ಕೇರಳ – ಕೊಡಗು ನೆರೆ ಸಂತ್ರಸ್ತರಿಗೆ ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ-ಸಂಘಟನೆ ನೆರವು
ಉಡುಪಿ: ಸಮಾಜದಲ್ಲಿ ವಿವಿಧ ರೀತಿಯ ಶೋಷಣೆಗೆ ಒಳಪಡುವ ಸ್ತ್ರೀಯರಿಗೆ ಸಂಘಟನೆಯ ಸಹಕಾರ, ಪ್ರೋತ್ಸಾಹ ನೀಡುತ್ತದೆ ಎಂಬ ಮೊದಲ ಧ್ಯೇಯದೊಂದಿಗೆ ಕೊಡಗು ಮತ್ತು ಕೇರಳದ ಅನಾಹುತಗಳಲ್ಲಿ ಸಿಲುಕಿ ಸಂಕಷ್ಟಕ್ಕೀಡಾಗಿರುವ ಮಹಿಳೆಯರು ಗಂಜಿ ಕೇಂದ್ರದ ಗಂಡಸರೊಂದಿಗಿದ್ದು, ಮಾಸಿಕ ಸ್ರಾವದಂತಹ ಸಮಸ್ಯೆಗಳನ್ನು ಅರಿತುಕೊಂಡು, ಅವರ ಪ್ರಾಥಮಿಕ ಅಗತ್ಯತೆಗಳಿಗೆ ಸ್ಪಂದಿಸುವಂತೆ ಕೆಥೊಲಿಕ್ ಸ್ತ್ರೀ ಸಂಘಟನ್ ಉಡುಪಿ ಜಿಲ್ಲೆಯ ತನ್ನ ಕೇಂದ್ರಿಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದು, ತದನಂತರ ಕಾರ್ಕಳ, ಕುಂದಾಪುರ, ಕಲ್ಯಾಣ್ಪುರ, ಉಡುಪಿ ಹಾಗೂ ಶಿರ್ವ ವಲಯ ಸಮಿತಿ ಹಾಗೂ ಧರ್ಮಪ್ರಾಂತ್ಯದ ಎಲ್ಲಾ ಘಟಕ ಸಮಿತಿಗಳಿಗೆ ವಾಟ್ಸಾಪ್ ಸಂದೇಶವನ್ನು ರವಾನಿಸಿದ್ದು ಅತೀ ಚಿಕ್ಕ ಅವಧಿಯಲ್ಲಿ ಸ್ತ್ರೀಯರ ಒಳುಉಡುಪು, ಹೊರ ಉಡುಪು ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಅತೀ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಎಲ್ಲಾ ಸ್ತ್ರೀಯರು ತಮ್ಮ ಮಾನವಿಯತೆಯನ್ನು ಮೆರೆದಿದ್ದಾರೆ.
ಸಂಕಷ್ಟದಲ್ಲಿರುವ ತಮ್ಮ ಸಹೋದರಿಯರ ಪರಿಸ್ಥಿತಿಯನ್ನು ಅರಿತುಕೊಂಡು ಈ ಮಹತ್ಕಾರ್ಯದಲ್ಲಿ ಭಾಗಿಯಾದ ಧರ್ಮಪ್ರಾಂತ್ಯದ ಮಹಿಳೆಯರು ತಮ್ಮ ಸ್ವ-ಉಳಿಯತಾಯದ ಹಣದಿಂದ ರೂ 6,37,350 ಮೌಲ್ಯದ ಉಡುಪುಗಳು, ಒಳ ಉಡುಪು ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಸಂಗ್ರಹಿಸಿದ್ದು, ಈ ಎಲ್ಲಾ ವಸ್ತುಗಳು ಸುಲಲಿತವಾಗಿ ಸರಿಯಾದ ರೀತಿಯಲ್ಲಿ ಸ್ತ್ರೀಯರ ಕೈಗಳಿಗೆ ತಲುಪುವಂತೆ ಉಡುಪಿ ಧರ್ಮಪ್ರಾಂತ್ಯದ ಸುಪರ್ದಿಗೆ ನೀಡಿರುತ್ತಾರೆ.