ಕೊನೆಯುಸಿರು ಇರುವವರೆಗೆ ಮೂಳೂರಿನಲ್ಲಿ ಒಂದಿಂಚು ಜಾಗದಲ್ಲಿ STP ಮಾಡಲು ಬಿಡುವುದಿಲ್ಲ : ಗ್ರಾಮಸ್ಥರು
- ಗುರುವಾರ ಬೆಳಗ್ಗೆ ಮೂಳೂರಿನ ಸಮಸ್ತ ಗ್ರಾಮಸ್ಥರಿಂದ ಕಾಪು ತಾಲೂಕು ಕಚೇರಿ ಹಾಗೂ ಪುರಸಭೆಗೆ ಗ್ರಾಮಸ್ಥರಿಂದ ಮನವಿ ಸಲ್ಲಿಕೆ
ಕಾಪು: ಇಲ್ಲಿನ ಪುರಸಭಾ ವ್ಯಾಪ್ತಿಯ ಮೂಳೂರು ಗ್ರಾಮದಲ್ಲಿ ನಿರ್ಮಾಣವಾಗುವ STP ನಿರ್ಮಾಣದ ಬಗ್ಗೆ ಹೋರಾಟದ ಗ್ರಾಮಸ್ಥರ ತುರ್ತು ಸಭೆಯು ಸೋಮವಾರ ಸಂಜೆ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಹಿಂಭಾಗದ ವಠಾರದಲ್ಲಿ ನಡೆಯಿತು.
ಸಭೆಯ ಪೂರ್ವ ಭಾವಿಯಾಗಿ ಗ್ರಾಮದೈವ ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಈ ಯೋಜನೆ ನಮ ಊರಿಗೆ ಬಾರದಂತೆ ತಡೆಯಲು ಗ್ರಾಮಸ್ಥರು ಪ್ರಾರ್ಥಿಸಿದರು.
ಇತ್ತೀಚೆಗೆ ವದಿನ ಪತ್ರಿಕೆಯಲ್ಲಿ ಪ್ರಕಟವಾದ ವಿಷಯದ ಪ್ರಕಾರ ಮೂಳೂರು ಗ್ರಾಮದಲ್ಲಿ ಕಾಪು ಪೇಟೆಯ ಕೊಳಚೆ ನೀರು ನಿರ್ವಹಣ ಘಟಕ ನಿರ್ಮಿಸಲು ಸುಮಾರು 1.78 ಎಕರೆ ಕೃಷಿ ಜಮೀನು ಕಾಪು ಪುರಸಭೆಗೆ ಮಂಜೂರು ಮಾಡಿರುತ್ತಾರೆ.
ಸದ್ರಿ ಜಮೀನ್ ನಂಜ ಜಮೀನು ಆಗಿತ್ತು ಇದರ ಸುತ್ತ ಮುತ್ತ ಮನೆ,ಕೃಷಿ ಭೂಮಿ ತೋಟ,ನಾಗಬನ,ದೈಬರಾಧನೆ ಸ್ಥಳಗಳಿದದ್ದು ಒಂದು ವೇಳೆ ಈ ಘಟಕ ನಿರ್ಮಾಣವಾದರೆ ಇಡೀ ಗ್ರಾಮದ ಕುಡಿಯುವ ನೀರಿನ ಭಾವಿ ಕಲುಷಿತಗೊಳ್ಖುವ ಸಾಧ್ಯತೆ ಇದ್ದು ಹಾಗೂ ಇದರಿಂದ ಹೊರ ಸೂಸುವ ದುರ್ನಾತ ಹಾಗೂ ಕೆಮಿಕಲ್ ಮಿಶ್ರಿತ ತ್ಯಾಜ್ಯ ಇಡೀ ಪರಿಸರವನ್ನು ಕಲುಷಿತ ಆಗುವುದರ ಜತೆಗೆ ಮಾರಕ ರೋಗ ಕ್ಯಾನ್ಸರ್ ಮಲೇರಿಯಾ ದಂತಹ ಮಾರಾಕ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುತ್ತದೆ.
ಹೀಗಾಗಿ ಇಂದು ನಡೆದ ತುರ್ತು ಸಭೆಯಲ್ಲಿ ಮೂಳೂರಿನ ದಿನಾಂಕ ,24 ರಂದು ಗುರುವಾರ ಬೆಳಿಗ್ಗೆ ೮.೩೦ ಕ್ಕೆ ಮೂಳೂರು ಬಬ್ಬರಯ ಕಟ್ಟೆ ಬಳಿ ಸೇರಿ ಕಾಪು ಪುರಸಭೆ ಪ್ರತಿಭಟನೆಯೊಂದಿಗೆ ತೆರಳಿ ಮನವಿ ಪತ್ರ ನೀಡಲು ಉದ್ದೇಶಿಸಿದ್ದು ಈ ಪ್ರತಿಭಟನಾ ಜಾಥಕ್ಕೆ ಮೂಳೂರು ಗ್ರಾಮದ ಸಮಸ್ತ ಗ್ರಾಮಸ್ಥರು ಒಟಾಗಿ ಬಂದು ಪಾಲ್ಗೊಂಡು ವಾಹನದ ಮುಖಾಂತರ ತೆರಳಿ ತಹಾಶಿಲ್ದಾರು,ಪುರಸಭೆ ಮುಖ್ಯಾಧಿಕಾರಿ,ಪ್ರಾಧಿಕಾರ, ಶಾಸಕ,ಮಾಜಿ ಸಚಿವರಿಗೆ ಮನವಿ ನೀಡುವುದೆಂದು ನಿರ್ಧರಿಸಲಾಯಿತು.
ಗ್ರಾಮಸ್ಥರ ಕೊನೆಯ ಉಸಿರು ಇರುವವರೆಗೆ ಜನ ವಸತಿ ಪ್ರದೇಶದಲ್ಲಿ ಒಂದಿಂಚು ಜಾಗವನ್ನು ಕೂಡ ಇಂತಹ ಮಾರಕ ಯೋಜನೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಶಪತ ಮಾಡಲಾಯಿತು.
ಈ ಸಂಧರ್ಭದಲ್ಲಿ ಪ್ರಮುಖರಾದ ಮನೋಹರ್ ಅಢ್ಯಂತಾಯ,ನವೀನ್ ಶೆಟ್ಟಿ ಬಿಕ್ರಿಗುತ್ತು,ನ್ಯಾಯವಾದಿ ನವೀನ್ ಮೂಳೂರು,ಪತ್ರಕರ್ತ ಪುರುಷೋತ್ತಮ ಸಾಲಿಯಾನ್,ಪ್ರಭಾತ್ ಶೆಟ್ಟಿ,ಪ್ರಕಾಶ್ ಅಂಚನ್,ಅಶೋಕ್ ಪುತ್ರನ್ ,ಸುಧಾಕರ್,ಮೊದಲಾದವರು ಉಪಸ್ಥಿತರಿದ್ದರು.