Home Mangalorean News Kannada News ಕೋವಿಶೀಲ್ಡ್ ಬಳಿಕ ಈಗ ಕೋವ್ಯಾಕ್ಸಿನ್ನಲ್ಲೂ ಸೈಡ್ ಎಫೆಕ್ಟ್ ಪತ್ತೆ?

ಕೋವಿಶೀಲ್ಡ್ ಬಳಿಕ ಈಗ ಕೋವ್ಯಾಕ್ಸಿನ್ನಲ್ಲೂ ಸೈಡ್ ಎಫೆಕ್ಟ್ ಪತ್ತೆ?

Spread the love

ಕೋವಿಶೀಲ್ಡ್ ಬಳಿಕ ಈಗ ಕೋವ್ಯಾಕ್ಸಿನ್ನಲ್ಲೂ ಸೈಡ್ ಎಫೆಕ್ಟ್ ಪತ್ತೆ?

ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಅಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ ಎನ್ನಲಾಗಿದೆ.

ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಎನ್ನುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿಯಿಂದ ತಿಳಿದುಬಂದಿದೆ.

ಕೋವ್ಯಾಕ್ಸಿನ್ ಪಡೆದವರಲ್ಲಿ ಅಧ್ಯಯನಕ್ಕೊಳಪಡಿಸಿದ್ದ 926 ಮಂದಿಯ ಪೈಕಿ ಶೇ.50 ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಸಿರಾಟದಲ್ಲಿ ಸೋಂಕು, ಗಂಟಲು ಕೆರೆತ, ಮೂಗು ಸೋರುವಿಕೆ ಕೆಮ್ಮು ಲಕ್ಷಣ ಕಂಡು ಬಂದಿದೆ. ಇನ್ನೂ ಶೇ.1ರಷ್ಟು ಪ್ರಕರಣಗಳಲ್ಲಿ ಪಾಶ್ವವಾಯು, ಗುಲ್ಲೈನ್ ಬರ್ರೆ ಸಿಂಡ್ರೋಮ್ (ನರ ಸಂಬಂಧಿತ ಆರೋಗ್ಯ ಸಮಸ್ಯೆ) ಕಂಡು ಬಂದಿದೆ ಎಂದು ಸ್ಟ್ರಿಂಜರ್ ನೇಚರ್ ಜರ್ನಲ್ ತನ್ನ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿಸಿದ ಅಸ್ವಸ್ಥತೆ ಮತ್ತು ಸಾಮಾನ್ಯ ಅಸ್ವಸ್ಥತೆ ಕಂಡುಬಂದಿದೆ. ಈ ಮೂರು ಅಸ್ವಸ್ಥತೆಗಳು ಶೇ 30ರಷ್ಟು ಜನರಲ್ಲಿ ಕಂಡುಬಂದಿದೆ ಎಂದು 2022ರ ಜನವರಿಯಿಂದ 2023ರ ಆಗಸ್ಟ್ವರೆಗೆ ಕೋವ್ಯಾಕ್ಸಿನ್ ಪಡೆದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗೊತ್ತಾಗಿದೆ. ಇನ್ನು 635 ಮಂದಿ ಹದಿ ಹರೆಯದವರು, 291 ಮಂದಿ ವಯಸ್ಕರನ್ನು ಈ ಅಧ್ಯಯನಕ್ಕೊಳಪಡಿಸಿದೆ.

ತಮ್ಮ ಸಂಸ್ಥೆ ಸಿದ್ಧಪಡಿಸಿರುವ ಕೋವಿಶೀಲ್ಡ್ ಲಸಿಕೆಯು ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೆಟ್ ಕಡಿಮೆಯಾಗುವಂತೆಹ ಅಡ್ಡ ಪರಿಣಾಮ ಸೃಷ್ಟಿಸುತ್ತದೆ ಎಂದು ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ಹೆಚ್ಚು ಜನರಿಗೆ ನೀಡಲಾಗಿರುವ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡಪರಿಣಾಮ ಕುರಿತಂತೆ ಅಧ್ಯಯನದ ವರದಿ ಬಂದಿದ್ದು, ಮತ್ತುಷ್ಟ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಕಾಲದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮಾಡಿತ್ತು. ಕೋವ್ಯಾಕ್ಸಿನ್ ಲಸಿಕೆಗೆ ಅತ್ಯುತ್ತಮವಾದ ಸುರಕ್ಷತೆಯ ಟ್ರ್ಯಾಕ್ ರೆಕಾರ್ಡ್ ಇದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿತ್ತು. ಆದ್ರೀಗ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ವರದಿ ಆತಂಕಕ್ಕೆ ಕಾರಣವಾಗಿದೆ.


Spread the love

Exit mobile version