ಕೋವಿಡ್-19 ನಿಯಮ ಪಾಲನೆಯೊಂದಿಗೆ ಉಡುಪಿಯಲ್ಲಿ ಬಕ್ರೀದ್ ಆಚರಣೆ

Spread the love

ಕೋವಿಡ್-19 ನಿಯಮ ಪಾಲನೆಯೊಂದಿಗೆ ಉಡುಪಿಯಲ್ಲಿ ಬಕ್ರೀದ್ ಆಚರಣೆ

ಉಡುಪಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕೋವಿಡ್-19 ರ ಹಿನ್ನಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ಸರಕಾರ ಸೂಚಿಸಿದ ನಿಯಮಾವಳಿಗೆ ಅನುಗುಣವಾಗಿ ಕನಿಷ್ಠ ಸಂಖ್ಯೆ ಜನರು ಭಾಗವಹಿಸುವುದರೊಂದಿಗೆ ನಡೆಸಲಾಯಿತು.

ನಗರದ ಬ್ರಹ್ಮಗಿರಿ ನಾಯರ್ ಕೆರೆ ಹಾಸೀಮಿ ಮಸೀದಿಯಲ್ಲಿ ಮೌಲಾನಾ ಹಾಸೀಮ್ ಉಮ್ರಿ ಇವರ ನೇತೃತ್ವದಲ್ಲಿ ಎರಡು ಹಂತಗಳಲ್ಲಿ ಜನರು ಭಾಗವಹಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಈದ್ ನಮಾಜ್ ನೇರವೇರಿಸಲಾಯಿತು. ಪ್ರಾರ್ಥನೆಗೂ ಮುನ್ನ ಮಸೀದಿಗೆ ಆಗಮಿಸುವವರಿಗೆ ಥರ್ಮಲ್ ಚೆಕ್ಕಿಂಗ್ ಮತ್ತು ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿತ್ತು.

ಈ ವೇಳೆ ಪ್ರವಚನ ನೀಡಿದ ಧರ್ಮಗುರುಗಳು ಜೀವನದಲ್ಲಿ ಹಲವು ಸಂದರ್ಭದಲ್ಲಿ ತ್ಯಾಗ ಮಾಡುವ ಸಂದರ್ಭಗಳು ಎದುರುಗೊಳ್ಳುತ್ತವೆ, ಎಲ್ಲರ ಬದುಕು ಹಸನಾಗಲು ತ್ಯಾಗವೂ ಮುಖ್ಯ. ಕೋವಿಡ್ -19 ರ ಸಮಯದಲ್ಲಿ ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.


Spread the love