Home Mangalorean News Kannada News ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ

ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ

Spread the love

ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ

ಮಂಗಳೂರು :ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಹಾಗೂ ಸಿಡಾಕ್ ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಆಯ್ದ 40 ಮಂದಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಜರುಗಿದ 7 ದಿನಗಳ ವಸತಿ ಸಹಿತ ಕೌಶಲ್ಯಾ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ ನಗರದ ಸಿ.ಒ.ಡಿ.ಪಿ ಸಭಾಂಗಣದಲ್ಲಿ ನರೆವೇರಿತು.

ಅಧ್ಯಕ್ಷತೆ ವಹಿಸಿದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ತಮಗೆ ಈ ಶಿಬಿರದಲ್ಲಿ ದೊರಕಿರುವವರ ಕೌಶಲ್ಯವನ್ನು ಮೈಗೂಡಿಸಿಕೊಂಡು ಶ್ರೇಷ್ಠ ಮಟ್ಟದ ಉದ್ಯಮಿಗಳಾಗಿ ಮೂಡಿ ಬಂದು ಆರ್ಥಿಕ ಸ್ವಾತಂತ್ರ್ಯಾವನ್ನು ಗಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಿ.ಒ.ಡಿ.ಪಿ ಸಂಸ್ಥೆಯ ಆಡಳಿತ ನಿರ್ದೇಶಕ ಫಾ|| ಓಸ್ವಾಲ್ಡ್ ಮೊಂತೆರೋ ಮಾತನಾಡಿ, ಶಿಸ್ತು, ದಕ್ಷತೆ ಹಾಗೂ ಪ್ರಮಾಣಿಕತೆಯನ್ನು ಮೈಗೂಡಿಸಿಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಮೂಲಕ ಮಾದರಿ ಉದ್ಯಮಿಗಳಾಗಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಹಿರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಅನಿತಾ ಮಡ್ಲೂರು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಿದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಕೌಶಲ್ಯಾಧಿಕಾರಿ ತಾರಾನಾಥ ಸರಕಾರದಿಂದ ದೊರೆಯುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಿಡಾಕ್‍ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಸ್ವಾಗತಿಸಿದರು.

ಸಿಡಾಕ್‍ನ ಉಡುಪಿ ಕೇಂದ್ರ ವ್ಯವಸ್ಥಾಪಕರಾದ ಪ್ರಥ್ವಿರಾಜ್ ನಾಯಕ್ ವಂದಿಸಿದರು. ಮಂಗಳೂರಿನ ಕೇಂದ್ರ ವ್ಯವಸ್ಥಾಪಕ ವಿನಾಯಕ್ ಪ್ರಭು ನಿರೂಪಿಸಿದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಮಂಡಿಸಿದರು.


Spread the love

Exit mobile version