Home Mangalorean News Kannada News ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ನಗರಸಭಾ ಸದಸ್ಯರಿಗೆ ಸಭಾ ನಡವಳಿಕೆ ತರಬೇತಿ ನೀಡಲಿ: ವೆರೋನಿಕಾ...

ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ನಗರಸಭಾ ಸದಸ್ಯರಿಗೆ ಸಭಾ ನಡವಳಿಕೆ ತರಬೇತಿ ನೀಡಲಿ: ವೆರೋನಿಕಾ ಕರ್ನೆಲಿಯೊ

Spread the love

ಕೋಟ ಶ್ರೀನಿವಾಸ ಪೂಜಾರಿ  ಬಿಜೆಪಿ ನಗರಸಭಾ ಸದಸ್ಯರಿಗೆ ಸಭಾ ನಡವಳಿಕೆ ತರಬೇತಿ ನೀಡಲಿ: ವೆರೋನಿಕಾ ಕರ್ನೆಲಿಯೊ

ಉಡುಪಿ: ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಗುಂಡಾಗಿರಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಜಡ್ಕಾ ಸ್ಟ್ಯಾಂಡ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪೆಂಡಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ತೋರಿದ ದುರ್ವತನೆಗೆ ಖಂಡನೆ ವ್ಯಕ್ತಪಡಿಸಿದ ಕಾರ್ಯಕರ್ತರು, ನಗರಸಭೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಅಗೌರವ ತೋರಿದ ಸದಸ್ಯರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ಮಾತನಾಡಿ, ನಗರಸಭಾ ಬಿಜೆಪಿ ಸದಸ್ಯರಿಗೆ ಸಭಾ ನಡವಳಿಕೆಗಳ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ. ಸಭೆಯಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕೆಂಬುವುದನ್ನು ಬಿಜೆಪಿ ಸದಸ್ಯರು ಇನ್ನೂ ಸರಿಯಾಗಿ ತಿಳಿದುಕೊಂಡಿಲ್ಲ. ಒಂದು ವೇಳೆ ಅವರಿಗೆ ತಿಳಿಸಿದ್ದರೆ, ಈ ರೀತಿಯ ವರ್ತನೆ ತೋರುತ್ತಿರಲಿಲ್ಲ ಎಂದು ಟೀಕಿಸಿದರು.

ಉಡುಪಿ ನಗರದ ಅತ್ಯಂತ ಪ್ರಜ್ಞಾವಂತ ನಾಗರಿಕರೂ ಆಯ್ಕೆ ಮಾಡಿ ಕಳುಹಿಸಿದಂತ ಜನಪ್ರತಿನಿಧಿಗಳು ಈ ರೀತಿಯಾಗಿ ದುರ್ವತನೆ ತೋರಿರುವುದು ಅತ್ಯಂತ ಖಂಡನೀಯ. ಅವರ ಪಕ್ಷದಲ್ಲಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಸಭಾನಡವಳಿಕೆಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರೇ ಖುದ್ದಾಗಿ ನಗರಸಭಾ ಬಿಜೆಪಿ ಸದಸ್ಯರಿಗೆ ತರಬೇತಿ ನೀಡಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ ಮಾತನಾಡಿ, ಬಿಜೆಪಿ ಸದಸ್ಯರು ಅಧಿಕಾರ ವಿಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತೆ ಆಗಿದ್ದಾರೆ. ಯಾವುದನ್ನಾದರೂ ವಿರೋಧ ಮಾಡಲು ಕಾರಣ ಬೇಕು. ಆದರೆ ಬಿಜೆಪಿಯವರಿಗೆ ಯಾವುದೇ ಕಾರಣ ಬೇಕಾಗಿಲ್ಲಘಿ. ಕಲಾಪಗಳನ್ನು ನಡೆಸಬಾರದೆನ್ನುವುದೇ ಅವರ ಮುಖ್ಯ ಉದ್ದೇಶ. ಅವರ ಈ ಆಟಾಟೋಪಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಧ್ವನಿ ಏರಿಸಿ ಮಾತನಾಡಲು ನಮಗೂ ಗೊತ್ತಿದೆ. ನಮಗೆ ಗದ್ದಲ ಮಾಡುವುದು ಮುಖ್ಯವಲ್ಲ, ನಗರದ ಅಭಿವೃದ್ಧಿ ಮುಖ್ಯ. ಧ್ವನಿ ಏರಿಸಿಕೊಂಡು ಕಾಂಗ್ರೆಸ್‍ನ ಧ್ವನಿಯನ್ನು ಅಡಗಿಸುತ್ತೇವೆಂದು ಎನಿಸಿಕೊಂಡಿದ್ದಾರೆ. ಅದು ಬಿಜೆಪಿಯವರ ದೊಡ್ಡ ಕನಸು. ಮೀಸಲಾತಿ ತಂದದ್ದು ಕಾಂಗ್ರೆಸ್, ಬಿಜೆಪಿ ಅಲ್ಲಘಿ. ಇಂದು ಸಾಮಾನ್ಯ ಮಹಿಳೆ ನಗರಸಭಾ ಅಧ್ಯಕ್ಷೆಯಾಗಿರುವುದು ಬಿಜೆಪಿಯಿಂದ ಸಹಿಸಿಕೊಳ್ಳಲಾಗುತ್ತಿಲ್ಲಘಿ. ಅದಕ್ಕಾಗಿ ಗದ್ದಲ ಮಾಡುತ್ತಿದ್ದಾರೆ ಎಂದು ದೂರಿದರು.

ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‍ರಾಜ್, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಸೆಲಿನಾ ಕರ್ಕಡ, ಪ್ರಖ್ಯಾತ್ ಶೆಟ್ಟಿ, ಜನಾರ್ದನ ಭಂಡಾರ್ಕರ್, ಪಿ. ಯುವರಾಜ್, ಚಂದ್ರಿಕಾ ಶೆಟ್ಟಿ, ಡಾ.ಸುನಿತಾ ಶೆಟ್ಟಿ, ನಾಗೇಶ್ ಉದ್ಯಾವರ, ಪ್ರಶಾಂತ್ ಪೂಜಾರಿ, ನರಸಿಂಹಮೂರ್ತಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 


Spread the love

Exit mobile version