Home Mangalorean News Kannada News ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

Spread the love

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

ಉಡುಪಿ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ನಿತ್ಯ ಈ ಬಗ್ಗೆ ಜಾಗೃತಿ ವಹಿಸುವುದು ಅತಿ ಅವಶ್ಯವಾಗಿದೆ. ಇಲ್ಲವಾದರೆ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಹೇಳಿದರು.

ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಹಾಗೂ ಗಂಗೊಳ್ಳಿ ಘಟಕ ಇವರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ 51 ಘಟಕಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಗಂಗೊಳ್ಳಿ ಚರ್ಚ್ ವ್ಯಾಪ್ತಿಯ ಕನ್ನಡಕುದ್ರು ಸಂತ ಜೋಸೆಫ್ ವಾಝ್ ಪಾಲನಾ ಕೇಂದ್ರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ನೂರಾರು ಗಿಡಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ಧೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷ ಣೆಗೆ ಜಾಗೃತಿ ವಹಿಸಬೇಕು. ನಿತ್ಯ ವಾಹನಗಳು ಹೆಚ್ಚಾಗುತ್ತಿವೆ. ಗಿಡ ಮರಗಳು ನಾಶವಾಗುತ್ತಿವೆ, ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ, ಉಷ್ಣಾಂಶ ಹೆಚ್ಚಾಗುತ್ತಿದೆ. ಮಳೆ ಬೆಳೆಗಳು ಕಡಿಮೆಯಾಗುತ್ತಿವೆ. ಕಾರಣ ಇದರ ಬಗ್ಗೆ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಈ ವೇಳೆ ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷರಾದ ಮೇಬಲ್ ಡಿಸೋಜಾ, ಕೇಂದ್ರಿಯ ಸಮಿತಿ ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ಗಂಗೊಳ್ಳಿ ಘಟಕದ ಅಧ್ಯಕ್ಷರಾದ ರೋಶನ್ ಲೋಬೊ, ಕಾರ್ಯದರ್ಶಿ ಸೆಲಿನ್ ಲೋಬೊ, ವಲಯದ ನಿಕಟಪೂರ್ವ ಅಧ್ಯಕ್ಷರಾದ ಹೆರಿಕ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಮೈಕಲ್ ಪಿಂಟೊ, ಕನ್ನಡಕುದ್ರು ವಾಳೆಯ ಗುರಿಕಾರರಾದ ಆಗ್ನೆಸ್ ಕ್ರಾಸ್ತಾ, ಪ್ರತಿನಿಧಿ ವಿನ್ಸೆಂಟ್ ಆಲ್ಮೇಡಾ ಉಪಸ್ಥಿತರಿದ್ದರು.

ರೋಶನ್ ಲೋಬೊ ಸ್ವಾಗತಿಸಿ, ಸೆಲಿನ್ ಲೋಬೊ ಧನ್ಯವಾದವಿತ್ತರು. ಜೆನ್ನಿ ಬುತೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಸೂಚನೆಯಂತೆ ಉಡುಪಿ ಜಿಲ್ಲೆಯ 51 ಘಟಕಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಣೆ ನಡೆಸಿದ್ದು ಕೋವಿಡ್-19 ರ ಹಿನ್ನಲೆಯಲ್ಲಿ ಚರ್ಚುಗಳಲ್ಲಿ ಸಾಮೂಹಿಕವಾಗಿ ಸೇರಿ ಆಚರಣೆ ಮಾಡುವ ಬದಲು ಪ್ರತಿಯೊಬ್ಬರು ಗಿಡಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅದನ್ನು ಕುಟುಂಬದ ಸದಸ್ಯರೊಂದಿಗೆ ಸೇರಿ ನೆಟ್ಟು ಅದನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ಕೊಂಡು ಹೋದ ಗಿಡವನ್ನು ಪೋಷಣೆ ಮಾಡಿ ಪ್ರತಿ ತಿಂಗಳು ಸಂಬಂಧಿತ ಘಟಕಗಳಿಗೆ ಮಾಹಿತಿ ನೀಡುವ ವಿಶಿಷ್ಠ ಯೋಜನೆಯ ಮೂಲಕ ಪ್ರಾಮಾಣಿಕವಾಗಿ ಗಿಡದ ಪೋಷಣೆ ಮಾಡಲು ಸೂಚನೆ ನೀಡಲಾಗಿದೆ. ಅದರಂತೆ ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ಭಾನುವಾರ ಈ ವನಮಹೋತ್ಸವ ಆಚರಣೆ ನಡೆಯಿತು.


Spread the love

Exit mobile version