಿಮಾ ಹಾಡುಗಳಲ್ಲಿ ಬಳಕೆಯಾಗುವ ಹಲವು ಪದಗಳ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದ ಕವಿರಾಜ್ ಅದಕ್ಕೆ ಸಮರ್ಥನೆ ಕೊಟ್ಟರು. ಜನಸಾಮಾನ್ಯರು ತಮ್ಮ ಆಡುಮಾತಿನಲ್ಲಿ ಬಳಸುವ ಕೆಲವು ಸಹಜ ಪದಗಳನ್ನೇ ಸಿನಿಮಾ ಸಾಹಿತ್ಯದಲ್ಲಿ ಬಳಸಿದರೆ ತಪ್ಪೇನು? ಎಲ್ಲರಿಗೂ ಅರ್ಥವಾಗುವಂತೆ ಸರಳ ಸಾಹಿತ್ಯವನ್ನು ಕೊಟ್ಟಾಗ ಮಾತ್ರ ಅದು ಜನರನ್ನು ಸುಲಭವಾಗಿ ತಲುಪುತ್ತದೆ. ಹೀಗಾಗಿ ಜನಸಾಮಾನ್ಯರ ಕೆಲವು ಆಡುಮಾತುಗಳನ್ನು ಸಾಹಿತ್ಯದಲ್ಲಿ ಬಳಸಿದರೆ ತಪ್ಪಿಲ್ಲ. ಸಿನಿಮಾ ಸಾಹಿತ್ಯ ಬಗ್ಗೆ ಆರೋಪಗಳನ್ನು ಮಾಡುವವರು ಈ ಕ್ಷೇತ್ರದಲ್ಲಿ ಏನನ್ನೂ ಸಾಧಿಸದೇ ಹೊರಬಿದ್ದವರು ಎಂದು ಅವರು ಅಭಿಪ್ರಾಯ ಪಟ್ಟರು.
ಸಿನಿಮಾ ಸಾಹಿತ್ಯಕ್ಕೆ ಅಪಾರವಾದ ಶಕ್ತಿಯಿದೆ. ಮಹಾನ್ ವಿದ್ವಾಂಸರು, ಸಾಹಿತಿಗಳ ಸಾಹಿತ್ಯ ಮಾಡದಿರುವ ಕೆಲವು ಕಾರ್ಯಗಳನ್ನು ಸಿನಿಮಾ ಹಾಡುಗಳು ಮಾಡಿವೆ. ಡಾ. ರಾಜ್‍ರ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಅಪಾರ ಕನ್ನಡಾಭಿಮಾನವನ್ನು ಬಡಿದೆಬ್ಬಿಸದರೆ, ಸುದೀಪ್‍ರ `ಏನಾಗಲಿ ಮುಂದೆ ಸಾಗು ನೀ’ ಎಂಬ ಹಾಡು ಜೀವನದಲ್ಲಿ ನಿರಾಶೆ ಕಂಡವರ ಸುಪ್ತಚೈತನ್ಯವನ್ನು ಬಡಿದೆಬ್ಬಿಸಿದೆ. ಇಂತಹ ಹಲವಾರು ಉದಾಹರಣೆಗಳು ನಮ್ಮ ಜೊತೆ ಇವೆ ಎಂದು ಕವಿರಾಜ್ ಹೇಳಿದರು. ಅವರು ಬರೆದ `ಸಂಜೆಗಳೇಕೆ ಹೀಗಿವೆ……ಸುಡು ಸುಡು ಬೇಸಿಗೆ ಹಾಗೆ’ ಭಾವಗೀತೆಗೆ ಆಳ್ವಾಸ್ ವಿದ್ಯಾರ್ಥಿಗಳು ಧ್ವನಿಯಾದರು. ಚಿತ್ರ ಕಲಾವಿದ ಬಾಗೂರು ಮಾರ್ಕಂಡೇಯ ಗೀತೆಗೆ ವರ್ಣ ಚಿತ್ರವನ್ನು ರಚಿಸಿದರು.
