Home Mangalorean News Kannada News ಕೋವಿಡ್ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಲಕ್ಷಾಂತರ ಹಣ ವಸೂಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿಯ...

ಕೋವಿಡ್ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಲಕ್ಷಾಂತರ ಹಣ ವಸೂಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿಯ ಬಂಧನ

Spread the love

ಕೋವಿಡ್ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಲಕ್ಷಾಂತರ ಹಣ ವಸೂಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿಯ ಬಂಧನ

ಕುಂದಾಪುರ : ಕೋವಿಡ್ ರೋಗಿಗಳ ಆರೈಕೆಗೆ ಜಿಲ್ಲಾಡಳಿತ ಲಕ್ಷಾಂತರ ಹಣ ವಸೂಲಿ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಮಲ ಶಿಲೆಯ ಸುರೇಶ್ ಕುಲಾಲ್ (27) ಎಂದು ಗುರುತಿಸಲಾಗಿದ್ದು ಇತ ಎರಡು ತಿಂಗಳ ಹಿಂದೆ ಬೆಂಗಳೂರಿನಿಂದ ವಾಪಾಸಾಗಿದ್ದ ಎನ್ನಲಾಗಿದೆ.

ಉಡುಪಿ ಜಿಲ್ಲೆಯ 14 ದಿನಗಳ ಕಾಲ ಕ್ವಾರ್ ಟೈನ್ ಮುಗಿಸಿ ಬಂದು ಯಾವುದೇ ಲಕ್ಷಣಗಳು ಇಲ್ಲದೆ ಇದ್ದರೂ ಆರೋಗ್ಯ ತಪಾಸಣೆ ಅಂತ ಹೇಳಿ ಆರೋಗ್ಯ ಕೇಂದ್ರಕ್ಕೆ ಕರೆಸಿಕೊಂಡು ಪಾಸಿಟಿವ್ ಅಂತ ಹೇಳಿ ಕೂಡಿ ಹಾಕಿ ಪ್ರತಿ ಕೇಸಿಗೆ 3,50,000/- ಹಣ ಮಾಡುವ ದಂದೆ ಶುರುವಾಗಿದೆ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಕಿದ್ದ ಎನ್ನಲಾಗಿದ್ದು ಈತನ ವಿರುದ್ದ ವಂಡ್ಸೆಕಂದಾಯ ನಿರೀಕ್ಷಕ ರಾಘವೇಂದ್ರ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರನ್ನು ಸ್ವೀಕರಿಸಿದ ಶಂಕರನಾರಾಯಣ ಪೊಲೀಸರು ಸುರೇಶ್ ಕುಲಾಲ್ ನನ್ನು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ ಷರತ್ತು ಬದ್ದ ಜಾಮೀನು ನೀಡಿ ಬಿಡುಗಡೆ ಮಾಡಿದೆ.


Spread the love

Exit mobile version