ಕೆ.ಎಸ್.ಆರ್.ಟಿ.ಸಿ. ಹೊಸ ಮಲ್ಟಿ  ಅ್ಯಕ್ಸಲ್ ವೋಲ್ವೋ ಸಾರಿಗೆ ಕಾರ್ಯಚರಣೆ

Spread the love

ಕೆ.ಎಸ್.ಆರ್.ಟಿ.ಸಿ. ಹೊಸ ಮಲ್ಟಿ  ಅ್ಯಕ್ಸಲ್ ವೋಲ್ವೋ ಸಾರಿಗೆ ಕಾರ್ಯಚರಣೆ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ವಿಭಾಗದಿಂದ ಮಂಗಳೂರು – ಮೈಸೂರು-ಮಂಗಳೂರು ಮಾರ್ಗದಲ್ಲಿ ಹೊಸ ವೋಲ್ವೋ ಸಾರಿಗೆಯನ್ನು ಹಾಗೂ ಮಂಗಳೂರು-ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಹೊಸ ಮಲ್ಟಿ ಅ್ಯಕ್ಸಲ್ ವೋಲ್ವೋ ಸಾರಿಗೆಯನ್ನು ಜನವರಿ 11 ರಿಂದ ಪ್ರಾರಂಭಿಸಿದ್ದು,  ಈ ಬಸ್ಗಳ  ಕಾರ್ಯಾಚರಣೆ ಸಮಯದ ವಿವರ ಈ ಕೆಳಗಿನಂತಿದೆ.

ಮಂಗಳೂರು-ಮೈಸೂರು-ಮಂಗಳೂರು ವೋಲ್ವೋ ಬಸ್ ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 5.30 ಗಂಟೆಗೆ ಹೊರಟು  ಪುತ್ತೂರು 6.30, ಸುಳ್ಯ 7.20, ಮಡಿಕೇರಿ 8.30 ಮಾರ್ಗವಾಗಿ ಮೈಸೂರಿಗೆ ರಾತ್ರಿ 10.30 ಗಂಟೆಗೆ ತಲುಪುವುದು ಹಾಗೂ  ಮರು ಪ್ರಯಾಣದಲ್ಲಿ ಮೈಸೂರಿನಿಂದ ಬೆಳಿಗ್ಗೆ 7 ಗಂಟೆಗೆ ಹೊರಟು  ಮಡಿಕೇರಿ 9, ಸುಳ್ಯ 10.10, ಪುತ್ತೂರು 11, ಮಾರ್ಗವಾಗಿ ಮಂಗಳೂರಿಗೆ 12 ಗಂಟೆಗೆ ತಲುಪಲಿದೆ.

ಮಂಗಳೂರು-ಬೆಂಗಳೂರು-ಮಂಗಳೂರು ಮಲ್ಟಿ ಅ್ಯಕ್ಸಲ್ ವೋಲ್ವೋ ಬಸ್ ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಪುತ್ತೂರು 8, ಮಡಿಕೇರಿ 10, ಮೈಸೂರು 1 ಗಂಟೆಗೆ,  ಮಾರ್ಗವಾಗಿ ಬೆಂಗಳೂರಿಗೆ 3 ಗಂಟೆಗೆ ತಲುಪುವುದು ಮತ್ತು ಮರು ಪ್ರಯಾಣದಲ್ಲಿ ಬೆಂಗಳೂರಿನಿಂದ 11 ಗಂಟೆಗೆ ಹೊರಟು ಮೈಸೂರು 2.30, ಮಡಿಕೇರಿ 4.30, ಪುತ್ತೂರು ಮಾರ್ಗವಾಗಿ ಮಂಗಳೂರಿಗೆ 6.45 ಗಂಟೆಗೆ ತಲುಪಲಿದೆ.

ಸದರಿ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾಸಂ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love