Home Mangalorean News Kannada News ಕ್ರೀಡಾಶಾಲೆ ಮತ್ತು ಕ್ರೀಡಾವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಕ್ರೀಡಾಶಾಲೆ ಮತ್ತು ಕ್ರೀಡಾವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

Spread the love

ಕ್ರೀಡಾಶಾಲೆ ಮತ್ತು ಕ್ರೀಡಾವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಮಂಗಳೂರು :ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾಶಾಲೆ ಮತ್ತು ಕ್ರೀಡಾವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಜನವರಿ 16ರಂದು ಪೂರ್ವಾಹ್ನ 10 ಗಂಟೆಗೆ ಮಂಗಳಾ ಕ್ರೀಡಾಂಗಣ ಮಂಗಳೂರು ಹಾಗೂ ಜನವರಿ 17ರಂದು ಪೂರ್ವಾಹ್ನ 10 ಗಂಟೆಗೆ ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಪುತ್ತೂರು ಇಲ್ಲಿ ನಡೆಯುವುದು. ಜನವರಿ 18 ರಂದು ಪೂರ್ವಾಹ್ನ 10 ಗಂಟೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ, ಜನವರಿ 19 ರಂದು ಪೂರ್ವಾಹ್ನ 10 ಗಂಟೆಗೆ ಸರಕಾರಿ ಪ್ರೌಢಶಾಲೆ ಪುಂಜಾಲಕಟ್ಟೆ ಬೆಳ್ತಂಗಡಿ, ಹಾಗೂ ಜನವರಿ 21 ರಂದು ಪೂರ್ವಾಹ್ನ 10 ಗಂಟೆಗೆ ಸರಕಾರಿ ವಿಠಲ ಪ್ರೌಢಶಾಲೆ ವಿಟ್ಲ ಬಂಟ್ವಾಳ ತಾಲೂಕಿನಲ್ಲಿ ನಡೆಯಲಿದೆ.

ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ ಕ್ರೀಡಾಶಾಲೆಗೆ ಆಯ್ಕೆ ಬಯಸುವ ಕಿರಿಯ ವಿಭಾಗದ ಕ್ರೀಡಾಪಟುಗಳು ಜೂನ್ ತಿಂಗಳಿನಲ್ಲಿ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, 14 ವರ್ಷ ಒಳಗಿನವರಾಗಿರಬೇಕು. ಆಯ್ಕೆಯು ಜನವರಿ 22 ಮತ್ತು 23 ರಂದು ಮಂಗಳಾ ಕ್ರೀಡಾಂಗಣ ಮಂಗಳೂರು ಹಾಗೂ ಜನವರಿ 28 ಮತ್ತು 29 ರಂದು ಜಿಲ್ಲಾ ಕ್ರೀಡಾಂಗಣ ಹಾಸನದಲ್ಲಿ ನಡೆಯಲಿದೆ. ಹಿರಿಯ ವಿಭಾಗದ ಕ್ರೀಡಾಪಡುಗಳು ಜೂನ್ ತಿಂಗಳಿನಲ್ಲಿ ಪಿಯುಸಿ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, 18 ವರ್ಷ ಒಳಗಿನವರಾಗಿರಬೇಕು. ಆಯ್ಕೆ ಫೆಬ್ರವರಿ 22 ಮತ್ತು 23 ರಂದು ಮಂಗಳಾ ಕ್ರೀಡಾಂಗಣ ಮಂಗಳೂರು ಹಾಗೂ ಜನವರಿ 28ಮತ್ತು 29 ರಂದು ಜಿಲ್ಲಾ ಕ್ರೀಡಾಂಗಣ ಹಾಸನದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಂಗಳೂರು ತಾಲೂಕು ಲಿಲ್ಲಿ ಪಾಯಸ್ -9481016542, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಬಂಟ್ವಾಳ ತಾಲೂಕು-ಪಿ. ಎಸ್ ನವೀನ್ 9740365154, ಮಮಚ್ಚನ್ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪುತ್ತೂರು , ಮಮಚ್ಚನ್ -9611474973, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಸುಳ್ಯ ತಾಲೂಕು, ದೆವರಾಜ್ ಮುತ್ಲಾಜೆ -9448548449, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಬೆಳ್ತಂಗಡಿ ತಾಲೂಕು ಪ್ರಭಾಕರ್ ನಾರಾವಿ -9449914186 ಇವರನ್ನು ಸಂಪರ್ಕಿಸಲು ಉಪನಿರ್ದೇಶಕರು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version