Home Mangalorean News Kannada News ಕೋವಿಡ್-19: ಉಡುಪಿ: ಪ್ರಧಾನಿ ಮೋದಿಯಿಂದ ಸೋಮಶೇಖರ್ ಭಟ್ ಕುಶಲೋಪರಿ

ಕೋವಿಡ್-19: ಉಡುಪಿ: ಪ್ರಧಾನಿ ಮೋದಿಯಿಂದ ಸೋಮಶೇಖರ್ ಭಟ್ ಕುಶಲೋಪರಿ

m
Spread the love
RedditLinkedinYoutubeEmailFacebook MessengerTelegramWhatsapp

ಕೋವಿಡ್-19: ಉಡುಪಿ: ಪ್ರಧಾನಿ ಮೋದಿಯಿಂದ ಸೋಮಶೇಖರ್ ಭಟ್ ಕುಶಲೋಪರಿ

ಉಡುಪಿ: ಜನಸಂಘದ ಕಾಲದಿಂದಲೂ ಸಂಘ ಪರಿವಾರದ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸುವುದರ ಜತೆಗೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಂ ಪಾತ್ರ ವಹಿಸಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತ ಸೋಮಶೇಖರ್ ಭಟ್ ಅವರ ಯೋಗಕ್ಷೇಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ವಿಚಾರಿಸಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಮೋದಿಯವರ ಕರೆಯಿಂದ ಸೋಮಶೇಖರ ಭಟ್ ಭಾವುಕರಾಗಿದ್ದು, ಪ್ರಧಾನಿ ಕರೆಯಿಂದ ತುಂಬಾ ಖುಷಿಯಾಗಿದೆ ಭಯ್ಯಾಜಿ ರಾವ್ ಜೋಶಿಯವರ ಕಾಲದಿಂದ ನಾನು ಆರ್ ಎಸ್ ಎಸ್ ನಲ್ಲಿ ಕಲಸ ಮಾಡಿದ್ದೇನೆ. ಜಯಪುರ ಅಧೀವೇಶನದಲ್ಲೂ ನಿಮ್ಮನ್ನು ಭೇಟಿಯಾಗಿದ್ದೆ ಎಂದು ಪ್ರಧಾನಿ ಜೊತೆ ಅನುಭವವನ್ನು ಹಂಚಿಕೊಂಡ ಸೋಮಶೇಖರ್ ಭಟ್ ಅವರು ಎಮರ್ಜೆನಿಯ ದಿನಗಳ ಮೆಲುಕು ಹಾಕಿದರು. ಈ ವೇಳೆ ತಮ್ಮ ಆರೋಗ್ಯ ಜೋಪಾನ ಎಂದು ಮೋದಿ ಕಾಳಜಿ ವ್ಯಕ್ತಪಡಿಸಿದರು.


Spread the love

Exit mobile version