ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ

Spread the love

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ 

ಮಂಗಳೂರು : ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನಿರ್ದೇಶನದ ಮೇರೆಗೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ ಕಾರ್ಯಕ್ರಮವನ್ನು ಡಿಸೆಂಬರ್ 16 ರಂದು ಚಾಲನೆ ನೀಡಲಾಯಿತು. ಈ ಅಭಿಯಾನವು ಡಿಸೆಂಬರ್ 31 ರವರೆಗೆ ಹಮ್ಮಿಕೊಳ್ಳಲಾಗುವುದು. ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು, ತಾಂತ್ರಿಕ ಮತ್ತು ಬೋಧಕೇತರ ಸಿಬಂದಿ ವರ್ಗದವರು ಸ್ವಚ್ಚತೆಯ ಪಖ್ವಾಡದ ಬಗ್ಗೆ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಭಾರತ ಮಾತೆಗೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಎಂದು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಧ ಡಾ. ಎ.ಟಿ. ರಾಮಚಂದ್ರ ನಾಯ್ಕ ಹೇಳಿದರು. ಒಬ್ಬ ಮನುಷ್ಯ ವರ್ಷಕ್ಕೆ ಕನಿಷ್ಟ 100 ಗಂಟೆಗಳ ಕಾಲ ಅಂದರೆ ವಾರಕ್ಕೆ 2 ಗಂಟೆಗಳನ್ನು ಸ್ವಯಂಪ್ರೇರಿತವಾಗಿ ಸ್ವಚ್ಚತಾ ಕೆಲಸಕ್ಕೆ ತೊಡಗಿಸಿಕೊಳ್ಳಬೇಕೆಂದು ಮತ್ತು ಕಸವನ್ನು ಎಲ್ಲೆಂದರಲ್ಲಿ ಚೆಲ್ಲುವುದಿಲ್ಲ ಹಾಗೂ ಇತರರಿಗೂ ಚೆಲ್ಲಲು ಬಿಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಭೋದಿಸಿದರು.

ಈ ವಿಶೇಷ ದಿನದ ಅಂಗವಾಗಿ, ಕೇಂದ್ರದ ವಿಜ್ಞಾನಿಗಳ ವಸತಿ ಗೃಹದ ಹತ್ತಿರ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.

ವಿಜ್ಞಾನಿಗಳಾದ ಹರೀಶ್ ಶೆಣೈ, ಗಣೇಶ್ ಪ್ರಸಾದ ಎಲ್., ಕಾರ್ಯಕ್ರಮ ಸಹಾಯಕ ಸತೀಶ್ ನಾಯ್ಕ, ಸಿಬಂದಿಗಳಾದ ಯಶಶ್ರೀ, ದೀಪಾ, ಕೇಶವ, ಸೀತರಾಮ, ಅಶ್ವಿತ್‍ಕುಮಾರ್, ವಿಧ್ಯಾಶ್ರೀ, ಆಶಾಲತಾ, ವಿನೋದಾ ಮೊದಲಾದವರು ಉಪಸ್ಧಿತರಿದ್ದರು ಪ್ರತಿಜ್ಞೆಯನ್ನು ಮಾಡಿದರು.


Spread the love