Home Mangalorean News Kannada News ಕೊರೋನಾ ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವರದಿ ಈಗ ನೆಗೆಟಿವ್!

ಕೊರೋನಾ ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವರದಿ ಈಗ ನೆಗೆಟಿವ್!

Spread the love

ಕೊರೋನಾ ಪಾಸಿಟಿವ್ ಬಂದಿದ್ದ ಚಿತ್ರದುರ್ಗದ ಬಾಲಕಿಯ ವರದಿ ಈಗ ನೆಗೆಟಿವ್!

ಉಡುಪಿ : ಚಿತ್ರದುರ್ಗದಿಂದ ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿತ್ರದುರ್ಗ ಜಿಲ್ಲೆಯ 17 ವರ್ಷದ ಬಾಲಕಿಗೆ ಮೇ 19 ರಂದು ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಈಗ ನಡೆಸಿದ ಮರು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಗೆದ ಬಾಲಕಿ ದಾಖಲಾಗಿದ್ದ ವೇಳೆ ಆಕೆಯ ಗಂಟಲು ದ್ರವದ ಮಾದರಿಯನ್ನು ಮಂಗಳೂರಿನ ಲ್ಯಾಬ್ ನಲ್ಲಿ ಪರೀಕ್ಷಿಸಿದ್ದ ವೇಳೆ ಅದರ ವರದಿ ಪಾಸಿಟಿವ್ ಎಂದು ಪ್ರಕಟಿಸಲಾಗಿತ್ತು. ಬಳಿಕ ಮತ್ತೊಮ್ಮೆ ಕೋವಿಡ್ 19 ಪ್ರಯೋಗಾಲಯದಲ್ಲಿ 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರೀಕ್ಷೆಆ ಮಾಡಿದಾಗ ಯಾವುದೇ ರೀತಿಯ ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ ಹಾಗಾಗಿ ಕೊರೋನಾ ನೆಗೆಟಿವ್ ಎಂಬ ತೀರ್ಮಾನ ಕ್ಕೆ ಆರೋಗ್ಯ ಇಲಾಖೆ ಬಂದಿದ್ದು, ಬಾಲಕಿಗೆ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಮುಂದುವರಿಯುತ್ತಿದೆ.


Spread the love

Exit mobile version