Home Mangalorean News Kannada News ಕೆನರಾ ಪ್ರೌಢಶಾಲೆ: ಕೊಂಕಣಿ ಸಂಘೆ ಉದ್ಘಾಟನೆ   

ಕೆನರಾ ಪ್ರೌಢಶಾಲೆ: ಕೊಂಕಣಿ ಸಂಘೆ ಉದ್ಘಾಟನೆ   

Spread the love

ಕೆನರಾ ಪ್ರೌಢಶಾಲೆ: ಕೊಂಕಣಿ ಸಂಘೆ ಉದ್ಘಾಟನೆ   

ಮಂಗಳೂರು: ಕೆನರಾ ಪ್ರೌಡ ಶಾಲೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೆನರಾ ಹೈಸ್ಕೂಲ್ ಸಹಯೋಗದಿಂದ ಕೊಂಕಣಿ ಸಂಘದ ಉದ್ಘಾಟನೆಯನ್ನು ಕೊಂಕಣಿ ಸಾಂಸ್ಖøತಿಕ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದಂತಹ  ಸಂತೋಷ ಶೆಣೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕೊಂಕಣಿ ಸಂಘವನ್ನು ಬೆಳೆಸುವುದು, ಪ್ರತಿ ತಿಂಗಳಿಗೆ 2 ಬಾರಿ ಸಂಘದ ಸದಸ್ಯರು ಒಟ್ಟು ಸೇರಿ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸುವುದರ ಜೊತೆಗೆ ಕೊಂಕಣಿ ಭಾಷೆಯನ್ನು ಬೆಳೆಸುವುದು ಮತ್ತು ಅದರ ಅಭಿವೃದ್ಧಿಗೆ ತಾವುಗಳು ಶ್ರಮಿಸಬೇಕು ಎಂದು ತಮ್ಮ ಉದ್ಘಾಟನೆಯ ಭಾಷಣದಲ್ಲಿ ತಿಳಿಸಿದರು, ಶಿಕ್ಷಣದಲ್ಲಿಯೂ ಸಹ ಸರಕಾರವು ನಮಗೆ ನೀಡಿರುವಂತಹ ಅಧ್ಯತೆಯನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು 6ರಿಂದ 10ನೇ ತರಗತಿಯವರೆಗೆ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಆರಿಸಿಕೊಂಡು ಕಲಿಯಬೇಕು ಎಂದು ಹೇಳಿದರು.

ಅಧ್ಯಕ್ಷ ಸ್ಥಾನವನ್ನಾಲಂಕರಿಸಿದ್ದ ಶಾಲೆಯ ಸಂಚಾಲಕರು ವಾಮನ್ ಕಾಮತ್‍ರವರು ಕೊಂಕಣಿ ಭಾಷೆಯ ಅಭಿವೃದ್ಧಿಗೆ ತಮ್ಮ ವಿದ್ಯಾಸಂಸ್ಥೆಯಿಂದ ಸಂಪೂರ್ಣವಾದಂತಹ ಸಹಕಾರವನ್ನು ನೀಡುವುದಾಗಿ ಭರವಸೆಯ ಮಾತುಗಳನ್ನಾಡಿದರು,

ಕೊಂಕಣಿ ಸಂಘದ ಅಧ್ಯಕ್ಷರಾಗಿ ನಮನ್ ಶೆಣೈ, ಕು| ಪೂರ್ವಿ ಹಾಗೂ ತ್ರಿವಿಕ್ರಮ್ ಶಣೈ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಂಯೋಜಕಿಯಾಗಿ ಶಿಕ್ಷಕಿ ಶಾರದಾ ಕಾಮತ್ ಆಯ್ಕೆಯಾದರು.

ಕಾರ್ಯಕ್ರಮದ ನಿರೂಪಣೆಯನ್ನು 10ನೇ ತರಗತಿಯ ವಿದ್ಯಾರ್ಧಿನಿ ಆರ್ ಅಮೃತಾ ಪೈಯವರು ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು ವಿದ್ಯಾರ್ಥಿ ಅನಂತ್ ಹೆಗ್ಡೆ ಸ್ವಾಗತವನ್ನು ಕೋರಿದರು.

ಪೂರ್ಣಿಮಾ ಕಾಮತ್‍ರವರು ಅತಿಥಿಗಳ ಕಿರುಪರಿಚಯವನ್ನು ಮಾಡಿದರು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಾಜಾಕ್ಷಿಯವರು ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕುಮಾರಿ ಅಧಿತಿ ಶೆಣೈಯವರು ವಂದನಾಪರ್ಣೆಗೈದರು ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ವೃಂದದವರು ,ಕೊಂಕಣಿ ಭಾಷಿತ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.


Spread the love

Exit mobile version