ವಿಚಾರಗೋಷ್ಠಿ:
ಕವಿ ಸಮಯ- ಕವಿ ನಮನ-ಜ್ಯೋತಿ ಮಹಾದೇವ್
ಸಾಹಿತ್ಯ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ ನಾವು ಅದನ್ನು ತಪಸ್ಸಾಗಿ ಆಚರಿಸಬೇಕು ಪ್ರಸ್ತುತ ವಿದ್ಯಾಮಾನದಲ್ಲಿ ಸಾಹಿತ್ಯದಲ್ಲಿ ಗೋಡೆ, ಕಂದಕ,ಕೋಟೆಗಳು ಉಂಟಾಗಿ ಬಿರುಕು ಬಿಟ್ಟಿದೆ. ಸಾಹಿತ್ಯವನ್ನು ಉದ್ಯಾನವನ ಮಾಡುವಲ್ಲಿ ಆಲೋಚಿಸಬೇಕೆಂದು ಆಳ್ವಾಸಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ ಕವಿ ಸಮಯ ಕವಿ ನಮನದಲ್ಲಿ ಕವಯತ್ರಿ ಜ್ಯೋತಿ ಮಹಾದೇವ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಕಾವ್ಯಮೀಮಾಂಸೆಯಲ್ಲಿ ಹಲವು ರಸ, ಪಾಂಡಿತ್ಯ, ವಕ್ರೋಕ್ತಿ ಹಾಗೂ ಹಿತನುಡಿಗಳು ಇದರ ಭಾಗವಾಗಿದೆ. ಸಾಹಿತ್ಯ ಎನ್ನುವುದು ಆಲದ ಮರವಿದ್ದ ಹಾಗೆ ಅದೇ ರೀತಿ ಸಾಹಿತ್ಯ ಮುಂದೆ ಬರುವ ಸಾಹಿತಿಗಳಿಗೆ ನೆರಳಾಗಿ ಮನೋಲ್ಲಾಸ ನೀಡುವ ತಾಣವಾಗಬೇಕು ಸಾಹಿತ್ಯ ಮತ್ತು ಸಂಸ್ಕøತಿಯಲ್ಲಿ ನಾವು ಮೊದಲು ಅರಿತುಕೊಂಡು ಅದರ ಬಗ್ಗೆ ಗಮನ ಆರಿಸಬೇಕೆನ್ನುತ್ತಾ ಸಂಸ್ಕøತಿ ಹಾಗೂ ಪ್ರಕೃತಿಯ ವ್ಯತ್ಯಾಸಗಳನ್ನು ತಿಳಿಸಿಕೊಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಬಿ. ನಾದ ಶೆಟ್ಟಿ ಹಾಗೂ ಡಾ. ಬಿ. ಎನ್ ಸುಮಿತ್ರ ಬಾಯಿ ಉಪಸ್ಥಿತರಿದ್ದರು. ಉಷಾ ನಿರೂಪಿಸಿದರು.
ಕವಿಸಮಯ-ಕವಿಮನ- ಪ್ರಜ್ಞಾಮತ್ತಿಹಳ್ಳಿ
ಬುದ್ದಿವಂತಿP,É ಪ್ರತಿಬೆ ಇದ್ರೆ ಚಂದ ಆದ್ರೆ ಅದುವೇ ಬದುಕಲ್ಲ
ಮಾತು ಸೋತಾಗ ಕವಿತೆ ಬರುತ್ತೆ
ಮನೋಭಾವ, ಅನಿಸಿಕೆಡ, ದೋರಣೆಗಳೇ ಕವಿತೆಯ ಮೂಲ
ನಮ್ಮ ಕವಿತೆ ಒದುವವನ ಯಾವುದೋ ಸಂವೇದನೆಗೆ ತಾಕಿದರೆ ಅದುವೆ ನಿಜವಾದ ಕವಿತೆಯ ಸಾರ್ಥಕತೆ
ಕವಿತೆ ಅನೋದಮಯ, ಅದರ ಮಾರ್ಗದಲ್ಲಿ ಸಾಗುವುದೇ ಸೌಭಗ್ಯ
ನೆಲ-ಜಲ-ನೈಸರ್ಗಿಕ ಸಂಪನ್ಮೂಲ ರಕ್ಷಣೆ
ಮೂಡುಬಿದಿರೆ, ನವೆಂಬರ್20: `ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಹತ್ತಿದ ನಾವು ಹೊಸ ಲೋಕದಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನದ ಕಡೆಗೆ ತೋರಿಸುತ್ತಿರುವ ಆಸಕ್ತಿಯಲ್ಲಿ ಸ್ವಲ್ಪವನ್ನಾದರೂ ಪರಿಸರ ಸಂರಕ್ಷಣೆಯತ್ತ ತೋರಬೇಕು. ನಮ್ಮ ಕೆರೆ ಕಟ್ಟೆಗಳನ್ನು ಬೇರೆ ಯಾರೋ ಬಂದು ನೋಡಿಕೊಳ್ಳಲಿ ಎನ್ನುವ ಬದಲು ಸಕ್ರಿಯವಾಗಿ ಪಾಲ್ಗೊಂಡು ನಾವೇ ನಮ್ಮ ಜಲ ಹಾಗೂ ಪ್ರಕೃತಿ ಮೂಲಗಳ ಸಂರಕ್ಷಣೆ ಮಾಡಬೇಕಿದೆ. ಹಾಗಾದಾಗ ಮಾತ್ರ ನಮ್ಮ ಪ್ರಕೃತಿಯಲ್ಲಿ ಸಮತೋಲನ ಸಾಧಿಸಲು ಸಾಧ್ಯ’ ಎಂದು ಪರಿಸರ ತಜ್ಞ ಕೇಶವ ಹೆಗಡೆ ಕೊರ್ಸೆ ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ ನೆಲ-ಜಲ-ನೈಸರ್ಗಿಕ ಸಂಪನ್ಮೂಲ ರಕ್ಷಣೆ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು. ನಮ್ಮಲ್ಲಿ ಶೇ.10 ಅರಣ್ಯ ಕೂಡ ಇಲ್ಲ. ಈ ಅರಣ್ಯಪ್ರದೇಶಗಳಲ್ಲಿ ಇಂದಿಗೂ ಜನವಸತಿಯಿದ್ದು, ನೈಸರ್ಗಿಕ ಅರಣ್ಯ ರಕ್ಷಣೆ ಸಾಧ್ಯವಾಗುತ್ತಿಲ್ಲ. ಮಾನವ ನಿರ್ಮಿತ ಗೋಮಾಳ ಕೂಡ ಅನೇಕ ಕಾರಣಗಳಿಂದಾಗಿ ನಾಶವಾಗುತ್ತಿದೆ. ಗೋಮಾಳಗಳ ನಾಶವೇ ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಲು ಕಾರಣ. ಅವೈಜ್ಞಾನಿಕ ಜೀವನ ವಿಧಾನಗಳು, ನಮ್ಮನ್ನು ಕಾಡುತ್ತಿರುವ ಆಂತರಿಕ ಗೊಂದಲ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವ ಮನುಷ್ಯನ ರೀತಿಗಳು ಅರಣ್ಯ ನಾಶಕ್ಕೆ ಕಾರಣವಾಗಿವೆ ಎಂದು ಅವರು ವಿಶ್ಲೇಷಿಸಿದರು.
ಜಲಮೂಲಗಳ ವಿಷಯ ಬಂದಾಗಲೂ ಅಷ್ಟೇ. ನದಿಗಳನ್ನು ಯಥೇಚ್ಛವಾಗಿ ಬಳಸಬಹುದೆಂಬ ಭಾವನೆ ಇಂದು ನೀರಿನ ಮೂಲಗಳನ್ನೇ ನಾಶಪಡಿಸುವುದರ ಜೊತೆಗೆ ಅಂತರ್ಜಾಲ ಮೂಲಗಳನ್ನು ಹಾಳು ಮಾಡಿವೆ. ನೀರಿನ ಮೂಲಗಳೇ ಮಲಿನಗೊಂಡ ಕಾರಣದಿಂದ ಇಂದು ಹೊಸ ಬಗೆಯ ಕ್ಯಾನ್ಸರ್‍ಗಳು ಮಾನವ ಲೋಕಕ್ಕೆ ಮಾರಿಯಾಗಿ ಕಾಡುತ್ತಿವೆ ಎಂದ ಕೇಶವ ಹೆಗಡೆಯವರು, ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಲು ಸೋಲುತ್ತಿರುವ ಮನುಷ್ಯನ ಅಜ್ಞಾನವನ್ನು ಟೀಕಿಸಿದರು. ಎಲ್ಲ ಸಮಸ್ಯೆಗಳಿಗೂ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಅದರಿಂದ ಒಳ್ಳೆಯ ಚಿಂತನೆಗಳಿಗೆ ಒಂದು ಅಡಿಪಾಯವನ್ನು ಸೃಷ್ಟಿಸಬಹುದು. ಒಳ್ಳೆಯ ಹಿತ್ತಿಲು ಇದ್ದಾಗ ಮಾತ್ರ ಅಂಗಳದಲ್ಲಿ ಸುಂದರ ಸೌಧವನ್ನು ಕಟ್ಟಲು ಸಾಧ್ಯ ಎಂದು ಸೂಚ್ಯವಾಗಿ ಹೇಳಿದರು.