ಕೋರೊನಾ ಚಿಕಿತ್ಸೆಗೆ ಹೆಚ್ಚು ದರ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Spread the love

ಕೋರೊನಾ ಚಿಕಿತ್ಸೆಗೆ ಹೆಚ್ಚು ದರ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಮಂಗಳೂರು: ಕೊರೊನಾ ಸಂಕ್ರಾಮಿ ರೋಗವನ್ನು ತಡೆಗಟ್ಟಲು ಹಾಗೂ ನಿಗದಿತ ದರಕ್ಕಿಂತ ಹೆಚ್ಚು ಚಿಕಿತ್ಸಾ ವೆಚ್ಚವನ್ನು ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಮತ್ತು ಉಚಿತ ಕೊರೊನಾ ಪರೀಕ್ಷೆ ಹಾಗೂ ಚಿಕಿತ್ಸೆಗೆ ನಗರಪಾಲಿಕೆಯ ವಿರೋಧ ಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದ್ದು ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಮತ್ತು ಮಾಜಿ ಮೇಯರ್ ಗಳಾದ ಎಂ. ಶಶಿಧರ ಹೆಗ್ಡೆ ಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು.

ಮಂಗಳೂರು ನಗರ ದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಲೋಕ್ ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಚಿಕಿತ್ಸೆಗೆ ನೀಡಲು ವಿಧಿಸುವ ಚಿಕಿತ್ಸಾ ವೆಚ್ಚ ದುಭಾರಿ ಯಾಗಿದ್ದು ಸರಕಾರ ಮಾಡಿರುವ ಮಾರ್ಗ ಸೂಚಿಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಇನ್ನೂ ಕಡಿಮೆ ಮಾಡಿ ಸರಕಾರದ ಮಾರ್ಗ ಸೂಚಿಯಂತೆ ದರ ವಸೂಲಿ ಮಾಡುವಂತೆ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿ ಹೆಚ್ಚು ಹಣ ವಸೂಲು ಮಾಡುವ ಆಸ್ಪತ್ರೆ ಗಳ ಮೇಲೆ ಕ್ರಮ ಕೈಗೊಳ್ಳಬೇಕು.

ಮೆಡಿಕಲ್ ಕಾಲೇಜ್ ಆಸ್ಪತೆ ಗಳ ಮೂಲಕ ಎಲ್ಲರಿಗೂ ಬಿ. ಪಿ. ಎಲ್ ಮತ್ತು ಎ. ಪಿ.ಎಲ್ ಎಂಬ ಭೇಧವಿಲ್ಲದೆ ಕೇವಲ ತನ್ನ ಗುರುತು ಚೀಟಿ ಆಧಾರ್ ಕಾರ್ಡ್ ತೋರಿಸಿದ ಕೂಡಲೇ ಉಚಿತ ವಾಗಿ ಕೊರಾನ ಕ್ಕೆ ಚಿಕಿತ್ಸೆ ನೀಡಬೇಕು, ಸಮುದಾಯ ಆಸ್ಪತೆ ಗಳ ಮೂಲಕ ಉಚಿತ ಕೊರೊನಾ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ


Spread the love