Home Mangalorean News Kannada News ಕೋವಿಡ್-19: ಸಪ್ತಪದಿ ವಿವಾಹ ಕಾರ್ಯಕ್ರಮ ಮುಂದೂಡಿಕೆ

ಕೋವಿಡ್-19: ಸಪ್ತಪದಿ ವಿವಾಹ ಕಾರ್ಯಕ್ರಮ ಮುಂದೂಡಿಕೆ

Spread the love

ಕೋವಿಡ್-19: ಸಪ್ತಪದಿ ವಿವಾಹ ಕಾರ್ಯಕ್ರಮ ಮುಂದೂಡಿಕೆ

ಬೆಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಪ್ರಥಮ ಹಂತದಲ್ಲಿ ಏಪ್ರಿಲ್ 26ರಂದು ಆಯೋಜಿಸಿದ್ದ ಸಪ್ತಪದಿ-ಸರಳ ಸಾಮೂಹಿಕ ವಿವಾಹ ಮುಂದೂಡಿಕೆ ಮಾಡಲಾಗಿದೆ

ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಕಾಂಕ್ಷೆಯ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಲಾಖೆಯ ದೇವಸ್ಥಾನಗಳಲ್ಲಿ ಸುಮಾರು 4500ಕ್ಕೂ ಹೆಚ್ಚು ಅರ್ಜಿಗಳನ್ನು ಫಲಾನುಭವಿಗಳು ಪಡೆದಿದ್ದು ಸುಮಾರು 2000 ಸಾವಿರದಷ್ಟು ಅರ್ಜಿಗಳು ಅಧಿಕೃತ ದಾಖಲೆಗಳೊಂದಿಗೆ ವಾಪಾಸ್ಸು ಬಂದಿದೆ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿಚಾರ ಸಂಕೀರ್ಣದ ಸಭೆಗಳು ನಡೆದಿದ್ದು, ರಾಜ್ಯಾದಾದ್ಯಂತ ಸಪ್ತಪದಿ ರಥಗಳು ಕಾರ್ಯಕ್ರಮದ ಕುರಿತು ಪ್ರಚಾರ ನಡೆಸಿದ್ದವು. ಸಾಕಷ್ಟು ಪೂರ್ವ ಸಿದ್ದತೆಗಳೊಂದಿಗೆ ದಿನಾಂಕ ವಿವಾಹ ಕಾರ್ಯಕ್ರಮಕ್ಕೆ ಇಲಾಖೆ ಸಜ್ಜುಗೊಂಡಿತ್ತು.

ಆದರೆ ಕೋವಿಡ್-19ನ ಸಮಸ್ಯೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ಚರ್ಚಿಸಿ ಏಪ್ರಿಲ್ 26 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಎರಡನೇ ಹಂತದ ದಿನಾಂಕವಾದ ಮೇ 24ರಂದು ಜೋಡಿಸಿಕೊಳ್ಳುವ ಕುರಿತು ನಿರ್ಣಯಿಸಲಾಯಿತು. ಹಾಗೂ ಈ ಬಗ್ಗೆ ಮುಂದಿನ ದಿನದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದೂಡಿದ ದಿನಾಂಕವನ್ನು ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ ಪ್ರಕಟಿಸಲಾಗುವುದು.


Spread the love

Exit mobile version