ಕೆ.ಸಿ.ಎಫ್ ರಿಯಾದ್ “ರಿಬಾತ್ 19” ಸ್ನೇಹ ಕೂಟ
ರಿಯಾದ್:- ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಸಮಿತಿ ಹಮ್ಮಿಕೊಂಡಿದ್ದ “ರಿಬಾತ್ 19” ಎಂಬ ಸ್ನೇಹ ಕೂಟ ಹಾಗೂ ಹಜ್ ಸ್ವಯಂ ಸೇವಕರ ಅಭಿನಂದನಾ ಕಾರ್ಯಕ್ರಮವು ಇಲ್ಲಿನ ಪ್ರತಿಷ್ಠಿತ “ನೋಫಾ ಇಸ್ತಿರಾಹ” ದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಯ್ಯಿದ್ ರಫೀಕ್ ತಂಙಳ್ ಕೊಡಗು ರವರು ಧ್ವಜಾರೋಹಣಗೈದ ಕಾರ್ಯಕ್ರಮವನ್ನು ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿಯವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಚೆಯರ್ಮ್ಯಾನ್ ನಝೀರ್ ಮುಸ್ಲಿಯಾರ್ ನಂದಾವರ ಉದ್ಘಾಟಿಸಿದರು.ಇಲ್ಯಾಸ್ ಲತ್ವೀಫಿ ಕಿರಾಅತ್ ಪಠಿಸಿ, ಸಿದ್ದೀಕ್ ಸಖಾಫಿ ಪೆರುವಾಯಿ ಸಂದೇಶ ಭಾಷಣ ಮಾಡಿದರು.
NS ಅಬ್ದುಲ್ಲಾ, ಬಶೀರ್ ತಲಪಾಡಿ, ಇಸ್ಮಾಈಲ್ ಮದನಿ ಶುಭಹಾರೈಸಿದರು.ನಂತರ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಗೊಂಡ ಖಮರುದ್ದೀನ್ ಗೂಡಿನಬಳಿಯವರನ್ನು ರಿಯಾದ್ ಝೋನ್ ವತಿಯಿಂದ ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ನಂತರ ಮಾತನಾಡಿದ ಖಮರುದ್ದೀನ್’ರವರು ಕೆಸಿಎಫ್’ನ ವೈವಿಧ್ಯಮಯವಾದ ವಿವಿಧ ಯೋಜನೆಗಳನ್ನು ಸವಿಸ್ತಾರವಾಗಿ ಸಭಿಕರ ಮುಂದಿಟ್ಟರು.
ಝೋನ್ ಸಮಿತಿಯ ಕೊಡುಗೆಯಾದ ಉಚಿತ ಆಂಬುಲೆನ್ಸ್’ನ ಅಧಿಕೃತ ಘೋಷಣೆಯನ್ನು ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ನಿಝಾಂ ಸಾಗರ್ ನಿರ್ವಹಿಸಿದರು.
ರಾಷ್ಟ್ರೀಯ ಸಮಿತಿಯ ವಿಶೇಷ ಪುರಸ್ಕಾರಕ್ಕೆ ಅರ್ಹರಾದ ಹನೀಫ್ ಕಣ್ಣೂರು’ರನ್ನು ರಾಷ್ಟ್ರೀಯ ಸಮಿತಿ ನಾಯಕರಾದ ಖಮರುದ್ದೀನ್ ಮತ್ತು ಬಶೀರ್ ತಲಪಾಡಿ ಸ್ಮರಣಿಕೆ ನೀಡಿ ಪುರಸ್ಕರಿಸಿದರು.
ಇದೇ ಸಂದರ್ಭದಲ್ಲಿ ಝೋನ್ ಅಧೀನದಲ್ಲಿ ನಡೆದಿದ್ದ “ಗ್ರ್ಯಾಂಡ್ ಇಫ್ತಾರ್” ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಳಕೆಮಜಲು ಮತ್ತು ಕನ್ವೀನರ್ ಅನ್ಸಾರ್ ಉಳ್ಳಾಲ ಹಾಗೂ ಹಜ್ ವಲಂಟಿಯರ್ ಕೋರ್ ಚೆಯರ್ಮ್ಯಾನ್ ಹನೀಫ್ ಕಣ್ಣೂರು ಕನ್ವೀನರ್ ಶಮೀರ್ ಜೆಪ್ಪುರವರನ್ನು ಶಾಲು ಹೊದಿಸಿ , ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ರಿಯಾದ್ ನಿಂದ ಈ ವರ್ಷದ ಹಜ್ ಸೇವೆಗೆ ತೆರಳಿದ್ದ ಸುಮಾರು ಎಪ್ಪತ್ತೈದು ಸ್ವಯಂ ಸೇವಕರ ಪ್ರಮಾಣ ಪತ್ರವನ್ನು ವೇದಿಕೆಯಲ್ಲಿದ್ದ ವಿವಿಧ ನಾಯಕರು ನೀಡಿದರು.
ನಂತರ ಕಾರ್ಯಕರ್ತರಿಗಾಗಿ ರಸಪ್ರಶ್ನೆ ಮತ್ತು ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ನಡೆಸಲಾಯಿತು.
ಸಯ್ಯಿದ್ ತಾಜುದ್ದೀನ್ ತಂಙಳ್,ಅಬ್ದುಲ್ ರಝಾಕ್ ಹಾಜಿ, ಅಬೂಬಕ್ಕರ್ ಸಾಲೆತ್ತೂರು, ಉಮರ್ ಅಳಕೆಮಜಲ್, ಅಬ್ದುರ್ರಹ್ಮಾನ್ ಮದನಿ, ಹಾಗೂ ವಿವಿಧ ಸೆಕ್ಟರ್ ಸಮಿತಿ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಕನ್ವೀನರ್ ಹಬೀಬ್ ತೆಕ್ಕಾರ್ ಸ್ವಾಗತಿಸಿದ ಕಾರ್ಯಕ್ರಮವನ್ನು ಅಶ್ರಫ್ ಕಿಲ್ಲೂರು ನಿರೂಪಿಸಿದರು. ಕೊನೆಯಲ್ಲಿ ಶಮೀರ್ ಜೆಪ್ಪು ವಂದಿಸಿದರು.