Home Mangalorean News Kannada News ಕೊರೊನಾ ಗ್ರಾಫ್ ರೀತಿಯಲ್ಲಿ ಏರುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ – ಹರೀಶ್ ಕಿಣಿ

ಕೊರೊನಾ ಗ್ರಾಫ್ ರೀತಿಯಲ್ಲಿ ಏರುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ – ಹರೀಶ್ ಕಿಣಿ

Spread the love

ಕೊರೊನಾ ಗ್ರಾಫ್ ರೀತಿಯಲ್ಲಿ ಏರುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ – ಹರೀಶ್ ಕಿಣಿ

ಮಂಗಳೂರು: ದೇಶದಲ್ಲಿ ಕೊರೊನಾ ಗ್ರಾಫ್ ಏರಿಕೆ ಕಂಡ ರೀತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಿರುವುದು ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ವೈಫಲ್ಯ ತೋರಿಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಆರೋಪಿಸಿದ್ದಾರೆ.

ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಕೋ-ಆರ್ಡಿನೇಟರ್ ಆಗಿ ನೇಮಕಗೊಂಡ ಬಳಿಕ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಸಮಿತಿ ಆಯೋಜಿಸಿದ, ವೇಣೂರು, ಕಾಶಿಪಟ್ಣ, ಅಂಡಿಂಡೆ, ಮರೋಡಿ, ವೇಣೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜೂನ್ ತಿಂಗಳ 6 ನೇ ತಾರೀಖಿನಿಂದ ಬೆಲೆ ಏರಿಕೆ ಆರಂಭವಾಗಿದೆ 5 ದಿನದಲ್ಲಿ ದಿನನಿತ್ಯ ಏರಿಕೆ ಕಂಡ ಪೆಟ್ರೋಲ್ ಬೆಲೆಯಲ್ಲಿ ಸುಮಾರು 3 ರೂ. ಗಳಷ್ಟು, ಡೀಸೆಲ್ ಬೆಲೆಯಲ್ಲಿ ಸುಮಾರು 2ರೂ. ಗಳಿಗಿಂತಲೂ ಅಧಿಕ ಏರಿಕೆ ಕಂಡಿದೆ. | ದೇಶದ ಜನತೆ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವಾಗ ಕೋಟ್ಯಾಂತರ ರೂ.ಗಳ ಪ್ಯಾಕೇಜ್ ಘೋಷಣೆ ಗಳಿಗಷ್ಟೇ ಸೀಮಿತವಾಗಿರುವ ಮತ್ತು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಬಿ.ಜೆ.ಪಿ. ಸರ್ಕಾರದ ಧೋರಣೆ ಖಂಡನೀಯ. ಜನ ರೊಚ್ಚಿಗೇಳುವ ಮುನ್ನ ತೈಲ ಬೆಲೆಗಳನ್ನು ಜನ ಸಾಮಾನ್ಯರಿಗೆ ಎಟಕುವ ರೀತಿಯಲ್ಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮೀಣ ಮಟ್ಟದ ಕಾರ್ಯಕರ್ತರು ಕೂಡ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಕಾಲ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಕಾರ್ಯಕರ್ತರ ಅಧಿಕಾರ ಸ್ವೀಕಾರ “ಪ್ರತಿಜ್ಞೆ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಕೆ.ಪಿ.ಸಿ.ಸಿ. ಕೋ-ಅರ್ಡಿನೇಟರ್ ಹರೀಶ್ ಕಿಣಿ ಮನವಿ ಮಾಡಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ ತೋಡಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಮುಂದಾಳು ಶಬರೀಶ್ ಸುವರ್ಣ, ಕಾಂಗ್ರೆಸ್ ಮುಖಂಡರುಗಳಾದ ಅರವಿಂದ ಶೆಟ್ಟಿ ವೇಣೂರು, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಸತೀಶ್ ಕಾಶಿಪಟ್ಣ, ಸದಾನಂದ ಶೆಟ್ಟಿ ಮರೋಡಿ, ರವೀಂದ್ರ ಪೂಜಾರಿ, ರಾಜು ಪೂಜಾರಿ, ದಿವಾಕರ ಭಂಡಾರಿ. ಜೀವಂಧರ್ ಜೈನ್, ಸುರ ನಾರಾಯಣ ಪೂಜಾರಿ, ಪ್ರವೀಣ್ ಡಿ’ಸೋಜಾ, ಮಹಮ್ಮದ್ ಶಫಿ, ದೇಜಪ್ಪ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version