Home Mangalorean News Kannada News ಕೊರೊನಾ ಹರಡುವ ಭೀತಿ: ಮನೆಯಲ್ಲೇ ನಮಾಜ್‌ ಮಾಡಲು ಸರ್ಕಾರದಿಂದ ಸೂಚನೆ

ಕೊರೊನಾ ಹರಡುವ ಭೀತಿ: ಮನೆಯಲ್ಲೇ ನಮಾಜ್‌ ಮಾಡಲು ಸರ್ಕಾರದಿಂದ ಸೂಚನೆ

Spread the love

ಕೊರೊನಾ ಹರಡುವ ಭೀತಿ: ಮನೆಯಲ್ಲೇ ನಮಾಜ್‌ ಮಾಡಲು ಸರ್ಕಾರದಿಂದ ಸೂಚನೆ

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಈಗಾಗಲೇ ಲಾಕ್‌ಡೌನ್ ಘೋಷಿಸಲಾಗಿರುವ 9 ಜಿಲ್ಲೆಗಳಲ್ಲಿರುವ ಮುಸ್ಲಿಂ ಸಮುದಾಯದವರು ಮನೆಯಲ್ಲೇ ನಮಾಜ್ ಮಾಡುವಂತೆ ಸರ್ಕಾರ ಕೋರಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ, ಮಾರ್ಚ್‌ 31ರವರೆಗೆ ಈ ಜಿಲ್ಲೆಗಳ ಮುಸ್ಲಿಂ ಸಮುದಾಯದವರು ದಿನದ ಎಲ್ಲ ಪ್ರಾರ್ಥನೆ ಹಾಗೂ ಶುಕ್ರವಾರದ ವಿಶೇಷ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು ಎಂದು ವಿನಂತಿಸಿದ್ದಾರೆ.

ಒಂದು ವೇಳೆ ಮಸೀದಿಗೆ ಬಂದು ಪ್ರಾರ್ಥನೆ ಮಾಡಿದರೆ, ಕಿಕ್ಕಿರಿದು ಸೇರಿ ಪ್ರಾರ್ಥನೆ ಮಾಡುವಾಗ ಭುಜಕ್ಕೆ ಭುಜ ತಾಕುವಾಗ, ಕೈ ಕುಲುಕುವಾಗ, ಒಂದೆಡೆ ಹೆಚ್ಚಿನ ಜನ ಸೇರುವಾಗ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಮಸೀದಿ ಮುಖ್ಯಸ್ಥರು, ವಕ್ಫ್‌ ಬೋರ್ಡ್‌ ಅಧ್ಯಕ್ಷರು ಮತ್ತು ಸದಸ್ಯರ ಜತೆ ಸಮಾಲೋಚನೆ ನಡೆಸಿದಾಗ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಹೀಗಾಗಿ, ಎಲ್ಲರೂ ಮನೆಯಿಂದಲೇ ನಮಾಜ್‌ ಮಾಡುವಂತೆ ಅವರು ಕೋರಿದ್ದಾರೆ.


Spread the love

Exit mobile version