Home Mangalorean News Kannada News ಕೋರಂ ಕೊರತೆ: ತೆಂಕನಿಡಿಯೂರು ಗ್ರಾಪಂ ಸಾಮಾನ್ಯ ಸಭೆ ರದ್ದು

ಕೋರಂ ಕೊರತೆ: ತೆಂಕನಿಡಿಯೂರು ಗ್ರಾಪಂ ಸಾಮಾನ್ಯ ಸಭೆ ರದ್ದು

Spread the love

ಕೋರಂ ಕೊರತೆ: ತೆಂಕನಿಡಿಯೂರು ಗ್ರಾಪಂ ಸಾಮಾನ್ಯ ಸಭೆ ರದ್ದು

ಉಡುಪಿ: ಇಲ್ಲಿನ ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ತಿಂಗಳ ಸಾಮಾನ್ಯ ಸಭೆ ಕೋರಂ ಇಲ್ಲದೆ ರದ್ದುಗೊಂಡ ಘಟನೆ ಗುರುವಾರ ನಡೆದಿದೆ.

ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ತಿಂಗಳ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷರ ನೇತೃತ್ವದಲ್ಲಿ ನಿಗದಿಯಾಗಿತ್ತು. ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಪ್ರಸ್ತುತ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತವಿದ್ದು 14 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 12 ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದೆ.

ಗುರುವಾರ ಸಾಮಾನ್ಯ ಸಭೆಯನ್ನು ಪಂಚಾಯತ್ ಅಧ್ಯಕ್ಷರೇ ನಿಗದಿ ಮಾಡಿದ್ದು ಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸಹಿತ ಎಲ್ಲಾ ಸದಸ್ಯರು ಗೈರು ಹಾಜರಾಗಿದ್ದು ಕಾಂಗ್ರೆಸ್ ಬೆಂಬಲಿ 10 ಮಂದಿ ಸದಸ್ಯರು ಹಾಜರಾಗಿದ್ದರು. ಸಭೆಯ ಸಮಯ ಮೀರಿ ಹೋದರೂ ಸದಸ್ಯರು ಹಾಜರಾಗದ ಹಿನ್ನಲೆಯಲ್ಲಿ ಕೋರಂ ಇಲ್ಲದ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು.

ಸಭೆಗೂ ಮುನ್ನ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಪಂಚಾಯತ್ ಗೆ ಆಗಮಿಸಿದ್ದರೂ ಕೂಡ ಸಾಮಾನ್ಯ ಸಭೆಗೆ ಹಾಜರಾಗದೆ ಗೈರಾಗಿರುವುದು ಕುತೂಹಲ ಮೂಡಿಸಿದೆ.


Spread the love

Exit mobile version