Home Mangalorean News Kannada News ಕೊಂಕಣಿ ಭವನಕ್ಕೆ 5 ಕೋಟಿ ರೂ ಮಂಜೂರು – ಡಾ.ಕೆ ಜಗದೀಶ್ ಪೈ

ಕೊಂಕಣಿ ಭವನಕ್ಕೆ 5 ಕೋಟಿ ರೂ ಮಂಜೂರು – ಡಾ.ಕೆ ಜಗದೀಶ್ ಪೈ

Spread the love

ಕೊಂಕಣಿ ಭವನಕ್ಕೆ 5 ಕೋಟಿ ರೂ ಮಂಜೂರು – ಡಾ.ಕೆ ಜಗದೀಶ್ ಪೈ

ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿಯು ನಿರೀಕ್ಷಿಸುತ್ತಿದ್ದ “ಕೊಂಕಣಿ ಭವನ”ಕ್ಕೆ ಡಿಸೆಂಬರ್ 10 ರಂದು 5 ಕೋಟಿ ಮಂಜೂರಾಗಿದ್ದು, ತಕ್ಷಣಕ್ಕೆ 3 ಕೋಟಿ ಈಗಾಗಲೇ ಬಿಡುಗಡೆಯಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಕೊಂಕಣಿ ಭವನದ ಕನಸು ಕಂಡಿದ್ದ ಹಲವರ ಕನಸು ಈಗ ನನಸಾಗುತ್ತಿದೆ. ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ ಜಗದೀಶ್ ಪೈ ಹೇಳಿದ್ದಾರೆ.

ಹಲವಾರು ವರ್ಷಗಳಿಂದ ಕೊಂಕಣಿ ಭವನ ನಿರ್ಮಾಣವಾಗಬೇಕೆಂದು ಅನೇಕರು ಪ್ರಯತ್ನಿಸಿದ್ದಾರೆ. ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಈ ಬಗ್ಗೆ ನನ್ನ ಗಮನಕ್ಕೂ ತರಲಾಗಿತ್ತು. ಮೊದಲ ಆದ್ಯತೆ ಎಂಬಂತೆ ಈ ನಿಟ್ಟಿನಲ್ಲಿ ಕಾರ್ಯಪೃವತ್ತನಾಗಿ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದೆ. ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿಗಳಾದ ಶ್ರೀ ಸಿ.ಟಿ ರವಿಯವರನ್ನು ನಾಲ್ಕಾರು ಬಾರಿ ಬೆಂಗಳೂರಿನಲ್ಲಿ ಭೇಟಿಯಾಗಿ ಬೇಡಿಕೆ ಇಟ್ಟಿದ್ದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನೂ ಭೇಟಿಯಾಗಿ ಈ ಹಿಂದೆ ಯೋಜನೆ ಹಾಕಿ ಕೊಂಡಿದ್ದ ಕೆಲವು ದಾಖಲೆಗಳನ್ನು ತೋರಿಸಿ ಸಹಕಾರ ನೀಡಬೇಕೆಂದು ವಿನಂತಿಸಿದ್ದೆ. ಹಲವಾರು ವರ್ಷಗಳಿಂದ ಕೊಂಕಣಿ ಸಾಹಿತ್ಯ ಅಕಾಡೆಮಿಯು ನಿರೀಕ್ಷಿಸುತ್ತಿದ್ದ “ಕೊಂಕಣಿ ಭವನ”ಕ್ಕೆ ಡಿಸೆಂಬರ್ 10 ರಂದು 5 ಕೋಟಿ ಮಂಜೂರಾಗಿದ್ದು, ತಕ್ಷಣಕ್ಕೆ 3 ಕೋಟಿ ಈಗಾಗಲೇ ಬಿಡುಗಡೆಯಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಕೊಂಕಣಿ ಭವನದ ಕನಸು ಕಂಡಿದ್ದ ಹಲವರ ಕನಸು ಈಗ ನನಸಾಗುತ್ತಿದೆ.

ಮುಖ್ಯಮಂತ್ರಿಯವರಾದ ಬಿ.ಎಸ್ ಯಡಿಯೂಪ್ಪನವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸಿ ಟಿ ರವಿಯವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಾದ ಸಿಂಧು ಬಿ ರೂಪೇಶ್, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ಸೂಕ್ತ ನಿವೇಶನ ಹುಡುಕುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಇವರಿಗೂ ನಾನು ಆಭಾರಿಯಾಗಿದ್ದೇನೆ. ಇದು ನಮ್ಮ ರಾಜ್ಯ ಸರಕಾರ ಕೊಂಕಣಿ ಭಾಷಿಗರಿಗೆ ಕೊಟ್ಟ ದೊಡ್ಡ ಉಡುಗೊರೆ ಎಂದು ಭಾವಿಸುತ್ತೇನೆ. ಈ ಒಂದು ಹೋರಾಟದಲ್ಲಿ ಹಿಂದೆ ಶ್ರಮಿಸಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಆದಷ್ಟು ಬೇಗ ಮಂಗಳೂರಿನಲ್ಲಿಯೇ ಭವ್ಯ ಕೊಂಕಣಿ ಭವನ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ನನ್ನದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..


Spread the love

Exit mobile version