ಕ್ವಾರಂಟೈನ್ ನಿಯಮಾವಳಿ ಸಡಿಲಿಕೆ ; ಮನೆಗೆ ತೆರಳುವ ಮೊದಲೇ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢ!

Spread the love

ಕ್ವಾರಂಟೈನ್ ನಿಯಮಾವಳಿ ಸಡಿಲಿಕೆ ; ಮನೆಗೆ ತೆರಳುವ ಮೊದಲೇ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢ!

ಉಡುಪಿ: ಕ್ವಾರಂಟೈನ್ ನಿಯಮಾವಳಿ ಸಡಿಲಿಕೆಯ ಕಾರಣ ಮನೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆಗೆ ತಲುಪುವ ಮೊದಲೇ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟ ಹಿನ್ನಲೆಯಲ್ಲಿ ಆತನನ್ನು ವಾಪಾಸು ಕರೆಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಬರೋಬ್ಬರಿ 15 ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು ಎಲ್ಲರೂ ಕೂಡ ಮಹಾರಾಷ್ಟ್ರದಿಂದ ವಾಪಾಸಾದವರಾಗಿದ್ದಾರೆ. ಇದರಲ್ಲಿ ಕುಂದಾಪುರದ ಒರ್ವರು ರಾಜ್ಯ ಸರಕಾರದ ಸೂಚನೆಯಂತೆ ಕ್ವಾರಂಟೈನ್ ನಿಯಮಾವಳಿ ಸಡಿಲಿಕೆಯಾದ ಕಾರಣ ಮನೆಗೆ ತೆರಳಿದ್ದು ಅವರು ಮನೆಗೆ ತೆರಳುವ ಮೊದಲೇ ಪಾಸಿಟಿವ್ ಎಂದು ತಿಳಿದು ಬಂದಿದ್ದು, ತಕ್ಷಣ ಆಸ್ಪತ್ರೆಗೆ ವಾಪಾಸು ಕರೆಸಿಕೊಳ್ಳಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

ಅದರಲ್ಲೂ ಶುಕ್ರವಾರ ಪಾಸಿಟಿವ್ ಬಂದವರ ಒಬ್ಬೊಬ್ರ ಕರುಣಾಜನಕ ಕಥೆ ಬೇರೆ ಬೇರೆ ಇದೆ. ಅದರಲ್ಲಿ ಎಂಟು ವರ್ಷದ ಸೋಂಕಿತ ಮಗುವಿನ ತಾಯಿಗೂ ಸಹ ನೋವೆಲ್ ಕೊರೋನಾ ಸೋಂಕ ದೃಢಪಟ್ಟಿದೆ. ಎಂಟು ವರ್ಷದ ಮಗುವಿಗೆ ಕೆಲದಿನದ ಹಿಂದೆ ಕೋವಿಡ್ -19 ಪತ್ತೆಯಾಗಿದ್ದು ನಗರದ ಕೋವಿಡ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಮಗುವನ್ನು ನೋಡಿಕೊಳ್ಳುವ ಸಲುವಾಗಿ ತಾಯಿ ಆಸ್ಪತ್ರೆಯಲ್ಲಿದ್ದು ಈಗ ಮಗುವಿನ 35 ವರ್ಷದ ತಾಯಿಗೂ ಕೂಡ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


Spread the love