Home Mangalorean News Kannada News ಕೆ.ಎಂ.ಎಫ್ ಹಾಲು ಕೇಂದ್ರದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ

ಕೆ.ಎಂ.ಎಫ್ ಹಾಲು ಕೇಂದ್ರದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ

Spread the love

ಕೆ.ಎಂ.ಎಫ್ ಹಾಲು ಕೇಂದ್ರದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ

ಮಂಗಳೂರು : ಪ್ರಸಕ್ತ ಕೋವಿಡ್‍ನ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು, ರೈತರು ಮತ್ತು ರೈತ ಸಂಘ ಸಂಸ್ಥೆಯವರು ತಾವು ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ನೇರ ಮಾರಾಟ ಮಾಡಲು ಕೆ.ಎಂ.ಎಫ್. ಮಳಿಗೆಗಳಲ್ಲಿ ಸ್ಥಳಾವಕಾಶ ಒದಗಿಸಿಕೊಡಲು ಕೆ.ಎಂ.ಎಫ್. ರವರು ಒಪ್ಪಿರುತ್ತಾರೆ.

ರೈತರು ತಾವು ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕ ಮಹಾಮಂಡಳಿ ನಿಯಮಿತ ಮಳಿಗೆಗಳ ಹತ್ತಿರ ಮಾರಾಟ ಮಾಡಲು ಕೆ.ಎಂ.ಎಫ್. ಮತ್ತು ತೋಟಗಾರಿಕೆ ಇಲಾಖೆ ರವರ ಸಹಯೋಗದೊಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ರೈತರು ಮತ್ತು ರೈತ ಸಂಘ ಸಂಸ್ಥೆಯವರು ಸದರಿ ಅವಕಾಶದ ಅನುಕೂಲ ಪಡೆಯಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ  ಸಂಖ್ಯೆ ಇಂತಿವೆ: ತೋಟಗಾರಿಕೆ ಉಪನಿರ್ದೇಶಕರು, ದ.ಕ.ಜಿ.ಪಂ., ಮಂಗಳೂರು – 9448999226, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಮಂಗಳೂರು – 9449258204, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ – 9448206393, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು – 9731854527, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ – 9880993238, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ  – 9980250117, ಮಾರುಕಟ್ಟೆ ಅಧಿಕಾರಿ, ಕೆ.ಎಂ.ಎಫ್. ಎಂ. ರವಿ,  – 9448327317 ಇವರನ್ನು ಸಂಪರ್ಕಿಸಲು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version