Home Mangalorean News Kannada News ಕೋವಿಡ್ -19 ವೈರಾಣು ತಡೆಗಟ್ಟುವ ಕಾರ್ಯಪಡೆಯಲ್ಲಿ ಮಾಜಿ ಐಪಿಎಸ್ ​ಅಧಿಕಾರಿ ಅಣ್ಣಾಮಲೈ  

ಕೋವಿಡ್ -19 ವೈರಾಣು ತಡೆಗಟ್ಟುವ ಕಾರ್ಯಪಡೆಯಲ್ಲಿ ಮಾಜಿ ಐಪಿಎಸ್ ​ಅಧಿಕಾರಿ ಅಣ್ಣಾಮಲೈ  

Spread the love

ಕೋವಿಡ್ -19 ವೈರಾಣು ತಡೆಗಟ್ಟುವ ಕಾರ್ಯಪಡೆಯಲ್ಲಿ ಮಾಜಿ ಐಪಿಎಸ್ ​ಅಧಿಕಾರಿ ಅಣ್ಣಾಮಲೈ  

ಬೆಂಗಳೂರು: ಮಾಜಿ ಐಪಿಎಸ್ ​ಅಧಿಕಾರಿ ಅಣ್ಣಾಮಲೈ ಅವರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದು, ಸದ್ಯ ಅವರು ಕರ್ನಾಟಕದಲ್ಲಿ ಕೊರೊನಾ ವಿರುದ್ಧದ ಸಮರಕ್ಕೆ ಸನ್ನದ್ಧರಾಗಿದ್ದಾರೆ.

ಕೊರೊನಾ ಕುರಿತಾಗಿ ಸಲಹೆ ಸೂಚನೆ ನೀಡಲು ಉನ್ನತ ಶಿಕ್ಷಣ ಇಲಾಖೆ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಅಣ್ಣಾಮಲೈ ಅವರು ಸದಸ್ಯ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾನಿಲಯಗಳು, ಕಾಲೇಜು, ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜು/ಸಂಸ್ಥೆಗಳಲ್ಲಿ ಕೊವಿಡ್ -19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಉನ್ನತ ಶಿಕ್ಷಣ ಇಲಾಖೆಗೆ ಸಲಹೆ, ಸೂಚನೆ ನೀಡಲು ಸಮರ್ಥವಾದ ಕಾರ್ಯಪಡೆಯನ್ನು ರಚಿಸಲಾಗಿದೆ.

ಈ ಕಾರ್ಯಪಡೆಯ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್​ನ ಅಧ್ಯಕ್ಷರಾದ ಐಎಎಸ್​ ಅಧಿಕಾರಿ ಎಸ್.ವಿ. ರಂಗನಾಥ್ ಅವರು ನೇಮಕಗೊಂಡಿದ್ದು, ಇದರ ಸದಸ್ಯ ರಾಗಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿ ಐಪಿಎಸ್ ಗೋಪಾಲ್ ಹೊಸೂರ್ ಸೇರಿ ಒಟ್ಟು 8 ಮಂದಿ ಸದಸ್ಯರಿದ್ದಾರೆ ಆಯ್ಕೆಗೊಂಡಿದ್ದಾರೆ.

ಸದಸ್ಯರಾಗಿ ಐಪಿಎಸ್ ನಿವೃತ್ತ ಅಧಿಕಾರಿ ಗೋಪಾಲ್ ಬಿ.ಹೊಸೂರ್‌, ನಿವೃತ್ತ ಐಪಿಎಸ್ ಕೆ.ಅಣ್ಣಾಮಲೈ, ಐಎಎಸ್ ಅಧಿಕಾರಿಗಳಾದ ಅನಿರುದ್ದ ಶ್ರವಣ್, ಪ್ರದೀಪ್, ಎಚ್.ಯು.ತಳವಾರ್, ಪ್ರಶಾಂತ್ ಮಿಶ್ರ, ಕೆ.ಎಲ್. ಸುಬ್ರಮಣ್ಯ, ಡಾ.ಎಸ್‌.ಎ.ಕೋರಿ ಅವರನ್ನು ನೇಮಿಸಲಾಗಿದೆ.


Spread the love

Exit mobile version