ಕೋರೋನ ವೈರಸ್ ಪ್ರಧಾನ ಮಂತ್ರಿ ಕೇಂದ್ರ ಪರಿಹಾರ ನಿಧಿಗೆ ಅದಮಾರು ಮಠದಿಂದ ದೇಣಿಗೆ

Spread the love

ಕೋರೋನ ವೈರಸ್ ಪ್ರಧಾನ ಮಂತ್ರಿ ಕೇಂದ್ರ ಪರಿಹಾರ ನಿಧಿಗೆ ಅದಮಾರು ಮಠದಿಂದ ದೇಣಿಗೆ

ಉಡುಪಿ: ಕೋರೋನ ವೈರಸ್ ಪ್ರಧಾನ ಮಂತ್ರಿ ಕೇಂದ್ರ ಪರಿಹಾರ ನಿಧಿಗೆ 55,55,555 ರೂಪಾಯಿ ಚೆಕ್ಕನ್ನು ದೇಣಿಗೆ ಯಾಗಿ ಉಡುಪಿಯ ಅದಮಾರು ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳಾದ  ಶ್ರೀ ಈಶ ಪ್ರಿಯ ಸ್ವಾಮೀಜಿ ಇವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಉಡುಪಿಯ ಶಾಸಕರಾದ ಕೆ. ರಘುಪತಿ ಭಟ್ ಇವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ರವರಿಗೆ ಹಸ್ತಾಂತರಿಸಿದರು.

ಕಾಲ ಕಾಲಕ್ಕೆ ಮಳೆ ಬರಬೇಕು ಮಳೆಯಿಂದ ಬೆಳೆ ಬೆಳೆಯಬೇಕು.ಆದರೆ ಪ್ರಸ್ತುತ ಒಬ್ಬ ಮಾಡಿದ ತಪ್ಪಿನಿಂದ ವಿಶ್ವದ ಪ್ರತಿಯೊಬ್ಬರೂ ತಲೆ ಕೊಡುವ ಪ್ರಸಂಗ ಬಂದು ಜಗತ್ತಿಗೆ ದೊಡ್ಡ ಅನಾಹುತ ಬಂದಿದೆ.ನಮ್ಮ ದೇಶದ ಪ್ರಧಾನಿಗಳು ಸಂಕಷ್ಟದಲ್ಲಿರುವವರ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಈ ನಿಟ್ಟಿನಲ್ಲಿ ನಾವು ನಮ್ಮ ಮಠದಿಂದ ದೇವರಲ್ಲಿ ಪ್ರಾರ್ಥಿಸಿ ಮೊತ್ತವನ್ನು ಪ್ರಸಾದ ರೂಪವಾಗಿ ನೀಡಿದ್ದೇವೆ. ಆದಷ್ಟು ಬೇಗ ಎಲ್ಲರೂ ಆರೋಗ್ಯವಂತರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಂದೇಶ ನೀಡಿದರು.

ದೇಶದ ಈ ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಯಾವುದೇ ಮೂಲಗಳಿಂದ ತೆರಿಗೆ ರೂಪದ ಆದಾಯವಿರುವುದಿಲ್ಲ.ಆದರೆ ವಿವಿಧ ಇಲಾಖೆಗಳ ಖರ್ಚು ಸಾರ್ವಜನಿಕರ ಆರೋಗ್ಯದ ಖರ್ಚುಗಳು ಇದ್ದೆ ಇರುತ್ತದೆ.ಇದಕ್ಕೆ ನಾವು ವಾರದಲ್ಲಿ ಮೂರೂ ಹೊತ್ತಿನ ಊಟವನ್ನು ಬಿಟ್ಟು ಅದರ ಉಳಿತಾಯವನ್ನು ಕಷ್ಟದಲ್ಲಿರುವವರಿಗೆ ನಾವು ಹಂಚಬಹುದು.ಎಲ್ಲರ ಪರಿಶ್ರಮದಿಂದ ವಿಶ್ವದಲ್ಲಿಯೇ ಭಾರತ ದೇಶವು ಪ್ರಥಮ ಕೊರೋನ ಮುಕ್ತ ದೇಶವಾಗಿ ವಿಶ್ವಗುರುವಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಈ ಹಿಂದೆ ಅದಮಾರು ಮಠದ ವತಿಯಿಂದ 2,00,000.00 ರೂಪಾಯಿಗಳನ್ನು ಪ್ರಧಾನ ಮಂತ್ರಿಯವರ ಕೊರೋನ ಪರಿಹಾರ ನಿಧಿಗೆ ನೀಡಲಾಗಿತ್ತು.ಪರ್ಯಾಯ ಶ್ರೀ ಅದಮಾರು ಮಠ ಶ್ರೀಕೃಷ್ಣ ಮಠದ ವತಿಯಿಂದ ದಿನವಹಿ ಸಾಮಗ್ರಿಗಳ 1000 ಕಿಟ್ ಗಳನ್ನೂ ಹಾಗೂ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ಶ್ರೀ ದುರ್ಗಾದೇವಾಸ್ಥಾನದಿಂದ 250 ಕಿಟ್ ಗಳನ್ನೂ ನೀಡಲಾಗಿದೆ.

ಈ ಸಂದರ್ಭದಲ್ಲಿ ಶಾಸಕರಾದ ಕೆ ರಘುಪತಿ ಭಟ್ , ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಎನ್. ವಿಷ್ಣುವರ್ಧನ್ ಮತ್ತು ಮಠದ ಆಡಳಿತ ವರ್ಗದವರು ಉಪಸ್ಥಿತರಿದ್ದರು.


Spread the love