‘ಕ್ಷಮತಾ ಅಕಾಡೆಮಿ’ ಶಿಬಿರದ ಉದ್ಘಾಟನಾ ಸಮಾರಂಭ
ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ವತಿಯಿಂದ ತಾಂತ್ರಿಕ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಲಿದ್ದು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ “ಕ್ಷಮತಾ ಅಕಾಡೆಮಿ” ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಏರ್ಪಡಿಸಲಾಗುತ್ತದೆ. “ಕ್ಷಮತಾ ಅಕಾಡೆಮಿ” 127 ನೇ ಶಿಬಿರ ಉದ್ಘಾಟನಾ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ದಂಡಾಧಿಕಾರಿ ಕುಮಾರ ಕೆ. ಎ. ಎಸ್. ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶ್ರೀ ಕುಮಾರ್‍ರವರು ಮಾತನಾಡುತ್ತಾ “ಕ್ಷಮತಾ” ಶಿಬಿರದ ಸದುಪಯೋಗ ಹಾಗೂ ಕಾರ್ಯನಿರ್ವಹಣೆ ಮತ್ತು ಸಂವಹನ ನೈಪುಣ್ಯ ಮುಂತಾದ ವಿಷಯಗಳಲ್ಲಿ ತಿಳುವಳಿಕೆ ನೀಡಿದರು ಹಾಗೂ ಮಾನಸಿಕ ಭಾವನೆಗಳು ಜೀವನದಲ್ಲಿ ಮುಖ್ಯವಾದ ವಿಷಯವಾಗಿದ್ದು ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಪ್ರಾಮಾಣಿಕತೆಯಿಂದ ಜೀವನ ಸಾಗಿಸುವಂತಾಗಬೇಕು ಎಂದು ನೀತಿಯುಕ್ತವಾದ ಸಲಹೆಗಳನ್ನು ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷೆ ಗೀತಾ ಸಿ. ಕಿಣಿ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು, ಶಿಬಿರ ಸಂಚಾಲಕ ಸಿ. ಎ. ಗಿರಿಧರ ಕಾಮತ್, ಸದಸ್ಯ ಉಳ್ಳಾಲ ರಾಘವೇಂದ್ರ ಕಿಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.