ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ “ಡ್ರಗ್ಸ್ ದಿ ಕಿಲ್ಲರ್” ಅಭಿಯಾನ
ಮಂಗಳೂರು : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ತಾಲೂಕು ವತಿಯಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನವಾದ “ಡ್ರಗ್ಸ್ ದಿ ಕಿಲ್ಲರ್” ಇದರ ಉಧ್ಘಾಟನಾ ಸಮಾರಂಭವು ಉಳ್ಳಾಲದ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಂತಹ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ತಫ್ಸೀರ್ ಮಾತನಾಡಿ ಯುವ ಮತ್ತು ವಿದ್ಯಾರ್ಥಿ ಪೀಳಿಗೆಯು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ವಿರೋಧಿ ಹೋರಾಟಗಾರರಾದ ಫಾರೂಕ್ ಉಳ್ಳಾಲ ಮಾತನಾಡಿ ಉಳ್ಳಾಲದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನಕ್ಕೆ, ವಿರೋಧಿ ಚಳುವಳಿಯನ್ನು ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ಟ್ಯಾಲೆಂಟ್ ರಿಸರ್ಚ ಫೌಂಡೇಶನ್‍ನ ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್ ಯು.ಬಿ ಈ ರೀತಿಯ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮಗಳು-ಅಭಿಯಾನಗಳು ಹೆಚ್ಚಿನ ಸಂಖ್ಯೆಯಲ್ಲಿನಡೆಸಬೇಕೆಂದು ಸಲಹೆ ನೀಡಿದರು.
ಸಮಾರಂಭದ ಕೊನೆಗೆ ಜಿಲ್ಲಾದ್ಯಕ್ಷರಾದ ಅಥಾವುಲ್ಲಾ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಮೇಲಂಗಡಿ ಜುಮಾ ಮಸೀದಿಯ ಗುರುಗಲಾದ ಯೂಸುಫ್ ಮಿಸ್ಬಾಇ , ಜಿಲ್ಲಾ ಪ್ರ.ಕಾರ್ಯದರ್ಶಿ ಇಮ್ರಾನ್, ಉದ್ಯಮಿಗಳಾದ ನೌಷಾದ್ ಕಿನ್ಯಾ, ಹಾಗೂ ಸಾಮಾಜಿಕ ಹೋರಾಟಗಾರ ರವೂಫ್ ಉಳ್ಳಾಲ್ ಉಪಸ್ಥಿತರಿದ್ದರು. ಮುಶ್ರಫ್ ಉಳ್ಳಾಲ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.