ಕೊರೋನ ವಿಚಾರದಲ್ಲಿ ಅಧಿಕಾರಿಗಳ ಮೇಲಿನ ಪ್ರಮೋದ್ ಮಧ್ವರಾಜ್ ಆರೋಪಕ್ಕೆ ಶಾಸಕ ಕೆ. ರಘುಪತಿ ಭಟ್ ಆಕ್ರೋಶ

Spread the love

ಕೊರೋನ ವಿಚಾರದಲ್ಲಿ ಅಧಿಕಾರಿಗಳ ಮೇಲಿನ ಪ್ರಮೋದ್ ಮಧ್ವರಾಜ್ ಆರೋಪಕ್ಕೆ ಶಾಸಕ ಕೆ. ರಘುಪತಿ ಭಟ್ ಆಕ್ರೋಶ

ಉಡುಪಿ: ರಾತ್ರಿ ಹಗಲೆನ್ನದೆ ತಮ್ಮ ಜೀವದ ಹಂಗನ್ನು ತೊರೆದು ಕೊರೋನ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಉಡುಪಿ ಜಿಲ್ಲಾಧಿಕಾರಿಯವರು ಸೇರಿದಂತೆ ಜಿಲ್ಲೆಯ ಸಂಪೂರ್ಣ ಅಧಿಕಾರಿಗಳ ತಂಡವನ್ನು ಪ್ರಶಂಶಿಸುವುದನ್ನು ಬಿಟ್ಟು ಅವರ ವಿರುದ್ಧ ವ್ಯರ್ಥಾ ಆರೋಪ ಮಾಡುವುದು ಸಮಂಜಸವಲ್ಲ. ಸತತ 60 ದಿನಗಳಿಂದ ಕೊರೋನ ಸಂಧಿಗ್ದತೆಯಿಂದ ಜಿಲ್ಲೆಯ ಜನ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ನಾಯಕರುಗಳು ಇಂದು ಜಿಲ್ಲಾಧಿಕಾರಿಗಳ, ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಪಸ್ವರ ಎತ್ತುತ್ತಿರುವುದು ಖಂಡನೀಯ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ಕ್ವಾರಂಟೈನ್ ಅವಧಿ ಮುಗಿದರೂ ಗರ್ಭಿಣಿ ಮಹಿಳೆಯೊಬ್ಬರಿಗೆ ಮನೆಗೆ ತೆರಳಲು ಅವಕಾಶ ನೀಡದ ಉಡುಪಿ ಜಿಲ್ಲಾಧಿಕಾರಿಗಳ ವರ್ತನೆಯ ಬಗ್ಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗಳಿಗೆ ದೂರು ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್

ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಸುಮಾರು 7000 ಮಂದಿ ಆಗಮಿಸಿದ್ದು, ಅವರಲ್ಲಿ ಕೆಲವರು ಸರ್ಕಾರಿ ಕ್ವಾರಂಟೈನ್ ಇನ್ನು ಕೆಲವರು ಹೊಟೇಲ್ ಕ್ವಾರಂಟೈನ್ ನಲ್ಲಿ ಇದ್ದಾರೆ.ನಿಯಮಾವಳಿಯಂತೆ ಅವರ ಗಂಟಲ ದ್ರವ (ಸ್ಯ್ವಾಬ್ ಟೆಸ್ಟ್) ಪರೀಕ್ಷೆ ನಡೆಸಿ ಅದರ ವರದಿ ಬಂದ ನಂತರ ಸರ್ಕಾರದ ಮಾರ್ಗಸೂಚಿಯನ್ವಯ ಕ್ವಾರಂಟೈನ್ ನಿಂದ ಬಿಡುಗಡೆಗೊಳಿಸಲಾಗುವುದು.

ಸಾವಿರಾರು ಮಂದಿಯ ಪರೀಕ್ಷೆ ನಡೆಸುವಾಗ ವರದಿ ಬರಲು ವಿಳಂಬವಾಗುವುದು ಸಾಮಾನ್ಯ. ಆಡಳಿತ ವ್ಯವಸ್ಥೆಯಲ್ಲಿ ಇದ್ದವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ. ಈ ಹಿಂದೆ ಜವಾಬ್ದಾರಿಯುತ ಸ್ಥಾನವನ್ನು ನಿಭಾಯಿಸಿದ ಮಾಜಿ ಶಾಸಕರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರ ಮೇಲೆ ಆರೋಪ ಮಾಡಿರುವುದು ಅವರ ಮಾನಸಿಕತೆಯನ್ನು ಎತ್ತಿ ತೋರಿಸುತ್ತದೆ ಎಂದು  ಮಾಜಿ ಸಚಿವರ ಹೆಸರನ್ನು ಪ್ರಸ್ತಾಪಿಸದೆ ಭಟ್ ಆಕ್ರೋಶ ವ್ಯಕ್ತಪಡಿಸಿದ

ಇವರು ಕಳೆದ 60 ದಿನಗಳಿಂದ ಹೋಂ ಕ್ವಾರಂಟೈನ್ ನಲ್ಲಿದ್ದು ಜಿಲ್ಲೆಯ ಜನ ಸಾಮಾನ್ಯರ ಪರಿಸ್ಥಿತಿಯ ಬಗ್ಗೆ ಗಮನ ಹರಿಸದೆ ಈಗ ಬಂದು ಅಧಿಕಾರಿಗಳ ಬಗ್ಗೆ ಆರೋಪಗಳನ್ನು ಹೊರಿಸಿದರೆ ಉಡುಪಿಯ ಜನತೆ ಇದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕೆ. ರಘುಪತಿ ಭಟ್ ಅವರು ಕೋವಿಡ್ – 19(ಕೊರೋನ) ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಪೂರ್ಣ ಅಧಿಕಾರಿಗಳ ಜತೆ ನಾವಿದ್ದೇವೆ. ನೀವು ನಿರ್ಭೀತಿಯಿಂದ ನಿಮ್ಮ ಸೇವೆ ಮುಂದುವರಿಸಿ ಎಂದು ದೈರ್ಯ ತುಂಬಿದ್ದಾರೆ.


Spread the love