ಕೋವಿಡ್ 19: ಜನಸಂದಣಿ ತಡೆಯಲು ಚಾರ್ಟ್ ಪ್ರಕಾರ ಕ್ರಮಕ್ಕೆ ಮನವಿ

Spread the love

ಕೋವಿಡ್ 19: ಜನಸಂದಣಿ ತಡೆಯಲು ಚಾರ್ಟ್ ಪ್ರಕಾರ ಕ್ರಮಕ್ಕೆ ಮನವಿ

ಮಂಗಳೂರು: ಕೋರೋನ ವೈರಸ್ ಪೀಡಿತರ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ 21 ದಿನ ಲಾಕ್ಔಟ್. ಘೋಷಣೆ. ರಾಜ್ಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದರು ಜನ ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿರುಗಾಡುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಾನಾ ರೀತಿಯಲ್ಲಿ ಸಮಸ್ಯೆಗಳು ಇದರಿಂದ ವೈರಸ್ ಹೆಚ್ಚಾಗಲು ಕಾರಣವಾಗುತ್ತದೆ ಆದ್ದರಿಂದ ಜನಸಂದಣಿ ತಡೆಯುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಯವರಲ್ಲಿ ಮಂಗಳೂರಿನ ಉದ್ಯಮಿ ಗಿಲ್ಬರ್ಟ್ ಡಿಸೋಜಾ ಮನವಿ ಮಾಡಿದ್ದಾರೆ.

ವೋಟರ್ ಐಡಿಯ ಕಡೆಯ ಎರಡು ಸಂಖ್ಯೆಗಳನ್ನು ಗುರುತಿಸಿ ಮೇಲೆ ನೀಡಿರುವ ಚಾರ್ಟ್ ಪ್ರಕಾರ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು ಈ ರೀತಿಯಲ್ಲಿ ವೋಟರ್ ಐಡಿಯ ನಂಬರ್ ಗಳನ್ನು ವಿಂಗಡನೆ ಮಾಡಿ ಆಯಾಯ ನಂಬರ್ ವುಳ್ಳ ಜನರು ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ಸರ್ಕಾರ ಕಟ್ಟಪ್ಪಣೆ ಮಾಡಿ ಇತರರು ಬಂದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡರೆ ಜನಸಂದಣಿ ಆಗುವುದನ್ನು ತಡೆಯಬಹುದು ಇದರಿಂದ ಪೊಲೀಸರಿಗೆ ಹೆಚ್ಚಿನ ಒತ್ತಡ ಇರುವುದಿಲ್ಲ ವೈರಸ್ ಹರಡುವುದನ್ನು ಈ ಮೂಲಕ ತಡೆಗಟ್ಟಲು ಉತ್ತಮ ಅವಕಾಶ. ಸರ್ಕಾರ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿ ಅವರು ಮನವಿ ಮಾಡಿದ್ದಾರೆ.

ಆದ್ದರಿಂದ ಉಡುಪಿ, ದಕ್ಷಿಣ ಕನ್ನಡದ ಉದ್ಯಮಿಗಳು ವಿಚಾರವಾದಿಗಳು ನ್ಯಾಯವಾದಿಗಳು ಹೀಗೆ ನಾನಾ ವರ್ಗದ ಜನರೊಡನೆ ಚರ್ಚಿಸಿ ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಲು ವಿನಂತಿಸಿದ್ದಾರೆ.


Spread the love