Home Mangalorean News Kannada News ಕ್ವಾರಂಟೇನ್ ನಲ್ಲಿರುವವರು ಹೊರಗಡೆ ಬಂದು ಓಡಾಡಿದರೆ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ ಜಗದೀಶ್ ಎಚ್ಚರಿಕೆ

ಕ್ವಾರಂಟೇನ್ ನಲ್ಲಿರುವವರು ಹೊರಗಡೆ ಬಂದು ಓಡಾಡಿದರೆ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ ಜಗದೀಶ್ ಎಚ್ಚರಿಕೆ

Spread the love

ಕ್ವಾರಂಟೇನ್ ನಲ್ಲಿರುವವರು ಹೊರಗಡೆ ಬಂದು ಓಡಾಡಿದರೆ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ ಜಗದೀಶ್ ಎಚ್ಚರಿಕೆ

ಉಡುಪಿ : ಹೊರದೇಶ -ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿ ಇರುವವರು ಕೇಂದ್ರ ಬಿಟ್ಟು ಹೊರಗಡೆ ತಿರುಗಾಟ ನಡೆಸಿದರೆ ಅಂತಹ ವಿರುದ್ದ ಯಾವುದೇ ಮುಲಾಜಿಲ್ಲದೆ ಸೆಕ್ಷನ್ 188 ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ಅವರು ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದು ಹೊರದೇಶ -ರಾಜ್ಯಗಳಿಂದ ಆರು ಸಾವಿರ ಮಂದಿ ಉಡುಪಿಗೆ ಬಂದಿದ್ದು, ಎಲ್ಲರನ್ನೂ ಜಿಲ್ಲೆಗೆ ಸ್ವಾಗತ ಮಾಡಿ ಕ್ವಾರಂಟೈನ್ ಮಾಡಿದ್ದೇವೆ. ಕ್ವಾರಂಟೈನ್ ನಲ್ಲಿರುವವರು ಹೊರಗಡೆ ಓಡಾಡುತ್ತಿದ್ದಾರೆ ಎಂಬ ದೂರು ಬಂದಿದೆ. ಹೋಟೆಲ್, ಹಾಸ್ಟೆಲ್ ಶಾಲೆಗಳಿಂದ ಹೊರಬರುತ್ತಿದ್ದಾರೆ ಎಂಬ ಮಾಹಿತಿಯಿದೆ. ಕ್ವಾರಂಟೈನ್ ನಲ್ಲಿರುವವರು ಓಡಾಡುವುದು ಎಪಿಡೆಮಿಕ್ Act ಗೆ ವಿರುದ್ಧವಾಗಿದ್ದು ಅಂತಹವ ಯಾರಾದರು ಓಡಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಮತ್ತು ಸೆಕ್ಷನ್ 188 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.

ಉಡುಪಿ ಜಿಲ್ಲಾಡಳಿತ ನಿಮಗೆ ಜಿಲ್ಲಾ ಪ್ರವೇಶಕ್ಕೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಆದರೆ ನನಿಮ್ಮಿಂದಾಗಿ ಉಡುಪಿಯ ಜನರಿಗೆ ರೋಗ ಹರಡಬಾರದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.


Spread the love

Exit mobile version