Home Mangalorean News Kannada News ಕ್ವಾರಂಟೈನ್ ನಲ್ಲಿರುವವರು ಬ್ರ್ಯಾಂಡೆಡ್ ವಸ್ತುಗಳಿಗೆ ಬೇಡಿಕೆ ಬಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಂಡು ವರ್ತಿಸಿ – ಡಿಸಿ...

ಕ್ವಾರಂಟೈನ್ ನಲ್ಲಿರುವವರು ಬ್ರ್ಯಾಂಡೆಡ್ ವಸ್ತುಗಳಿಗೆ ಬೇಡಿಕೆ ಬಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಂಡು ವರ್ತಿಸಿ – ಡಿಸಿ ಜಗದೀಶ್

Spread the love

ಕ್ವಾರಂಟೈನ್ ನಲ್ಲಿರುವವರು ಬ್ರ್ಯಾಂಡೆಡ್ ವಸ್ತುಗಳಿಗೆ ಬೇಡಿಕೆ ಬಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಂಡು ವರ್ತಿಸಿ – ಡಿಸಿ ಜಗದೀಶ್

ಉಡುಪಿ: ಜಿಲ್ಲಾಡಳಿತದ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಬ್ರ್ಯಾಂಡೆಡ್ ವಸ್ತುಗಳಿಗೆ ಬೇಡಿಕೆ ಇಡುವುದನ್ನು ಬಿಟ್ಟು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸಿ ಎಂದು ಜಿಲ್ಲಾಧಿಕಾರು ಜಿ ಜಗದೀಶ್ ಸೂಚನೆ ನೀಡಿದ್ದಾರೆ.

ಉಡುಪಿಯಲ್ಲಿ ಕ್ವಾರಂಟೈನ್ ನಲ್ಲಿರುವ ಕುಟುಂಬಗಳು ಬ್ರಾಂಡೆಡ್ ವಸ್ತುಗಳಿಗೆ ಬೇಡಿಕೆ ಇಡುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಇದು ಬ್ರ್ಯಾಂಡನ್ನು ನೋಡುವಂಥ ಕಾಲ ಅಲ್ಲ ಆದರೆ ಜೀವವನ್ನು ಉಳಿಸಿಕೊಳ್ಳುವಂತಹ ಸಮಯ. ಬ್ರ್ಯಾಂಡೆಡ್ ವಸ್ತುಗಳನ್ನು ಯಾರೂ ಕೇಳಬಾರದು ಅಲ್ಲದೆ ನಿಮಗೆ ವಸ್ತುಗಳನ್ನು ತಂದು ಕೊಡೋದೆ ದೊಡ್ಡದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸಿ ಎಂದು ಅವರು ಸೂಚನೆ ನೀಡಿದ್ದಾರೆ.

ವಿದೇಶದಿಂದ ಆಗಮಿಸಿ ಜಿಲ್ಲಾಡಳಿತದ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಆಶಾ ಕಾರ್ಯಕರ್ತೆಯರಲ್ಲಿ ಬ್ರ್ಯಾಂಡೆಡ್ ಐಟಂಗಳನ್ನ ಕೇಳಿ ಕಿರಿಕಿರಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳು ಬ್ರ್ಯಾಂಡೆಡ್ ಮಾಸ್ಕ್, ಸ್ಯಾನಿಟೈಸರ್, ಬ್ರ್ಯಾಂಡೆಡ್ ಸೋಪ್, ದಿನಸಿಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.


Spread the love

Exit mobile version