ಕೋವಿಡ್-19 ನಿರ್ವಹಣೆಯಲ್ಲಿ ಎನ್ ಜಿ ಒ ಗಳನ್ನು ಬಳಸಿಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲ – ಮಾಜಿ ಶಾಸಕ ಜೆ ಆರ್ ಲೋಬೊ
ಮಂಗಳೂರು: ಕೋವಿಡ್-19 ನಿರ್ವಹಣೆಯಲ್ಲಿ ಎನ್ ಜಿ ಒ ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ. ಜೆ.ಆರ್.ಲೋಬೊ ಹೇಳಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರೇತರ ಸಂಸ್ಥೆಗಳುಉತ್ತಮ ಕೆಲಸ ಮಾಡುವ ಸಂಸ್ಥೆಗಳು. ಬಹಳ ವರ್ಷಗಳ ಹಿಂದಿನಿಂದಲೇ ಅವರು ವಿಕಲಚೇತನ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ವಿಪತ್ತು ನಿರ್ವಹಣೆ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ಬಹಳ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿರುತ್ತದೆ.
ಆದರೆ ಈ ಜಿಲ್ಲೆಯಲ್ಲಿ ಕೋವಿಡ್ 19 ನಿರ್ವಹಣೆಯಲ್ಲಿ ಅವರಿಗೆ ಸರಿಯಾದ ಪ್ರಾಮುಖ್ಯತೆಯನ್ನು ಜಿಲ್ಲಾಡಳಿತ ನೀಡುವಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಅರೋಗ್ಯ ಹಾಗೂ ವಿಪತ್ತು ನಿರ್ವಹಣೆ ವಿಷಯದಲ್ಲಿ ಬಹಳಷ್ಟು ಪರಿಣಿತಿ ಹೊಂದಿರುವ ಹಲವಾರು ಸಂಸ್ಥೆಗಳಿವೆ. ಇಂತಹ ಸಂಸ್ಥೆಗಳಿಗೆ ಕೋವಿಡ್ 19 ನಿರ್ವಹಣೆಯಲ್ಲಿ ಅವಕಾಶ ನೀಡಿದಲ್ಲಿ ಜಿಲ್ಲಾಡಳಿತಕ್ಕೆ ಒಂದು ಆನೆ ಬಲ ಬರುತ್ತಿತ್ತು. ಆದರೆ ಇಂತಹ ಒಳ್ಳೆಯ ಬಿಟ್ಟು ಕೇವಲ ಮಂಗಳೂರಿನ ಸೇವಾಂಜಲಿ ಟ್ರಸ್ಟ್ ಗೆ ಮಾತ್ರ ಅವಕಾಶ ಕೊಟ್ಟು ಇನ್ನುಳಿದ ಅನುಭವವುಳ್ಳ ಸಂಸ್ಥೆಯನ್ನು ಕಡೆಗಣಿಸಲಾಗಿದೆ. ಇದು ಬಹಳ ನೋವಿನ ವಿಚಾರ ಯಾಕೆಂದರೆ ಸಂಸ್ಥೆಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಷ್ಠೆಯಿಂದ ಬಡಜನತೆಯ ಪರವಾಗಿ ಸೇವೆ ಸಲ್ಲಿಸುವ ಸಂಸ್ಥೆಗಳು. ಈ ಸಂಧರ್ಭದಲ್ಲಿ ಅವರಿಗೆ ಅವಕಾಶ ನೀಡಿದ್ದಲ್ಲಿ ಅವರು ಜನರಿಗೆ ಕೇವಲ ಮಾಸ್ಕ್ ಮತ್ತು ಆಹಾರದ ಕಿಟ್ಟುಗಳನ್ನು ನೀಡುವುದರ ಜೊತೆಗೆ ಕೊರೊನ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಸಾಂತ್ವನ ಹಾಗೂ ಮಾಹಿತಿ ನೀಡಿ ಅವರ ಕುಟುಂಬಗಳಿಗೆ ಬೆಂಗಾವಾಲಾಗಿ ನಿಲ್ಲಲು ಹಾಗೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲು ಸಮರ್ಥರಿರುವ ಅನೇಕ ಸಂಘ ಸಂಸ್ಥೆಗಳಿವೆ.
ಇಂತಹ ಸಂಧರ್ಭದಲ್ಲಿ ಸರಕಾರವು ಎನ್ ಜಿ ಒಗಳನ್ನು ಬಳಸುವ ಅನೇಕ ನಿದರ್ಶನಗಳಿವೆ. ಆದರೆ ಇಂದು ಇಂತಹ ಸಂಸ್ಥೆಗಳನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ. ಈ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಸಂಪೂರ್ಣವಾಗಿ ಎಡವಿದ್ದಾರೆ.
ಈ ಕೋವಿಡ್ ಸಮಸ್ಯೆಯಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಿಸಲು ಜಿಲ್ಲಾಡಳಿತವು ಎನ್ ಜಿ ಒ ಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಈ ಬಗ್ಗೆ ಅತೀ ತುರ್ತಾಗಿ ಎಲ್ಲಾ ಎನ್ ಜಿ ಒ ಸಂಸ್ಥೆಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿ ಅವರನ್ನು ಕೋವಿಡ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮಾಜಿ ಶಾಸಕ ಜೆ. ಆರ್. ಲೋಬೊ ವಿನಂತಿಸಿದ್ದಾರೆ.
ಇಂದು ಬೆಳಿಗ್ಗೆ ಮ. ನ. ಪಾ. ದಲ್ಲಿ ಕಂಡು ಬಂದ ದ್ರಶ್ಯ ನಿಜಕ್ಕೂ ಕಳವಳಕಾರಿಯಾದ ವಿಷಯ. ಕೋವಿಡ್ 19 ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ಇದರ ಮದ್ಯೆ ಸಾವಿರಾರು ಸಂಖ್ಯೆಯಲ್ಲಿ ವಲೆಸೆ ಕಾರ್ಮಿಕರು ಸಾಮಾಜಿಕ ಅಂತರವಿಲ್ಲದೆ, ತಮ್ಮ ತಮ್ಮ ಊರಿಗೆ ತೆರಳಲು ಪಾಸ್ ವ್ಯವಸ್ಥೆಗೆ ಯಾವುದೇ ಸಾಮಾಜಿಕ ಅಂತರವಿಲ್ಲದೇ ಸಾಲು ಗಟ್ಟಿ ನಿಂತಿರುವುದು ನಿಜಕ್ಕೂ ಖೇದಕರ ವಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಂಪರ್ಕಿಸಿದಾಗ, ಅಲ್ಲಿ ಪಾಲಿಕೆಯ ಸರ್ವರ್ ಡೌನ್ ಎಂಬ ಮಾಹಿತಿಯನ್ನು ಕೊಟ್ಟು ಹಾರಿಕೆಯ ಉತ್ತರವನ್ನು ನೀಡಿರುತಾರೆ. ಇದರ ಬಗ್ಗೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಜಿಲ್ಲಾಧಿಕಾರಿಯಲ್ಲಿ ಲೋಬೊ ರವರು ಮನವಿ ಮಾಡಿರುತ್ತಾರೆ.