ಕೋವಿಡ್ -19 : ಉಡುಪಿ ಜಿಲ್ಲೆಯಲ್ಲಿ 10 ಫೀವರ್ ಕ್ಲಿನಿಕ್ ಸ್ಥಾಪನೆ
ಉಡುಪಿ: ಕೊರೋನಾ ವೈರಸ್ ಸೋಂಕು ಪತ್ತೆ ಹಚ್ಚಲು ಉಡುಪಿ ಜಿಲ್ಲೆಯಲ್ಲಿ 10 ಕಡೆಗಳಲ್ಲಿ ಫಿವರ್ ಕ್ಲಿನಿಕ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ
- ಜಿಲ್ಲೆಯಲ್ಲಿ ಈಗಾಗಲೇ ಮಹಾರಾಷ್ಟ್ರ ಹಾಗೂ ಇತರ ಸ್ಥಳಗಳಿಂದ ಆಗಮಿಸಿದ ಅನೇಕರಲ್ಲಿಕೋವಿಡ್ ಸೋಂಕು ಕಂಡು ಬಂದಿದೆ ಎಲ್ಲರನ್ನು ಚಿಕಿತ್ಸೆ ಗೊಳಪಡಿಸಿದೆ
- ಉಡುಪಿ ಜಿಲ್ಲೆ ಸುಮಾರು 13 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಇಲ್ಲಿನ ಸ್ಥಳೀಯರಿಗೆ ಕೆವಿಡ್ ಹರಡುವುದನ್ನು ತಪ್ಪಿಸುವುದು ಜಿಲ್ಲಾಡಳಿತದ ಶಸ್ತ್ರವಾಗಿರುತ್ತದೆ.
- ಈ ಹಿನ್ನೆಲೆಯಲ್ಲಿ ಕೋವಿಡ್-19 ಲಕ್ಷಣಗಳಿರುವ ಯಾವುದೇ ವ್ಯಕ್ತಿಗಳನ್ನು ಪರೀಕ್ಷಿಸಿ ಸೋಂಕು ಇದ್ದಲ್ಲಿ ತಕ್ಷಣವೇ ಗುರುತಿಸಿ ಚಿಕಿತ್ಸೆಗೊಳಪಡಿಸುವುದು ಅತ್ಯಂತ ಮುಖ್ಯವಾಗಿರುತ್ತದೆ.
- ಜಿಲ್ಲೆಯಲ್ಲಿ ಈಗಾಗಲೇ ಕೊವಿಡ್ ಸರ್ವೆಲೈನ್ಸ್ ಚುರುಕುಗೊಳಿಸಿದ್ದು ಯಾವುದೇ ಸಂಶಯಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಬಿನ್ನ ವ್ಯಕ್ತಿಗಳನ್ನು ಗುರುತಿಸಿ ಅವರುಗಳಿಗೆ ಸೋಂಕು ತಗಲದಂತೆ ನೋಡಿಕೊಳ್ಳಲು ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ತಂಡ ರಚಿಸಲಾಗಿದೆ.
- ಹೀಗೆ ಗುರುತಿಸಿದ ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳನ್ನು ವೈದ್ಯಕೀಯವಾಗಿ ಪರೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಈಗಾಗಲೇ 10 ಜ್ವರ ದವಾಖಾನೆ(Clinic)ಗಳನ್ನು ಸ್ಥಾಪಿಸಲಾಗಿದೆ.
ಅವುಗಳು ಈ ಕೆಳಗಿನಂತಿದೆ.
1. CHC ಬೈಂದೂರು
2. GH ಕುಂದಾಪುರ
3. CHC ಕೋಟ
4. CHC ಬ್ರಹ್ಮಾವರ
5, ಜಿಲ್ಲಾ ಆಸ್ಪತ್ರೆ ಉಡುಪಿ
6, ಕೆ.ಎಂ.ಸಿ ಮಣಿಪಾಲ(Private)
7. CHC ಶಿರ್ವ
8. CHC ನಿಟ್ಟೆ
9. CHC ಹೆಬ್ರಿ
10, GH ಕಾರ್ಕಳ - ಈ ಮೇಲಿನ ಜ್ವರ ತಪಾಸಣೆ ದವಾಖಾನೆಗಳಲ್ಲಿ ಕೋವಿಡ್-19 ಸಂಶಯಾತ್ಮಕ ಪ್ರಕರಣಗಳನ್ನು ವೈದ್ಯಕೀಯ ಹಪಾಸಣೆಗೊಳಪಡಿಸುವ ಗಂಟಲು ಮಾದರಿ ಸಂಗ್ರಹಿಸುವ ಹಾಗೂ ಕೊವಿಡ್ ಅಲ್ಲದ ಇತರ ಜ್ವರ ಪ್ರಕರಣಗಳನ್ನು ಯೋಗ್ಯವಾಗಿ ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಬೇಕಾದ ಎಲ್ಲಾ ಸೌಲಭ್ಯ ಗಳನ್ನು ಒದಗಿಸಲಾಗಿದೆ.
- ಇವುಗಳಲ್ಲದೇ ಜಿಲ್ಲೆಯ ಎಲ್ಲಾ ದೊಡ್ಡ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಪ್ರತ್ಯೇಕ ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಇದರಿಂದಾಗಿ ಕೋವಿಡ್- 19 ಸಂಶಯದ ಪ್ರಕರಣಗಳು ಉಳಿದ ರೋಗಿಗಳಿಗೆ | ಆಸ್ಪತ್ರೆ ಸಿಬ್ಬಂದಿಗಳಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ.
- ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಒಳ ಪ್ರದೇಶಗಳಿಂದ ಬರುವ ರೋಗಿಗಳಿಗಗಿ ಪ್ರತ್ಯೇಕ ತಪಾಸಣೆ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ PHC ಸಿದ್ದಾಪುರದಲ್ಲಿ ಜ್ವರ ತಪಾಸಣೆ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯದಲ್ಲಿ ಸದ್ರಿ ಕೇಂದ್ರವನ್ನು ಕಾರ್ಯರಂಭಗೊಳಿಸಲಾಗುತ್ತದೆ.
- ಕೊವಿಡ್-19 ಸೋಂಕು ಜನಸಾಮಾನ್ಯ ಯಾರಿಗೂ ಕೂಡ ಹರಡಬಹುದಾಗಿದ್ದು ಶೀಘ್ರ ಪತ್ತೆ ತ್ವರಿತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಯಾವುದೇ ಜ್ವರ | ಕೆಮ್ಮು / ಉಸಿರಾಟದ ತೊಂದರೆ ಮುಂತಾದ ಕೊವಿಡ್ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಜ್ವರ ತಪಾಸಣಾ ಕೇಂದ್ರಕ್ಕೆ ಹೋಗಿ ತಪಾಸಣೆಗೊಳಪಡಿಸಲು ಜಿಲ್ಲಾಡಳಿತ ವಿನಂತಿಸುತ್ತದೆ.