Home Mangalorean News Kannada News ಕೊರೋನಾ ಲಾಕ್ ಡೌನ್ – ಕಾಪು ಬಿಜೆಪಿ ವತಿಯಿಂದ ಉದ್ಯಾವರದಲ್ಲಿ ದಿನಗೂಲಿ ನೌಕರರಿಗೆ ಊಟ ವಿತರಣೆ

ಕೊರೋನಾ ಲಾಕ್ ಡೌನ್ – ಕಾಪು ಬಿಜೆಪಿ ವತಿಯಿಂದ ಉದ್ಯಾವರದಲ್ಲಿ ದಿನಗೂಲಿ ನೌಕರರಿಗೆ ಊಟ ವಿತರಣೆ

Spread the love

ಕೊರೋನಾ ಲಾಕ್ ಡೌನ್ – ಕಾಪು ಬಿಜೆಪಿ ವತಿಯಿಂದ ಉದ್ಯಾವರದಲ್ಲಿ ದಿನಗೂಲಿ ನೌಕರರಿಗೆ ಊಟ ವಿತರಣೆ

ಉಡುಪಿ : ಕೊರೊನಾ ಲಾಕ್ ಡೌನ್ ನಿಂದಾಗಿ ಅನೇಕ ಬಡವರು ಮತ್ತು ಅಶಕ್ತರ ಬದುಕು ದುಸ್ತರವಾಗಿದೆ. ಮುಖ್ಯವಾಗಿ ಅಂದಂದೇ ದುಡಿದು ತಿನ್ನಬೇಕಾದ ಬಡ ವರ್ಗಕ್ಕೆ ಲಾಕ್ ಡೌನ್ ನಿಂದ ತೀವ್ರ ತೊಂದರೆಯಾಗಿದೆ. ಇಂಥವರಿಗೆ ದಾನಿಗಳ ನೆರವಿನಿಂದ ಊಟ ವಿತರಿಸುವ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ಉಡುಪಿಯಲ್ಲಿ ನಡೆಯುತ್ತಿದೆ.

ಶನಿವಾರ ಉದ್ಯಾವರದಲ್ಲಿ ದಿನಕೂಲಿ ನೌಕರರಿಗೆ ಕಾಪು ಬಿ.ಜೆ.ಪಿ ವತಿಯಿಂದ ಊಟದ ವ್ಯವಸ್ಥೆ ಕಲಿಸಲಾಯಿತು. ಉದ್ಯಾವರಲ್ಲಿರುವ ದಿನಗೂಲಿ ನೌಕರರು ಮಧ್ಯಾಹ್ನ ಊಟದ ಹೊತ್ತಿಗೆ ಜನರು ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು. ಸಾಮಾಜಿಕ ಅಂತರ ಕಾಪಾಡುವ ಮೂಲಕ ಬಂದ ಪ್ರತಿಯೊಬ್ಬರಿಗೂ ಊಟದ ಪೊಟ್ಟಣ ನೀಡಿ ಕಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಕಾಪು ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಕಾರ್ಯದರ್ಶಿ ರಾಜೇಶ್ ಕುಂದರ್, ಹಿಂದೂಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ಪಡುಕೆರೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ಜಿತೇಂದ್ರ ಶೆಟ್ಟಿ ಉದ್ಯಾವರ ಹಾಗೂ ಇತರರು ಉಪಸ್ಥಿತರಿದ್ದರು


Spread the love

Exit mobile version