Home Mangalorean News Kannada News ಕೋವಿಡ್-19 ವೇಳೆಯಲ್ಲಿ ಚುನಾವಣೆ, ಉಪ ಚುನಾವಣೆಗಾಗಿ ರಾಜ್ಯಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಕೋವಿಡ್-19 ವೇಳೆಯಲ್ಲಿ ಚುನಾವಣೆ, ಉಪ ಚುನಾವಣೆಗಾಗಿ ರಾಜ್ಯಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Spread the love

ಕೋವಿಡ್-19 ವೇಳೆಯಲ್ಲಿ ಚುನಾವಣೆ, ಉಪ ಚುನಾವಣೆಗಾಗಿ ರಾಜ್ಯಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಚುನಾವಣೆ ಮತ್ತು ಉಪ ಚುನಾವಣೆ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಪ್ರತಿಯೊಂದು ಚುನಾವಣೆ ಸಂಬಂಧಿತ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಮತದಾನ ಉದ್ದೇಶಕ್ಕಾಗಿ ಕೊಠಡಿ, ಹಾಲ್, ಆವರಣ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಯಾನಿಂಗ್ ಮಾಡಬೇಕು, ಸ್ಯಾನಿಟೈಸರ್ , ಸೋಪ್ ಮತ್ತು ನೀರು ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಎಲ್ಲಾ ಸಂದರ್ಭದಲ್ಲಿ 2 ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಸಾಮಾಜಿಕ ಅಂತರ ನಿಯಮ ಕಾಯ್ದುಕೊಳ್ಳಲು ಅನುವಾಗುವಂತೆ ದೊಡ್ಡ ಹಾಲ್ ಗಳನ್ನು ಗುರುತಿಸಬೇಕು, ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು ಸೂಕ್ತ ವಾಹನಗಳ ವ್ಯವಸ್ಥೆ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೋವಿಡ್-19 ಸಂಬಂಧಿತ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ನೋಡಲ್ ಆರೋಗ್ಯ ಅಧಿಕಾರಿಯನ್ನು ನಿಯೋಜಿಸಬೇಕು, ಚುನಾವಣಾ ಸಿಬ್ಬಂದಿಗೆ ದೊಡ್ಡ ಹಾಲ್ ಗಳಲ್ಲಿ ತರಬೇತಿ ನೀಡಬೇಕು, ಒಂದೊಂದು ಮತಗಟ್ಟೆಗಳಲ್ಲಿ 1500 ಮತದಾರರ ಬದಲಿಗೆ ಗರಿಷ್ಠ 1 ಸಾವಿರ ಮತದಾರರು ಇರಬೇಕು ಎಂದು ಸೂಚಿಸಲಾಗಿದೆ.


Spread the love

Exit mobile version